ಚಿಕ್ಕಮಗಳೂರು : 6 ತಿಂಗಳಿಂದಲೂ ಮುಚ್ಚಿದ ಉಸ್ತುವಾರಿ ಸಚಿವರ ಕಚೇರಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರ ಕಚೇರಿ ಇದ್ದರೂ ಇಲ್ಲದಂತಾಗಿದೆ. ಕಳೆದ 6 ತಿಂಗಳಿನಿಂದಲೂ ಕೂಡ ಇಲ್ಲಿನ ಉಸ್ತುವಾರಿ ಸಚಿವರ ಕಚೇರಿ ಬಾಗಿಲು ಮುಚ್ಚಿದೆ.
ಚಿಕ್ಕಮಗಳೂರು [ಜ.14]: ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರ ಕಚೇರಿಗೆ ಸಮಸ್ಯೆ ಹೇಳಿಕೊಳ್ಳಲು ಬರುವ ಜನ ಮುಚ್ಚಿದ ಬಾಗಿಲು ನೋಡಿಕೊಂಡು ವಾಒಸ್ ಹೋಗುವ ಪರಿಸ್ಥಿತಿ ಇದೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲೇ ಉಸ್ತುವಾರಿ ಸಚಿವ ಸಿಟಿ ರವಿ ಅವರ ಕಚೇರಿಯೂ ಇದ್ದು, ಕಳೆದ ಐದಾರು ತಿಂಗಳಿನಿಂದಲೂ ಕೂಡ ಕಚೇರಿಯ ಬಾಗಿಲು ಬಂದ್ ಆಗಿದೆ.
ಜಿಲ್ಲಾ ಉಸ್ತುವಾರಿ ಸಚಿವರನ್ನು ನಿಯೋಜನೆ ಮಾಡಿ 6 ತಿಂಗಳುಗಳೇ ಕಳೆದಿದೆ. ಆದರೆ ಇಲ್ಲಿ ಉಸ್ತುವಾರಿ ಸಚಿವರು ಇದ್ದರೂ ಇಲ್ಲದಂತಾಗಿದೆ. ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಕೂಡ ಇಲ್ಲಿ ಕಚೇರಿ ಬಾಗಿಲು ಮುಚ್ಚಿದ್ದು ತೆರೆದಿಲ್ಲ.
ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇದ್ದ ಸಂದರ್ಭದಲ್ಲಿ ಕೆ.ಜೆ ಜಾರ್ಜ್ ಅವರು ಉಸ್ತುವಾರಿ ಸಚಿವರಾಗಿದ್ದರು. ಈ ವೇಳೆ ಚಿಕ್ಕಮಗಳೂರಿನಲ್ಲಿ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆ ಆಗಿತ್ತು.
ಆದರೆ ನೂತನ ಸಚಿವರಾದ ಸಿ.ಟಿ ರವಿ ಅವರಿಗೆ ಅಧಿಕೃತ ಕಚೇರಿ ಇಲ್ಲದೇ ಹಳೆಯ ಕಚೇರಿಯ ಮುಚ್ಚಿದ ಬಾಗಿಲು ನೋಡಿಕೊಂಡು ವಾಪಸ್ ತೆರಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಮಸ್ಯೆ ಕೇಳಲು ಸಚಿವರಿಲ್ಲದಂತಾಗಿದೆ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.