Chikkaballapur: ಜನರ ಸಮಸ್ಯೆ ಆಲಿಸಲು ತನ್ನದೇ ಹೆಸರಿನಲ್ಲಿ ವೆಬ್‌ಸೈಟ್‌ ಆರಂಭಿಸಿದ ಶಾಸಕ ಪ್ರದೀಪ್ ಈಶ್ವರ್‌

ಕ್ಷೇತ್ರದ ಶಾಸಕ ಪ್ರದೀಪ್‌ ಈಶ್ವರ್‌, ಶನಿವಾರ ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ಶ್ರೀ ಸಿಯಾರಾ ಹೋಟೆಲ್‌ನಲ್ಲಿ ಡಬ್ಲ್ಯು ಡಬ್ಲ್ಯು ಡಬ್ಲ್ಯು.ಪ್ರದೀಪ್‌ ಈಶ್ವರ್‌ಎಂಎಲ್‌ಎ .ಕಾಂ ಹೆಸರಿನ ವೆಬ್‌ ಸೈಟ್‌ ಆರಂಭಿಸಿದ್ದಾರೆ. 

chikkaballapur mla pradeep eshwar launched a new website gvd

ಚಿಕ್ಕಬಳ್ಳಾಪುರ (ಜು.09): ಕ್ಷೇತ್ರದ ಶಾಸಕ ಪ್ರದೀಪ್‌ ಈಶ್ವರ್‌, ಶನಿವಾರ ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ಶ್ರೀ ಸಿಯಾರಾ ಹೋಟೆಲ್‌ನಲ್ಲಿ ಡಬ್ಲ್ಯು ಡಬ್ಲ್ಯು ಡಬ್ಲ್ಯು.ಪ್ರದೀಪ್‌ ಈಶ್ವರ್‌ಎಂಎಲ್‌ಎ .ಕಾಂ ಹೆಸರಿನ ವೆಬ್‌ ಸೈಟ್‌ ಆರಂಭಿಸಿದ್ದಾರೆ. ವೆಬ್‌ ಸೈಟ್‌ ಆರಂಭಿಸಿ ಮಾತನಾಡಿದ ಶಾಸಕರು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ವೆಬ್‌ಸೈಟ್‌ ಆರಂಭಿಸಿದ್ದೇನೆ. ಕ್ಷೇತ್ರದ ಜನ ತಮ್ಮ ಸಮಸ್ಯೆಗಳನ್ನು ನೇರವಾಗಿ ಬಂದು ಹೇಳಿಕೊಳ್ಳಲು, ದೂರು ನೀಡಲು ತಮ್ಮನ್ನು ಭೇಟಿ ಮಾಡುವ ಅಗತ್ಯವಿಲ್ಲ, ಜನರು ತಮ್ಮ ಸಮಸ್ಯೆಗಳನ್ನು ಈ ವೆಬ್‌ ಸೈಟ್‌ ಮೂಲಕ ತಿಳಿಸಬಹುದು ಎಂದರು.

ವೆಬ್‌ಗೆ 100 ಮಂದಿ ನೇಮಕ: ಜನ ತಮ್ಮ ಮೊಬೈಲ್‌ ಮೂಲಕವೇ ತಮ್ಮ ಸಮಸ್ಯೆಗಳಿಗೆ ದೂರು ಹೇಳಿಕೊಳ್ಳಲು ವೆಬ್‌ಸೈಟ್‌ನಲ್ಲಿ ಬಲಗಡೆ ದೂರು, ಸಲಹೆಗಳು ಎಂಬ ವಿಭಾಗಗಳಿದ್ದು, ಅದರ ಮೇಲೆ ಕ್ಲಿಕ್‌ ಮಾಡಿದರೆ, ಕಂಪ್ಲೇಂಟ್‌ ಬಾಕ್ಸ್‌ ತೆರೆಯುತ್ತದೆ. ಜನ ಅಲ್ಲಿ ತಮ್ಮ ಅಭಿಪ್ರಾಯ ಅಥವಾ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ದೂರು ನೀಡುವ ಜನರ ಮೊಬೈಲ್‌ ನಂಬರ್‌ಗೆ ಕರೆ ಮಾಡಿ ಸ್ಪಂದಿಸಲು ನೂರು ಮಂದಿ ಸಿಬ್ಬಂದಿಯನ್ನ ನೇಮಕ ಮಾಡಿ ಕಚೇರಿ ಸಹ ತೆರೆಯಲಾಗಿದೆ. ದಿನದ 24 ಗಂಟೆಗಳ ಕಾಲ ಸಿಬ್ಬಂದಿ ಜನರಿಗೆ ಸ್ಪಂದಿಸಲಿದ್ದಾರೆ ಎಂದರು.

ಮನೆಯಲ್ಲಿ ಹಿಟ್ಟಿಲ್ಲದ ಹೊತ್ತಲ್ಲಿ ಜಾನಪದ ಕಲಿತೆ: 'ಅನ್ಯಾಯಕಾರಿ ಬ್ರಹ್ಮ' ಖ್ಯಾತಿಯ ಗಾಯಕ ಮಹ​ದೇ​ವ​ಸ್ವಾ​ಮಿ

ವಿದ್ಯಾರ್ಥಿಗಳಿಗೆ ಶಿಷ್ಯ ವೇತನ: ಈಗಾಗಲೆ ಘೋಷಿಸಿರುವಂತೆ ತಮ್ಮ ಸ್ವಂತ ಹಣದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ 1000ರೂ ಸ್ಕಾಲರ್‌ಶಿಪ್‌ ನೀಡಿದ್ದು, ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 1000 ಸಾವಿರ ರು.ಗಳ ಶಿಷ್ಯ ವೇತನವನ್ನು ಶೀಘ್ರದಲ್ಲೆ ನೀಡಲಾಗುವುದು. ವಿದ್ಯಾಭ್ಯಾಸ ಮಾಡುತ್ತಿರುವ ಆಟೋ ಚಾಲಕರ ಮಕ್ಕಳಿಗೆ 10,000 ನೀಡುವುದಾಗಿ ಭರವಸೆ ನೀಡಿದರು.

ಡಾ.ಸುಧಾಕರ್‌ಗೆ ಪ್ರತಿ ಸವಾಲು: ಮಾಜಿ ಸಚಿವ ಡಾ.ಕೆ.ಸುಧಾಕರ್‌ ಅಧಿಕಾರದಲ್ಲಿದ್ದಾಗ ವಿತರಿಸಿದ ನಿವೇಶನ ಪತ್ರಗಳು ನಕಲಿ ಎಂದು ಆರೋಪಿಸಿದ್ದ ಶಾಸಕ ಪ್ರದೀಪ್‌ ಈಶ್ವರ್‌ ಇದನ್ನು ಆಣೆ ಪ್ರಮಾಣ ಮಾಇಡಿ ಹೇಳಿವಂತೆ ಸುಧಾಕರ್‌ ಸವಾಲು ಹಾಕಿದ್ದರು. ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸದೆ, ಕೋವಿಡ್‌ ನಿರ್ವಹಣೆಯಲ್ಲಿ ಹಗರಣ ಆಗಿಲ್ಲವೆಂದು ಡಾ.ಸುಧಾಕರ್‌ ಪ್ರಮಾಣ ಮಾಡಲಿ ಎಂದ ಪ್ರದೀಪ್‌ ಈಶ್ವರ್‌ ಪ್ರತಿ ಸವಾಲು ಹಾಕಿದರು.

ಮೊಬೈಲ್ ಟವರ್ ಮೇಲೆ ಹತ್ತಿ ಯುವಕನ ಹುಚ್ಚಾಟ: ಮದ್ಯ, ಗುಟ್ಕಾ ಪ್ಯಾಕೆಟ್ ಕಂಡೊಡನೆ ಸರಸರ ಕೆಳಗಿಳಿದ!

ವೆಬ್‌ ಸೈಟ್‌ ಬಿಡುಗಡೆ ಸಮಾರಂಭದಲ್ಲಿ ನಗರಸಭಾ ಸದಸ್ಯ ಕಣಿತಹಳ್ಳಿ ವೆಂಕಟೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಯರಾಂ,ಇಂಟೆಕ್‌ ಜಿಲ್ಲಾಧ್ಯಕ್ಷ ಎಂ.ರಾಮಪ್ಪ ಮುಖಂಡರಾದ ಕೆ.ಎಲ್‌.ಶ್ರೀನಿವಾಸ್‌, ನಾಯನಹಳ್ಳಿ ನಾರಾಯಣಸ್ವಾಮಿ, ಯಲುವಹಳ್ಳಿ ಜನಾರ್ದನ್‌, ಡ್ಯಾನ್ಸ್‌ ಶ್ರೀನಿವಾಸ್‌, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಸ್ಲಂ ಪಾಷ ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios