Asianet Suvarna News Asianet Suvarna News

Ballari Utsav: ಜನವರಿ.4ರಂದು ಬಳ್ಳಾರಿಗೆ ಮುಖ್ಯಮಂತ್ರಿ ಬೊಮ್ಮಯಿ

  • ಜನವರಿ.4ರಂದು ಬಳ್ಳಾರಿಗೆ ಮುಖ್ಯಮಂತ್ರಿ ಬೊಮ್ಮಯಿ
  • ರೂ.500 ಕೋಟಿ ವಿವಿಧ ಕಾಮಗಾರಿಗಳಿಗೆ ಚಾಲನೆ
  • ಮೊದಲ ಬಾರಿಗೆ ಬಳ್ಳಾರಿ ಉತ್ಸವ ಆಯೋಜನೆ
Chief Minister Basavaraj bommai to Bellary on January 4 rav
Author
First Published Dec 30, 2022, 12:05 PM IST

ವರದಿ ; ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಡಿ.30) : ಹೊಸ ವರ್ಷದ ಸಂಭ್ರಮದಲ್ಲಿರೋ ಬಳ್ಳಾರಿ ಜಿಲ್ಲೆಯ ಜನರಿಗೆ  ಸರ್ಕಾರ ಡಬಲ್ ಕೊಡುಗೆಯನ್ನು ನೀಡಿದೆ. ಮೊದಲನೆಯದ್ದು ಜನವರಿ ನಾಲ್ಕನೇ ತಾರಿಖು ಬಳ್ಳಾರಿಗೆ ಬರಲಿರೋ ಮುಖ್ಯಮಂತ್ರಿ ಬೊಮ್ಮಯಿ ಅವರು ಜಿಲ್ಲಾಡಳಿತದ ನೂತನ ಕಚೇರಿ ಉದ್ಘಾಟನೆ ಸೇರಿದಂತೆ ಐದು ನೂರಕ್ಕೂ ಹೆಚ್ಚು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಎರಡನೇಯದ್ದು ಜಿಲ್ಲೆ ವಿಭಜನೆ ಬಳಿಕ ಇದೇ ಮೊದಲ ಬಾರಿಗೆ ಬಳ್ಳಾರಿ ಉತ್ಸವವನ್ನು ಹಮ್ಮಿಕೊಂಡಿದ್ದು ಎರಡು ದಿನಗಳ ಈ ಕಾರ್ಯಕ್ರಮ ಅದ್ದೂರಿಯಾಗಿ ಮಾಡಲು ಪ್ಲಾನ್ ಮಾಡಲಾಗಿದೆ.

ಜಿಲ್ಲೆ ವಿಭಜನೆ ಬಳಿಕ ಭರ್ಜರಿ ಕೊಡುಗೆ

 ಜಿಲ್ಲೆ ವಿಭಜನೆ ಬಳಿಕ ಬಳ್ಳಾರಿ(Bellary)ಗೆ ಬರೋ ಬಹುತೇಕ ಅನುದಾನ ವಿಜಯನಗರ(Vijayanagar) ಜಿಲ್ಲೆಗೆ ಹೋಗ್ತಿದೆ ಎಂದು ಅರೋಪಿಸಲಾಗಿತ್ತು. ಆದ್ರೇ ಇದೆಲ್ಲವನ್ನೂ ಅಲ್ಲಗಳಿಯೋ ಮೂಲಕ ಬಳ್ಳಾರಿ ಜಿಲ್ಲೆಗೆ ಜನವರಿ 4ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj bommai) ಅವರು ಆಗಮಿಸಲಿದ್ದು, ಜಿಲ್ಲೆಯಲ್ಲಿ ಸುಮಾರು 500 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ನೂತನ ಕಟ್ಟಡಗಳ ಉದ್ಘಾಟನೆ(inauguration) ನೆರವೇರಿಸಲಿದ್ದಾರೆ.

ಬಳ್ಳಾರಿ ಜಿಲ್ಲಾ ಉತ್ಸವ ಯಶಸ್ವಿಗೆ ಶ್ರಮಿಸೋಣ; ಸಿಎಂ ಬಸವರಾಜ ಬೊಮ್ಮಾಯಿ

25ಕೋಟಿ ವೆಚ್ಚದ ನೂತನ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ಕಟ್ಟಡ ಉದ್ಘಾಟನೆ, 6 ಕೋಟಿ ವೆಚ್ಚದ ಸಿಂಥಟಿಕ್ ಅಥ್ಲೆಟಿಕ್ ರನ್ನಿಂಗ್ ಟ್ರ್ಯಾಕ್(Synthetic athletic running track) ಉದ್ಘಾಟನೆ, ರೂ.109 ಕೋಟಿ ವೆಚ್ಚದ ವಿಮ್ಸ್ ಆಸ್ಪತ್ರೆ(VIMS hospital)ಯಲ್ಲಿ 400 ಬೆಡ್‍ಗಳುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ, ಜಿಲ್ಲಾ ಆಸ್ಪತ್ರೆಯಲ್ಲಿ 21 ಕೋಟಿ ವೆಚ್ಚದ 100 ಹಾಸಿಗೆಯುಳ್ಳ ಎಂಎನ್‍ಹೆಚ್ ಆಸ್ಪತ್ರೆ(MNH Hospital) ಉದ್ಘಾಟನೆ ತಾರಾನಾಥ ಆರ್ಯುವೇದಿಕ್ ಆಸ್ಪತ್ರೆ(Taranatha Ayurvedic Hospital)ಯಲ್ಲಿ ವಸತಿ ನಿಲಯ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ಇದರ ಜೊತೆಗೆ ಹಲಕುಂದಿ ಮತ್ತು ಮುಂಡರಗಿಯಲ್ಲಿ ಭೂಮಿಯ ಪಟ್ಟಾ ವಿತರಣೆ ಸೇರಿದಂತೆ ಹಲವಾರು ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿಪೂಜೆ ಮಾಡಲಿದ್ದಾರೆ. 

ಜಿಲ್ಲಾ ಕಚೇರಿಗಳ ಸಂಕೀರ್ಣ ಭವನಕ್ಕೆ ಹಲವು ಕಚೇರಿಗಳು ಸ್ಥಳಾಂತರ  ನೂತನವಾಗಿ ಉದ್ಘಾಟನೆಗೊಳ್ಳಲಿರುವ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣದಲ್ಲಿ ತಹಶೀಲ್ದಾರ ಕಚೇರಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳ 11 ಕಚೇರಿಗಳು  ನೂತನ ಕಟ್ಟಡದಲ್ಲಿ ಇನ್ಮೂಂದೆ ಕಾರ್ಯನಿರ್ವಹಿಲಿವೆ. ಜಿಲ್ಲಾಧಿಕಾರಿಗಳ ಕಚೇರಿ, ಸಹಾಯಕ ಆಯುಕ್ತರ ಕಚೇರಿ ಹಾಗೂ ಭೂ ಮಾಪನ ಇಲಾಖೆ ಕಚೇರಿಗಳು ಮಾತ್ರ ಹಳೇ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿಯೇ ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಪವನ್ ಮಾಲ್ಪಾಟಿ ತಿಳಿಸಿದ್ದಾರೆ.

ಚೊಚ್ಚಲ ಬಳ್ಳಾರಿ ಉತ್ಸವ :

 ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯಾದ ನಂತರ, ಮೊದಲ ಬಾರಿಗೆ ‘ಬಳ್ಳಾರಿ ಉತ್ಸವ' (Ballari Utsav)ವನ್ನು ಜನವರಿ 21 ಮತ್ತು 22ರಂದು ನಡೆಸಲಾಗುತ್ತಿದೆ. ಹಂಪಿ ಉತ್ಸವ(Hampi Utsav)ದ ಮಾದರಿಯಲ್ಲಿಯೇ ‘ಬಳ್ಳಾರಿ ಉತ್ಸವ'ವನ್ನು 2 ದಿನಗಳ ಕಾಲ  ಮುನಿಸಿಪಲ್ ಕಾಲೇಜು ಮೈದಾನ(Municipal College Grounds)ದಲ್ಲಿ ನಡೆಯಲಿದೆ.
 ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆಯನ್ನು ನೀಡಲಾಗುತ್ತಿದ್ದು, ಕಲಾತಂಡಗಳ ಆಯ್ಕೆ ಪ್ರಕ್ರಿಯೆ ಉಪಸಮಿತಿಗಳ ಅಯ್ಕೆ ನಡೆಯುತ್ತಿದೆ. 

ಇದರ ಜೊತೆಗೆ ಫಲ-ಪುಷ್ಪ ಪ್ರದರ್ಶನ, ಮ್ಯಾರಾಥಾನ್, ಗಾಳಿಪಟ, ರಂಗೋಲಿ ಸ್ಪರ್ಧೆ, ಲೇಸರ್ ಶೋ, ಕುಸ್ತಿ ಪಂದ್ಯಾವಳಿ, ಎತ್ತಿನ ಬಂಡಿ ಮೆರವಣಿಗೆ, ಆಹಾರ ಪ್ರದರ್ಶನ, ಸಿರಿಧಾನ್ಯಗಳ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ನಗರದ ಕೋಟೆ ಆವರಣದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ.  

 Ballari Utsav: ವಿಜಯನಗರ ಜಿಲ್ಲೆ ವಿಭಜನೆ ಬಳಿಕ ಇದೇ ಮೊದಲ ಬಾರಿಗೆ ಬಳ್ಳಾರಿ ಉತ್ಸವ

ವಸಂತ ವೈಭವ:  ಬಳ್ಳಾರಿ ಉತ್ಸವದಲ್ಲಿ ಅಲಂಕೃತ ಆನೆ ಅಂಬಾರಿ, ವಿಶೇಷ ಅಶ್ವದಳ ಮತ್ತು ರಾಜ್ಯ ಹಾಗೂ ಇತರೆ ಹೊರ ರಾಜ್ಯಗಳಿಂದ ವಿಶೇಷವಾಗಿ 300 ಕಲಾತಂಡಗಳಿಂದ ಭವ್ಯ ವಸಂತ ವೈಭವ ಮೆರವಣಿಗೆ ನಡೆಯಲಿದೆ.

Follow Us:
Download App:
  • android
  • ios