Asianet Suvarna News Asianet Suvarna News

'ಬಿಎಸ್‌ವೈ ಕೆಳಗಿಳಿಸಿದರೆ ಹೈಕಮಾಂಡ್‌ಗೆ ತಕ್ಕ ಪಾಠ'

* ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಬಹಳಷ್ಟು ಶ್ರಮವಹಿಸಿರುವ ಬಿಎಸ್‌ವೈ
*  ಪೂರ್ಣ ಪ್ರಮಾಣದಲ್ಲಿ ಆಡಳಿತ ನಡೆಸಲು ಬಿಜೆಪಿ ಹೈಕಮಾಂಡ್‌ ಬಿಡಬೇಕು
*  ಯಡಿಯೂರಪ್ಪ ಬೆನ್ನಿಗೆ ನಿಲ್ಲುತ್ತೇವೆ: ಪಂಚಮಸಾಲಿ ಸ್ವಾಮೀಜಿಗಳು 

Chandrashekhar Shivayogi Rajendra Swamiji Talks Over CM BS Yediyurappa grg
Author
Bengaluru, First Published Jul 26, 2021, 11:19 AM IST
  • Facebook
  • Twitter
  • Whatsapp

ಹುಬ್ಬಳ್ಳಿ(ಜು.26): ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡಿದರೆ ಮುಂದಿನ ದಿನಗಳಲ್ಲಿ ಬಿಜೆಪಿ ಹೈಕಮಾಂಡ್‌ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಹುಬ್ಬಳ್ಳಿಯ ಹೊಸಮಠದ ಶ್ರೀ ಮನ್ನಿರಂಜನ ಜಗದ್ಗುರು ಶ್ರೀ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಎಚ್ಚರಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಬಹಳಷ್ಟು ಶ್ರಮವಹಿಸಿರುವ ಧೀಮಂತ ನಾಯಕ ಬಿ.ಎಸ್‌. ಯಡಿಯೂರಪ್ಪ, ಹಿಂದೆ ಸಿಎಂ ಹುದ್ದೆಗೆ ಏರಿದಾಗ ಅಪೂರ್ಣ ಆಡಳಿತ ನಡೆಸಿದ್ದಾರೆ. 

ಸಿಎಂ ಸ್ಥಾನದಿಂದ ಬಿಎಸ್‌ವೈ ಕೆಳಗಿಳಿಸಬೇಡಿ: ಮಠಾಧೀಶರ ಒಕ್ಕೊರಲ ನಿರ್ಣಯ

ಈ ಬಾರಿಯಾದರೂ ಪೂರ್ಣ ಪ್ರಮಾಣದಲ್ಲಿ ಆಡಳಿತ ನಡೆಸಲು ಬಿಜೆಪಿ ಹೈಕಮಾಂಡ್‌ ಬಿಡಬೇಕು. ಇಷ್ಟೊಂದು ವಯಸ್ಸಿನಲ್ಲಿ ಅವರು ಬಹಳ ಚಾತುರ್ಯದಿಂದ ಕಾರ್ಯನಿರ್ವಹಣೆ ಮಾಡಿದ್ದಾರೆ. ಕೊರೋನಾ ಹಾಗೂ ಪ್ರವಾಹ ತಡೆಗಟ್ಟಲು ನಿರಂತರವಾಗಿ ಶ್ರಮಪಟ್ಟಿದ್ದಾರೆ. ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದ್ದೇ ನಿಜವಾದರೆ ಪಂಚಮಸಾಲಿ ಸಮುದಾಯ ಹಾಗೂ ನೂರಾರು ಪಂಚಮಸಾಲಿ ಸ್ವಾಮೀಜಿಗಳು ಸಿಎಂ ಬಿ.ಎಸ್‌. ಯಡಿಯೂರಪ್ಪ ಬೆನ್ನಿಗೆ ನಿಲ್ಲುತ್ತೇವೆ ಎಂದರು.
 

Follow Us:
Download App:
  • android
  • ios