Asianet Suvarna News Asianet Suvarna News

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಚಲುವಾದಿ ನಾರಾಯಣ ಸ್ವಾಮಿ ವಾಗ್ದಾಳಿ

ಸದಾಶಿವ ಆಯೋಗ ವರದಿ ರಚನೆ ಮಾಡಲು ಯಡಿಯೂರಪ್ಪನವರು ಹಣ ಕೊಟ್ಟಿದ್ದರು| ಬಿಜೆಪಿ ಸರ್ಕಾರ ವರದಿ ರಿಸಿವ್ ಮಾಡ್ತು ಆದ್ರೇ ಚುನಾವಣೆ ಬಂದಿದ್ದರಿಂದ ಜಾರಿಯಾಗಲಿಲ್ಲ| ಬಳಿಕ ಆರು ವರ್ಷ ಇದ್ರಲ್ಲ ಸಿದ್ದರಾಮಯ್ಯ ಯಾಕೆ ವರದಿ ಜಾರಿ ಮಾಡಿಲ್ಲ: ಚಲುವಾದಿ ನಾರಾಯಣ ಸ್ವಾಮಿ| 

Chaluvadi Nayaranaswamy Slams on Former CM Siddaramaiah
Author
Bengaluru, First Published Sep 20, 2020, 1:21 PM IST

ಬಳ್ಳಾರಿ(ಸೆ.20): ವಿಜಯೇಂದ್ರ ನಮ್ಮ ಪಕ್ಷದ ಉಪಾಧ್ಯಕ್ಷರು ಅವರು ಸಿಎಂ ಯಡಿಯೂರಪ್ಪ ನವರ ಮಗ ಆಗಿರೋದೇ ತಪ್ಪಾ..? ಮಾಜಿ ಸಿಎಂ ಸಿದ್ದಾರಾಮಯ್ಯ ರಾಜಕೀಯದಿಂದ ಹೊರಗಿದ್ದಂಗೆ ಕಾಣತ್ತೆ, ಸಿದ್ದರಾಮಯ್ಯ ಮಗ ರಾಕೇಶ್ ಅವರದು ಏನೇನು ಬಂದಿತ್ತು ಗೊತ್ತಿದೆಯಾ?ರಾಕೇಶ್‌ದು ಎಲ್ಲಿಲ್ಲಿ ಏನೇನು ಇತ್ತು ಗೊತ್ತಾ? ಎಂದು ಹೇಳುವ ಮೂಲಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲುವಾದಿ ನಾರಾಯಣ ಸ್ವಾಮಿ ವಾಗ್ದಾಳಿ ನಡೆದಿದ್ದಾರೆ. 

ವಿಜಯೇಂದ್ರರನ್ನ ಸೂಪರ್ ಸಿಎಂ ಎಂದಿದ್ದ ಸಿದ್ದರಾಮಯ್ಯನವರ ಮಗ ರಾಕೇಶ್ ವಿಚಾರದ ಬಗ್ಗೆ ಇಂದು(ಭಾನುವಾರ) ಮಾಧ್ಯಮದವರ ಜೊತೆ ಮಾತನಾಡಿದ ಚಲುವಾದಿ ನಾರಾಯಣ ಸ್ವಾಮಿ,  ಡಾ.ಯತೀಂದ್ರ ಅವರು ಸಿದ್ದರಾಮಯ್ಯ ಜೊತೆ ಇಲ್ವಾ? ಸಿದ್ದರಾಮಯ್ಯನವರ ಮಗ ಈ ಮೊದಲು ಸೂಪರ್ ಸಿಎಂ ಅಗಿದ್ದಾರೆ ಅಂದ್ರೇ ಈಗ ನಾವು ಒಪ್ತಾ ಇದ್ವಿ. ಇವರಿಗೆ ಬೇರೇ ಏನು ವಿಷಯ ಸಿಕ್ತಾ ಇಲ್ಲ, ಅದಕ್ಕೆ ಊಹಾಪೋಹಗಳನ್ನ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಗಣಿ ಜಿಲ್ಲೆ ಬಳ್ಳಾರಿ ಜತೆ ಗಾಂಜಾ ಮಾಫಿಯಾ ನಂಟು!

ಎ.ಜೆ ಸದಾಶಿವ ಆಯೋಗದ ವರದಿ ಜಾರಿ ವಿಚಾರದ ಬಗ್ಗೆ ಮಾತನಾಡಿದ ಅವರು, ಸದಾಶಿವ ಆಯೋಗ ವರದಿ ರಚನೆ ಮಾಡಲು ಯಡಿಯೂರಪ್ಪನವರು ಹಣ ಕೊಟ್ಟಿದ್ದರು. ಬಿಜೆಪಿ ಸರ್ಕಾರ ವರದಿ ರಿಸಿವ್ ಮಾಡ್ತು ಆದ್ರೇ ಚುನಾವಣೆ ಬಂದಿದ್ದರಿಂದ ಜಾರಿಯಾಗಲಿಲ್ಲ. ಅದಾದ ಬಳಿಕ ಆರು ವರ್ಷ ಇದ್ರಲ್ಲ ಸಿದ್ದರಾಮಯ್ಯ ಯಾಕೆ ವರದಿ ಜಾರಿ ಮಾಡಿಲ್ಲ. ಈಗ ಯಥಾವತ್ತಾಗಿ ಜಾರಿ ಮಾಡಿ ಅಂತಾರೆ. ಯಾರಾದ್ರೂ ವಿರೋಧಿಸದ್ದರಾ ಹೇಳಿ? ಈಗ ನಮ್ಮ ಸರ್ಕಾರ ಇದೆ, ಸೋಮವಾರದಿಂದ ಅಧಿವೇಶನ ಅಲ್ಲಿ ಚರ್ಚೆಗೆ ಬರತ್ತೆ, ಬಳಿಕ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios