Asianet Suvarna News Asianet Suvarna News

Chikkaballapura : ಸವಾಲಾದ ಮಕ್ಕಳ ಅಪೌಷ್ಟಿಕತೆ ಸಮಸ್ಯೆ

:ಜಿಲ್ಲೆಯಲ್ಲಿ ಬರೋಬ್ಬರಿ 95 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು ಆ ಪೈಕಿ ಚಿಕ್ಕಬಳ್ಳಾಪುರ, ಗೌರಿಬಿದನೂರು ಹಾಗೂ ಬಾಗೇಪಲ್ಲಿ ಹಾಗೂ ಚಿಂತಾಮಣಿ ತಾಲೂಕಿನಲ್ಲಿ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

Challenging child malnutrition problem snr
Author
First Published Feb 10, 2023, 6:38 AM IST

ಕಾಗತಿ ನಾಗರಾಜಪ್ಪ.

 ಚಿಕ್ಕಬಳ್ಳಾಪುರ :ಜಿಲ್ಲೆಯಲ್ಲಿ ಬರೋಬ್ಬರಿ 95 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು ಆ ಪೈಕಿ ಚಿಕ್ಕಬಳ್ಳಾಪುರ, ಗೌರಿಬಿದನೂರು ಹಾಗೂ ಬಾಗೇಪಲ್ಲಿ ಹಾಗೂ ಚಿಂತಾಮಣಿ ತಾಲೂಕಿನಲ್ಲಿ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಅಪ್ರಾಪ್ತ ವಯಸ್ಸಿಗೆ ಹೆಣ್ಣು ಮಕ್ಕಳಿಗೆ ಮದುವೆ, ಸಾಮಾಜಿಕ, ಆರ್ಥಿಕ ಹಾಗೂ ಬಡತನದ ಕಾರಣಗಳಿಗೆ ಜಿಲ್ಲೆಯಲ್ಲಿ ಅಪೌಷ್ಟಿಕತೆ ಸಮಸ್ಯೆ ಇನ್ನೂ ಮುಂದುವರೆದಿರುವುದು ಎದ್ದು ಕಾಣುತ್ತಿದ್ದು ಅಪೌಷ್ಟಿಕತೆ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ತೊಲಗಿಸುವುದು ಇನ್ನೂ ಸವಾಲಾಗಿಯೆ ಇರುವುದು ಜಿಲ್ಲೆಯನ್ನು ಕಾಡುತ್ತಿದೆ.

ಜಿಲ್ಲೆಯಲ್ಲಿ ಸಾಮಾನ್ಯ ಅಪೌಷ್ಟಿಕತೆ

ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಪ್ರಕಾರ ಬರೋಬ್ಬರಿ 71,875 ಮಕ್ಕಳಲ್ಲಿ ಸಾಮಾನ್ಯ ಅಪೌಷ್ಠಿಕತೆ (ಶೇ.95.68) ಇರುವುದು ಕಂಡು ಬಂದಿದೆ. 3,146 ಮಕ್ಕಳಿಗೆ ಸಾಧಾರಣಾ ಅಪೌಷ್ಠಿಕತೆ (ಶೇ.4.19)ಸಮಸ್ಯೆ ಇರುವುದು ಕಂಡು ಬಂದಿದೆ. 95 ಮಕ್ಕಳಿಗೆ ತೀವ್ರ ಅಪೌಷ್ಠಿಕತೆ (ಶೇ.0.13 ) ಇರುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ ಕಂಡು ಬಂದಿದೆ. ಅಪೌಷ್ಠಿಕತೆಯ ತಪಾಸಣೆಗಾಗಿ ಇಲಾಖೆ ಒಟ್ಟು 75,116 ಮಕ್ಕಳನ್ನು ತೂಕ ಮಾಡಿದ್ದು ಈ ವೇಳೆ ಬಾಗೇಪಲ್ಲಿ ತಾಲೂಕಿನಲ್ಲಿ ಒಟ್ಟು 12,444 ಮಕ್ಕಳ ಪೈಕಿ 12,183 ಮಕ್ಕಳಲ್ಲಿ ಸಾಮಾನ್ಯ ಅಪೌಷ್ಠಿಕತೆ ಇದ್ದರೆ 246 ಮಕ್ಕಳಲ್ಲಿ ಸಾಧಾರಣ ಅಪೌಷ್ಠಿಕತೆ ಇದೆ. 15 ಮಕ್ಕಳಲ್ಲಿ ತೀವ್ರತರದ ಅಪೌಷ್ಠಿಕತೆ ಇದೆ.

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಒಟ್ಟು 13,222 ಮಕ್ಕಳ ಪೈಕಿ 12,864 ಮಕ್ಕಳಲ್ಲಿ ಸಾಮಾನ್ಯ, 336ಮಕ್ಕಳಲ್ಲಿ ಸಾಧಾರಣ ಇದೆ. ಚಿಂತಾಮಣಿ ತಾಲೂಕಿನಲ್ಲಿ 17,817 ಮಕ್ಕಳ ಪೈಕಿ 16,984 ಮಕ್ಕಳಲ್ಲಿ ಸಾಮಾನ್ಯ, 817 ಮಕ್ಕಳಲ್ಲಿ ಸಾದಾರಣ ಅಪೌಷ್ಟಿಕತೆ ಇದೆ. 16 ಮಕ್ಕಳಲ್ಲಿ ತೀವ್ರತರದ ಅಪೌಷ್ಠಿಕತೆ ಇದೆ. ಗೌರಿಬಿದನೂರು ತಾಲೂಕಿನಲ್ಲಿ 15,174 ಮಕ್ಕಳನ್ನು ತೂಕ ಮಾಡಿದ್ದು ಆ ಪೈಕಿ 14,349 ಮಕ್ಕಳಲ್ಲಿ ಸಾಮಾನ್ಯ, 806 ಮಕ್ಕಳಲ್ಲಿ ಸಾಧಾರಣ, 19 ಮಕ್ಕಳಲ್ಲಿ ತೀವ್ರತರವಾಗಿದೆ. ಗುಡಿಬಂಡೆ ತಾಲೂಕಿನಲ್ಲಿ ಒಟ್ಟು 3,697 ಮಕ್ಕಳಲ್ಲಿ 3,509 ಮಕ್ಕಳಲ್ಲಿ ಸಾಮಾನ್ಯ, 178 ಮಕ್ಕಳಲ್ಲಿ ಸಾಧಾರಣಾ ಹಾಗೂ 10 ಮಕ್ಕಳಲ್ಲಿ ತೀವ್ರತರದ ಅಪೌಷ್ಟಿಕತೆ ಇದೆ. ಇನ್ನೂ ಶಿಡ್ಲಘಟ್ಟತಾಲೂಕಿನಲ್ಲಿ 12,762 ಮಕ್ಕಳಲ್ಲಿ 11,986 ಮಕ್ಕಳಲ್ಲಿ ಸಾಮಾನ್ಯ, 763, 13 ಮಕ್ಕಳಲ್ಲಿ ತೀವ್ರತರದ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ.

ಚಿಕ್ಕಬಳ್ಳಾಪುರ, ಬಾಗೇಪಲ್ಲಿಯಲ್ಲಿ ಹೆಚ್ಚು:

ಇನ್ನೂ ಅಪೌಷ್ಠಕತೆ ಕಾಣಿಸಿಕೊಂಡಿರುವ ಮಕ್ಕಳ ಸಂಖ್ಯೆಯಲ್ಲಿ ಚಿಕ್ಕಬಳ್ಳಾಪುರ, ಆಂಧ್ರದ ಗಡಿಯಲ್ಲಿರುವ ಬಾಗೇಪಲ್ಲಿ, ಗೌರಿಬಿದನೂರು ಹಾಗೂ ಚಿಂತಾಮಣಿ ತಾಲೂಕುಗಳಲ್ಲಿ ಮೊದಲಿವೆ. ಗುಡಿಬಂಡೆ, ಶಿಡ್ಲಘಟ್ಟನಂತರದ ಸ್ಥಾನಗಳಲ್ಲಿ ಇವೆ.

ಜಿಲ್ಲೆಯಲ್ಲಿ 95 ಮಕ್ಕಳಲ್ಲಿ ತೀವ್ರತರದ ಅಪೌಷ್ಠಿಕತೆ ಕಾಡುತ್ತಿದ್ದು, ಸುಮಾರು 71,875 ಮಕ್ಕಳಲ್ಲಿ ಸಾಮಾನ್ಯ ಹಾಗೂ 3,146 ಮಕ್ಕಳಲ್ಲಿ ಸಾಧಾರಣ ಅಪೌಷ್ಠಿಕತೆ ಸಮಸ್ಯೆ ಇದೆ. ಇವರಿಗೆಲ್ಲಾ ಪೂರಕ ಪೌಷ್ಠಿಕ ಕಾರ್ಯಕ್ರಮದಡಿ ಅಂಗನವಾಡಿಗಳ ಮೂಲಕ ಪೌಷ್ಠಿಕ ಆಹಾರ ವಿತರಿಸಲಾಗುತ್ತಿದೆ.

ಅಶ್ವತ್ಥಮ್ಮ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ.

 ಜಿಲ್ಲೆಗೆ ಸವಾಲಾದ ಮಕ್ಕಳ ಅಪೌಷ್ಟಿಕತೆ ಸಮಸ್ಯೆ

3,146 ಮಕ್ಕಳಿಗೆ ಸಾಧಾರಣ, 95 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ

ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರದಲ್ಲಿ ಹೆಚ್ಚು

Follow Us:
Download App:
  • android
  • ios