ರಾಹುಲ್‌ ಗಾಂಧಿ ಇತಿಹಾಸ ಮರೆತಿದ್ದಾರೆ: ಚಕ್ರವರ್ತಿ ಸೂಲಿಬೆಲೆ

ಗುಂಡು ಹಾರಿಸಬಾರದು ಎಂಬ ಎರಡು ರಾಷ್ಟ್ರದ ನಡುವೆ ಒಪ್ಪಂದವಿದೆ| ಅದು ಯಾರ ಕಾಲದಲ್ಲಿ ಮಾಡಿದ್ದು ಎಂಬುದನ್ನೇ ಅವರು ಮರೆತಿದ್ದಾರೆ| ಚೀನಾದ ಸೈನಿಕರು ಬಹಳ ಕೆಟ್ಟದಾಗಿ ವರ್ತಿಸಿದ್ದಾರೆ| ಕೆಟ್ಟದಾದ ಈ ಪರಿಸ್ಥಿತಿಯಲ್ಲಿ ದೇಶದ ಪರವಾಗಿ ರಾಹುಲ್‌ ಗಾಂಧಿ ನಿಲ್ಲಬೇಕಿತ್ತು. ಈ ದೇಶದ ಸ್ವಾಭಿಮಾನ, ಗೌರವ ಕಾಪಾಡುವುದಕ್ಕೆ ಹೆಣಗಾಡಬೇಕಿತ್ತು|

Chakravarthi Sulibele Talks Over Rahul Gandhi

ಹಾವೇರಿ(ಜೂ.20): ನಮ್ಮ ಸೈನಿಕರು ಶಸ್ತ್ರಾಸ್ತ್ರಗಳನ್ನು ಏಕೆ ಕೊಂಡೊಯ್ಯಲಿಲ್ಲ ಎಂದು ರಾಹುಲ್‌ ಗಾಂಧಿ ಪ್ರಶ್ನೆ ಮಾಡುವ ಮೂಲಕ ಇತಿಹಾಸ ಮರೆತಿದ್ದಾರೆ. ಅವರು ಮಾತನಾಡುತ್ತಿರುವ ರೀತಿ ರಾಷ್ಟ್ರೀಯ ಪಕ್ಷಕ್ಕೆ ಶೋಭೆಯಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಡು ಹಾರಿಸಬಾರದು ಎಂಬ ಎರಡು ರಾಷ್ಟ್ರದ ನಡುವೆ ಒಪ್ಪಂದವಿದೆ. ಅದು ಯಾರ ಕಾಲದಲ್ಲಿ ಮಾಡಿದ್ದು ಎಂಬುದನ್ನೇ ಅವರು ಮರೆತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. 

ಹಾವೇರಿ; ಮನೆ ಪಾಠಕ್ಕೆ ಬಂದ ಶಿಕ್ಷಕನಿಂದ ಅತ್ಯಾಚಾರ, SSLC ವಿದ್ಯಾರ್ಥಿನಿ ಗರ್ಭಿಣಿ

ಚೀನಾದ ಸೈನಿಕರು ಬಹಳ ಕೆಟ್ಟದಾಗಿ ವರ್ತಿಸಿದ್ದಾರೆ. ಕೆಟ್ಟದಾದ ಈ ಪರಿಸ್ಥಿತಿಯಲ್ಲಿ ದೇಶದ ಪರವಾಗಿ ರಾಹುಲ್‌ ಗಾಂಧಿ ನಿಲ್ಲಬೇಕಿತ್ತು. ಈ ದೇಶದ ಸ್ವಾಭಿಮಾನ, ಗೌರವ ಕಾಪಾಡುವುದಕ್ಕೆ ಹೆಣಗಾಡಬೇಕಿತ್ತು. ದುರಂತದ ಸಂಗತಿ ಎಂದರೆ ರಾಹುಲ್‌ ಭವಿಷ್ಯದ ಪ್ರಧಾನ ಮಂತ್ರಿ ಅಭ್ಯರ್ಥಿ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
 

Latest Videos
Follow Us:
Download App:
  • android
  • ios