Asianet Suvarna News Asianet Suvarna News

ಹುಬ್ಬಳ್ಳಿ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೆ ಏರಿಸಲು ಕೇಂದ್ರ ಚಿಂತನೆ: ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಕುರಿತು ಕೇಂದ್ರ ವಿಮಾನಯಾನ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ. ಈ ಕುರಿತು ಇತ್ತೀಚಿಗೆ ಮನವಿ ಸಲ್ಲಿಸಿದ್ದು, ಅದಕ್ಕೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜೋಶಿ ತಿಳಿಸಿದ್ದಾರೆ.

Central idea to upgrade Hubli Airport to international level says Pralhad Joshi rav
Author
First Published Jan 4, 2023, 11:40 AM IST

ಹುಬ್ಬಳ್ಳಿ (ಜ.4) : ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಕುರಿತು ಕೇಂದ್ರ ವಿಮಾನಯಾನ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ. ನಿಲ್ದಾಣದ ಟರ್ಮಿನಲ್‌ ಹಾಗೂ ಇತರೆ ಸೌಲಭ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ನವೀಕರಿಸುವ ಕುರಿತು ಚಿಂತನೆ ನಡೆದಿದೆ. ಈ ಕುರಿತು ಇತ್ತೀಚಿಗೆ ಮನವಿ ಸಲ್ಲಿಸಿದ್ದು, ಅದಕ್ಕೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜೋಶಿ ತಿಳಿಸಿದ್ದಾರೆ. ಈ ನಿಲ್ದಾಣವೂ ಮೇಲ್ದರ್ಜೆಗೇರಿದರೆ ಕರ್ನಾಟಕದ 3ನೇ ಹಾಗೂ ಉತ್ತರ ಕರ್ನಾಟಕದ ಮೊದಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ.

ಪ್ರಸ್ತುತ, ಅವಳಿ ನಗರಗಳಲ್ಲಿನ ವಿಮಾನ ನಿಲ್ದಾಣ(Airport)ವು 3,600 ಚದರ ಮೀಟರ್‌ ಟರ್ಮಿನಲ್‌ ಹೊಂದಿದೆ. ಇದು ವಾರ್ಷಿಕವಾಗಿ ಐದು ಲಕ್ಷ ಪ್ರಯಾಣಿಕರನ್ನು ನಿರ್ವಹಿಸುತ್ತಿದೆ. ಪ್ರಸ್ತುತ 300 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಇದನ್ನು ಇನ್ನೂ 16400 ಚದರ ಮೀಟರ್‌ಗೆ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ಇದರಿಂದಾಗಿ ಈ ಟರ್ಮಿನಲ್‌ 20 ಸಾವಿರ ಚದರ ಮೀಟರ್‌ಗೊಳಪಡಲಿದೆ. ಇದರಿಂದಾಗಿ ಏಕಕಾಲಕ್ಕೆ 1400 ಪ್ರಯಾಣಿಕರು (700 ಆಗಮನ, 700 ನಿರ್ಗಮನ) ನಿಭಾಯಿಸುವ ಸಾಮರ್ಥ್ಯ ಹೊಂದಲಿದೆ. ಮೂರು ಏರ್‌ ಬ್ರಿಡ್ಜ್‌ ಸ್ಥಾಪಿಸಲು ಪ್ರಸ್ತಾವನೆ ಹೊಂದಲಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ರನ್‌ವೇಯನ್ನು 600 ಮೀಟರ್‌ಗಳಷ್ಟುಹೆಚ್ಚಿಸಲಾಗುವುದು ಎಂದು ಜೋಶಿ(Pralhad joshi) ತಿಳಿಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣ(Hubballi airport) ಸಲಹಾ ಸಮಿತಿ ಸದಸ್ಯ ಸುನೀಲ್‌ ನಲ್ವಾಡೆ, ಕರ್ನಾಟಕದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾದ ಹುಬ್ಬಳ್ಳಿಯಿಂದ ಅಂತಾರಾಷ್ಟ್ರೀಯ ವಿಮಾನಯಾನ ಆರಂಭಿಸಬೇಕು ಎಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆ. ಉನ್ನತೀಕರಣವು ಅಂತಾರಾಷ್ಟ್ರೀಯ ವಿಮಾನಯಾನವನ್ನು ಪ್ರಾರಂಭಿಸುವ ಮೊದಲ ಹಂತವಾಗಿದೆ ಎಂದು ತಿಳಿಸಿದ್ದಾರೆ.

ಸನಾತನ ಕಾಲದಿಂದಲೂ ಸ್ವರಾಜ್‌ ಪರಿಕಲ್ಪನೆ ಇದೆ; ಪ್ರಲ್ಹಾದ್ ಜೋಶಿ

Follow Us:
Download App:
  • android
  • ios