ಬೇಲೂರು (ಏ.08): ಮಾಜಿ ಸಚಿವರ ವಿರುದ್ಧ ದುರ್ಬಳಕೆ ಆರೋಪ ಮಾಡಿರುವ ಸೀಡಿಲೇಡಿ ನೀಡಿದ ದೂರಿನ ಅನ್ವಯ ಮಾಜಿ ಸಚಿವರನ್ನು ಬಂಧಿಸಿ, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣಶೆಟ್ಟಿಬಣ) ಬೇಲೂರು ವೃತ್ತ ನಿರೀಕ್ಷಕ ಶ್ರೀಕಾಂತ್‌ ಅವರಿಗೆ  ಮನವಿ ಬುಧವಾರ ಸಲ್ಲಿಸಿದರು.

ಬಳಿಕ ಮಾತನಾಡಿದ ಕರವೇ ಪ್ರವೀಣ ಶೆಟ್ಟಿಬಣ ಅಧ್ಯಕ್ಷ ವಿ.ಎಸ್‌.ಭೋಜೇಗೌಡ, ಯುವತಿ ಈಗಾಗಲೇ ವಿಡಿಯೋ ಬಿಡುಗಡೆ ಮಾಡಿದ್ದು, ಮಾಜಿ ಸಚಿವರೇ ಎಂದು ಯುವತಿ ನೇರವಾಗಿ ಆರೋಪಿಸಿದ್ದರೂ, ಗೃಹ ಇಲಾಖೆ ಮಾಜಿ ಸಚಿವರನ್ನ ವಿಚಾರಣೆ ನಡೆಸದೆ ಇನ್ನೂ ಮೀನಾಮೇಷ ಎಣಿಸುತ್ತಿರುವುದೇಕೆ? ಎಂದು ಪ್ರಶ್ನಿಸಿದ ಅವರು ಈ ಸರ್ಕಾರ ತಮ್ಮವರ ರಕ್ಷಣೆಗೆ ನಿಂತಿದೆಯೇ ಹೊರತು ರಾಜ್ಯದ ಜನತೆಯ ರಕ್ಷಣೆಗಲ್ಲ ಎನ್ನುವುದು ಬಿಜೆಪಿ ನಡವಳಿಕೆಗಳಿಂದ ತಿಳಿಯುತ್ತದೆ ಎಂದು ಆರೋಪಿಸಿದರು.

ಸೀಡಿ ಲೇಡಿಯಿಂದ ಗಂಭೀರ ಆರೋಪದ ಲೆಟರ್ : ಸಿಎಂ ಹೇಳಿಕೆ ಭಾರೀ ಆತಂಕ ಉಂಟು ಮಾಡಿದೆ ..

ಯುವತಿ ಹಾಗೂ ಕುಟುಂಬಸ್ಥರಿಗೆ ಜೀವ ಬೆದರಿಕೆ ಇರುವುದು ಆಕೆಯ ಹೇಳಿಕೆಯಲ್ಲಿ ತಿಳಿಯುತ್ತದೆ. ರಕ್ಷಣೆ ನೀಡಬೇಕೆಂದು ಕೇಳಿಕೊಂಡಿದ್ದಾಳೆ. ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಕೂಡಲೇ ಆಕೆ ಹಾಗೂ ಕುಟುಂಬಕ್ಕೆ ಸೂಕ್ತ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಸಂಘಟನೆ ಕಾರ್ಯದರ್ಶಿ ಜಯಪ್ರಕಾಶ್‌, ಅರುಣ್‌ ಸಿಂಗ್‌, ಕಾರ್ಮಿಕ ಘಟಕದ ಅಧ್ಯಕ್ಷ ಮಂಜು ಆಚಾರ್‌, ಗೌರವಾಧ್ಯಕ್ಷ ಚಂದ್ರು, ರತ್ನಕಾರ್‌, ನಗರಾಧ್ಯಕ್ಷ ರಾಕೇಶಗೌಡ, ಸಾಂಸ್ಕೃತಿಕ ಘಟಕದ ಅಧ್ಯಕ್ಷ ಗಣೇಶ್‌ ಇನ್ನೂ ಮುಂತಾದವರು ಹಾಜರಿದ್ದರು.