Asianet Suvarna News Asianet Suvarna News

ಎರಡು ದಿನ ಕಾವೇರಿ ನೀರು ಬರಲ್ಲ!: ಎಲ್ಲೆಲ್ಲಿ ನೀರು ವ್ಯತ್ಯಯ? ಇಲ್ಲಿದೆ ಮಾಹಿತಿ

ನಾಳೆ, ನಾಡಿದ್ದು ನಗರದ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ| ಕಾವೇರಿ ನೀರು ಸರಬರಾಜು ಯೋಜನೆಯ ಪಂಪ್‌ಹೌಸ್‌ಗಳ ದುರಸ್ತಿ ಕಾಮಗಾರಿ ಹಿನ್ನೆಲೆ

cauvery water supply to be affected in bengaluru for next two days
Author
Bangalore, First Published Jan 21, 2019, 10:28 AM IST

 ಬೆಂಗಳೂರು[ಜ.21]: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯ ಕಾವೇರಿ ನೀರು ಸರಬರಾಜು ಯೋಜನೆಯ ಪಂಪ್‌ಹೌಸ್‌ಗಳ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಜ.22ರ ರಾತ್ರಿ 10ರಿಂದ ಜ.23ರ ಸಂಜೆ 4ರವರೆಗೆ ನಗರದ ಹಲವೆಡೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಯಶವಂತಪುರ, ಮಲ್ಲೇಶ್ವರಂ, ಮತ್ತಿಕೆರೆ, ಗೋಕುಲ ಎಕ್ಸ್‌ಟೆನ್ಷನ್‌, ಜಯಮಹಲ್‌, ವಸಂತನಗರ, ಮುತ್ಯಾಲನಗರ, ಆರ್‌.ಟಿ.ನಗರ, ಸಂಜಯ್‌ ನಗರ, ಸದಾಶಿವನಗರ, ಹೆಬ್ಬಾಳ, ಭಾರತೀ ನಗರ, ಸುಧಾಮನಗರ, ಪ್ಯಾಲೇಸ್‌ ಗುಟ್ಟಳ್ಳಿ, ಮಚಲೀಬೆಟ್ಟ, ಫ್ರೇಜ‚ರ್‌ ಟೌನ್‌, ವಿಲ್ಸನ್‌ ಗಾರ್ಡನ್‌, ಹೊಂಬೇಗೌಡ ನಗರ, ಪಿಳ್ಳಣ್ಣ ಗಾರ್ಡನ್‌, ಬನ್ನಪ್ಪ ಪಾರ್ಕ್, ಶಿವಾಜಿನಗರ, ಜೀವನ್‌ ಭೀಮಾನಗರ, ಚಿಕ್ಕಲಾಲ್‌ಬಾಗ್‌, ಗವಿಪುರ, ಬ್ಯಾಟರಾಯನಪುರ, ಮೆಜೆಸ್ಟಿಕ್‌, ಕಸ್ತೂರಬಾ ರಸ್ತೆ, ಮಡಿವಾಳ, ಯಲಚೇನಹಳ್ಳಿ, ಇಸ್ರೋ ಲೇಔಟ್‌, ಪೂರ್ಣಪ್ರಜ್ಞಾ ಲೇಔಟ್‌, ನೀಲಸಂದ್ರ, ಕೆ.ಆರ್‌.ಮಾರ್ಕೆಟ್‌, ಸಂಪಂಗಿ ರಾಮನಗರ, ಕುಮಾರ ಸ್ವಾಮಿಲೇಔಟ್‌, ಬನಶಂಕರಿ, ಬನಶಂಕರಿ 2ನೇ ಮತ್ತು 3ನೇ ಹಂತದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯವಾಗಲಿದೆ.

ಅಂತೆಯೇ ಜಯನಗರ, ಜೆ.ಪಿ.ನಗರ, ಬನಗಿರಿ ನಗರ, ಬಸವನಗುಡಿ, ಓಕಳಿಪುರ, ಚಾಮರಾಜಪೇಟೆ, ಪದ್ಮನಾಭನಗರ, ಹೊಸಕೆರೆಹಳ್ಳಿ, ಭೈರಸಂದ್ರ, ಲಿಂಗರಾಜಪುರ, ಜಾನಕಿ ರಾಮ ಲೇಔಟ್‌, ಆರ್‌.ಎಸ್‌.ಪಾಳ್ಯ, ಜಾನ್ಸನ್‌ ಮಾರ್ಕೆಟ್‌, ಆಡುಗೋಡಿ, ದೊಮ್ಮಲೂರು, ಬಿಟಿಎಂ ಲೇಔಟ್‌, ಬಾಪೂಜಿನಗರ, ಮೈಸೂರು ರಸ್ತೆ, ಶ್ರೀರಾಮಪುರಂ, ಇಂದಿರಾನಗರ 1ನೇ ಹಂತ, ಶ್ರೀನಗರ, ಹಲಸೂರು, ಶಾಂತಿನಗರ, ಕೋರಮಂಗಲ, ಜಯನಗರ, ಚೋಳೂರು ಪಾಳ್ಯ, ರಿಚ್‌ಮಂಡ್‌ ಟೌನ್‌, ಅಶೋಕ್‌ ನಗರ, ಮರ್ಫಿ ಟೌನ್‌, ಈಜಿಪುರ, ಮುನೇಶ್ವರ ನಗರ, ವಿವಿ ಪುರಂ, ಮಾವಳ್ಳಿ, ಗಾಂಧಿನಗರ, ಪಾದರಾಯನಪುರ, ಕತ್ರಿಗುಪ್ಪೆ, ಟೆಲಿಕಾಂ ಲೇಔಟ್‌, ಚಿಕ್ಕಪೇಟೆ, ಎಂ.ಜಿ. ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.

Follow Us:
Download App:
  • android
  • ios