ಬೆಂಗಳೂರು: ನಗರದಲಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಿಲಿಕಾನ್ ಸಿಟಿಯ ಕೆಲವು ಪ್ರದೇಶಗಳಿಗೆ ನೀರೂ ಪೂರೈಕೆಗೂ ತೊಂದರೆಯಾಗಲಿದೆ. 

ತೊರೆಕಾಡನಹಳ್ಳಿಯ ಜಲಮಂಡಳಿ ಪಂಪಿಂಗ್ ಕೇಂದ್ರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಸೋಮವಾರ (ಫೆ.18) ನಗರದ ಹಲವೆಡೆ ಕಾವೇರಿ ನೀರು ಪೂರೈಕೆಯಲ್ಲಿಯೂ ವ್ಯತ್ಯಯವಾಗಲಿದೆ. 

ಯಶವಂತಪುರ, ಮಲ್ಲೇಶ್ವರ, ಮತ್ತೀಕೆರೆ, ಗೋಕುಲ್ ಎಕ್ಸ್‌ಟೆನ್ಷನ್, ಜಯಮಹಲ್, ವಸಂತ ನಗರ, ಮುತ್ಯಾಲನಗರ, ಆರ್.ಟಿ.ನಗರ, ಸಂಜಯನಗರ, ಸದಾಶಿವನಗರ, ಹೆಬ್ಬಾಳದಲ್ಲಿ ನೀರು, ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗಬಹುದು. 

ಭಾರತಿನಗರ, ಸುಧಾಮನಗರ, ಪ್ಯಾಲೇಸ್ ಗುಟ್ಟಹಳ್ಳಿ, ಮಾಚಳ್ಳಿ ಬೆಟ್ಟ, ಫ್ರೇಜರ್‌ಟೌನ್, ವಿಲ್ಸನ್ ಗಾರ್ಡನ್, ಹೊಂಬೇಗೌಡ ನಗರ, ಪಿಳ್ಳಣ್ಣ ಗಾರ್ಡನ್, ಬನ್ನಪ್ಪ ಪಾರ್ಕ್, ಶಿವಾಜಿನಗರ, ಜೀವನ್ ಭೀಮಾನಗರ, ಚಿಕ್ಕ ಲಾಲ್‌ಬಾಗ್, ಗವಿಪುರ ಮುಂತಾದೆಡೆಯೂ ಜನರು ತೊಂದರೆ ಎದುರಿಸಬೇಕಾಬಹುದೆಂದು, ಬೆಸ್ಕಾಂ ಹಾಗೂ ಜಲಮಂಡಳಿ ಪತ್ರಿಕಾ ಪ್ರಕಟಣೆಗಳು ಸ್ಪಷ್ಟಪಡಿಸಿವೆ.