ತಲಕಾವೇರಿ ದರ್ಶನಕ್ಕೆ ನಿರ್ಬಂಧ : ಕುಲದವರಿಗೆ ಎದುರಾಗಿದೆ ಅವಕೃಪೆ ಆತಂಕ
- ತಲಕಾವೇರಿ ಹಾಗೂ ಶ್ರೀ ಭಗಂಡೇಶ್ವರ ಕ್ಷೇತ್ರದಲ್ಲಿ ಪಾರಂಪರಿಕವಾಗಿ ಪಾಲಿಸಿಕೊಂಡು ಬರುತ್ತಿದ್ದ ಪದ್ಧತಿಗೆ ನಿರ್ಬಂಧ
- ಕಾವೇರಿಯನ್ನು ಕುಲದೇವಿಯೆಂದು ಆರಾಧಿಸುವ ಕೊಡವ ಮೂಲ ನಿವಾಸಿಗಳ ಕೆಲವು ಆಚಾರ, ಪದ್ಧತಿ, ಪರಂಪರೆಗಳಿಗೆ ವಿರೂಪ
ಮಡಿಕೇರಿ (ಅ.06): ತಲಕಾವೇರಿ (Thalacauvery) ಹಾಗೂ ಶ್ರೀ ಭಗಂಡೇಶ್ವರ ಕ್ಷೇತ್ರದಲ್ಲಿ ಪಾರಂಪರಿಕವಾಗಿ ಪಾಲಿಸಿಕೊಂಡು ಬರುತ್ತಿದ್ದ ಪದ್ಧತಿಯನ್ನು ಯಥಾವತ್ತಾಗಿ ಮುಂದುವರಿಸುವಂತೆ ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಮನವಿ ಮಾಡಿದೆ.
ವೇದಿಕೆ ಸಂಚಾಲಕ ಕೆ. ಎ. ಕಾರ್ಯಪ್ಪ (KA karyappa) ತಲಕಾವೇರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾವೇರಿಯನ್ನು ಕುಲದೇವಿಯೆಂದು ಆರಾಧಿಸುವ ಕೊಡವ (Kodava) ಮೂಲ ನಿವಾಸಿಗಳ ಕೆಲವು ಆಚಾರ, ಪದ್ಧತಿ, ಪರಂಪರೆಗಳನ್ನು ವಿರೂಪಗೊಳಿಸಲಾಗಿದ್ದು, ಇದರ ವ್ಯತಿರಿಕ್ತ ಪರಿಣಾಮ ಜಿಲ್ಲೆಯ ಮೂಲ ನಿವಾಸಿಗಳ ಮೇಲೆ ಉಂಟಾಗಿ ದೇವಿಯ ಅಪಕೃಪೆಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸರಳ ಮಡಿಕೇರಿ ದಸರಾಗೆ ಮಂಜಿನ ನಗರಿಯಲ್ಲಿ ಸಿದ್ಧತೆ
ಮೂಲಭೂತ ಕಟ್ಟುಪಾಡುಗಳಲ್ಲಿ ಯಾವುದೇ ಮಾರ್ಪಾಡು ಮಾಡದೆ ಮತ್ತು ಲೋಪವಾಗದಂತೆ ಯಥಾವತ್ತಾಗಿ ಮುಂದುವರಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ತಲಕಾವೇರಿ ಕ್ಷೇತ್ರ ಪ್ರವೇಶಿಸುವಾಗ ಮೊದಲು ಕೊಳದ ಎದುರು ಭಾಗದಿಂದ ಕಾವೇರಿ ತಾಯಿಯನ್ನು (GoddessCauvery) ನಮಸ್ಕರಿಸುತ್ತಾ ಪ್ರವೇಶಿಸಿ, ಕೊಳದಲ್ಲಿ ಸ್ನಾನ ಮಾಡಿ ಪವಿತ್ರ ಕುಂಡಿಕೆಯಿಂದ ತೀರ್ಥ ಸ್ನಾನ ಮಾಡಿ, ತೀರ್ಥ ಪ್ರಸಾದ ಸ್ವೀಕರಿಸಿ ನಂತರ ವಸ್ತ್ರ ಬದಲಾಯಿಸಿ, ಕುಂಡಿಕೆ ಬಳಿಯಲ್ಲಿ ಆಗಸ್ತ್ಯ ಮಹಾಮುನಿ ಹಾಗೂ ಕಾವೇರಿ ಮಾತೆಯ ಆಶೀರ್ವಾದ ಪಡೆಯಬೇಕು.
ನಂತರ ಅಶ್ವತ್ಥ ಕಟ್ಟೆಯಲ್ಲಿ ಪ್ರದಕ್ಷಿಣೆ ಹಾಕಿ ತ್ರಿಮೂರ್ತಿ ಹಾಗೂ ಆದಿಶಕ್ತಿ ದೇವಿಯನ್ನು ಪ್ರಾರ್ಥಿಸುವುದು. ಕ್ರಮವಾಗಿ ಮಹಾಗಣಪತಿ ಹಾಗೂ ಅಗಸ್ತೆ್ಯೕಶ್ವರನಿಗೆ ಪೂಜೆ ಸಲ್ಲಿಸುವುದು ಕ್ಷೇತ್ರದಲ್ಲಿ ನಡೆದು ಬಂದ ಪರಂಪರೆಯಾಗಿದೆ. ಆದರೆ ಇಂದು ಈ ಎಲ್ಲ ಆಚಾರ, ವಿಚಾರಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದ್ದು, ಕಾವೇರಿ ಭಕ್ತರಲ್ಲಿ ಅಸಮಾಧಾನ ಮೂಡಿದೆ.
ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ
ಭಾಗಮಂಡಲ ಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಅಶ್ವತ್ಥಕಟ್ಟೆಯಲ್ಲಿ ದೇವರಿಗೆ ಪ್ರದಕ್ಷಿಣೆ ಹಾಕಿ ನಂತರ ದೇವಾಲಯದಲ್ಲಿ ಶ್ರೀಭಗಂಡೇಶ್ವರ ದೇವರ ದರ್ಶನವನ್ನು ಮೊದಲು ಮಾಡಬೇಕು. ಇದಾದ ಮೇಲೆ ಕ್ರಮವಾಗಿ ಮಹಾವಿಷ್ಣು, ಸುಬ್ರಮಣ್ಯ ಹಾಗೂ ಕೊನೆಯದಾಗಿ ಗಣಪತಿಗೆ ನಮಸ್ಕರಿಸಿ ಹೊರ ಬರಬೇಕು. ಆದರೆ ಇಲ್ಲಿಯೂ ಗೊಂದಲ ಸೃಷ್ಟಿಯಾಗಿದೆ. ಆದ್ದರಿಂದ ಹಿಂದಿನಿಂದಲೂ ಅಳವಡಿಸಿಕೊಂಡು ಬಂದಿರುವ ಪಾರಂಪರಿಕ ಆಚಾರ, ವಿಚಾರಗಳನ್ನೇ ಪಾಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಭಕ್ತರಿಗೆ ಮುಕ್ತ ಅವಕಾಶ : ತೀರ್ಥೋದ್ಭವದ (Theerthodbava) ಅ.17 ರಂದು ಕೊಡಗಿನ ಮೂಲ ನಿವಾಸಿಗಳ ಆರಾಧ್ಯ ದೇವಿ ಕಾವೇರಿ ಮಾತೆಯ ದರ್ಶನಕ್ಕೆ ಯಾವುದೇ ನಿರ್ಬಂಧ ಹೇರಬಾರದು. ಅಲ್ಲದೆ ತುಲಾಸಂಕ್ರಮಣದ 1 ತಿಂಗಳು ಕೊಡಗಿನ ವಿವಿಧೆಡೆಯಿಂದ ಕ್ಷೇತ್ರಕ್ಕೆ ವಯೋವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಆಗಮಿಸುತ್ತಾರೆ. ಮೂಲ ನಿವಾಸಿ ಭಕ್ತರ ಹಿತದೃಷ್ಟಿಯಿಂದ ಯಾವುದೇ ನಿರ್ಬಂಧ ವಿಧಿಸದೆ ಕಾವೇರಿಮಾತೆಯ ದರ್ಶನಕ್ಕೆ ಮುಕ್ತ ಅವಕಾಶ ನೀಡಬೇಕು ಮತ್ತು ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ಒಂದು ತಿಂಗಳ ಕಾಲ ತಲಕಾವೇರಿ ಕ್ಷೇತ್ರವನ್ನು ಪ್ರವಾಸಿಗರಿಂದ ಮುಕ್ತಗೊಳಿಸಬೇಕು ಎಂದು ಕಾರ್ಯಪ್ಪ ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ (Kodagu DC) ಮನವಿ ಸಲ್ಲಿಸಿರುವ ವೇದಿಕೆ ಪ್ರಮುಖರು ಕುಲದೇವಿಯ ದರ್ಶನಕ್ಕೆ ಬರುವ ಸ್ಥಳೀಯ ಭಕ್ತಾದಿಗಳ ಭಾವನೆಗಳಿಗೆ ಮತ್ತು ಪರಂಪರೆಗೆ ಲೋಪವಾಗದಂತೆ ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.