ತುಮಕೂರು : ಕಾರ್‌ ಹೆಡ್ ಲೈಟ್ ಹಾಕೊಂಡು ಮುಕ್ತಿಧಾಮದಲ್ಲಿ ಮಹಿಳೆಯ ಅಂತ್ಯಕ್ರಿಯೆ

  • ಕಾರ್‌ ಹೆಡ್‌ಲೈಟ್‌ಲ್ಲಿ ನಡೆಯಿತು ಕೋವಿಡ್ ಸೋಂಕಿತ ಮಹಿಳೆ ಅಂತ್ಯಕ್ರಿಯೆ
  • ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಲ್ಲಿ ಘಟನೆ
  • ಸಚಿವ ಮಾಧುಸ್ವಾಮಿ ಸ್ವ ಕ್ಷೇತ್ರದ ಮುಕ್ತಿಧಾಮಕ್ಕಿಲ್ಲ ವಿದ್ಯುತ್ ವ್ಯವಸ್ಥೆ
Car headlight Use For Covid Victim cremation in Tumakuru   snr

 ತುಮಕೂರು(ಮೇ.09): ತುಮಕೂರು ಜಿಲ್ಲೆ ಹುಳಿಯಾರುವಿನಲ್ಲಿ ಕಾರಿನ ಹೆಡ್‌ ಲೈಟಲ್ಲೇ ಅಂತ್ಯಕ್ರಿಯೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. 

ಶನಿವಾರ  ರಾತ್ರಿ  ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ರಂಗಲಕ್ಷ್ಮಮ್ಮ ಎಂಬಾಕೆ ಕೊರೋನಾ ಮಹಾಮಾರಿಯಿಂದ ಮೃತಪಟ್ಟಿದ್ದು ಇಲ್ಲಿನ ಮುಕ್ತಿಧಾಮದಲ್ಲಿ ಕಾರ್‌ ಹೆಡ್‌ ಲೈಟ್‌ನಲ್ಲೇ ಆಕೆಯ ಅಂತ್ಯ ಸಂಸ್ಕಾರ ಮಾಡಲಾಗಿದೆ. 

ಆಕ್ಸಿಜನ್ ಇಲ್ಲ ಅಂದ್ರೆ ಸಿಎಂಗೆ ಕೇಳಿ ಅಂತಾರೆ ಮಾಧುಸ್ವಾಮಿ.! ಇದೆಂಥಾ ಉಡಾಫೆ ಸಚಿವರೇ..

ಮೃತದೇಹ ತರುವ ವೇಳೆ ತಡರಾತ್ರಿಯಾದ ಕಾರಣ ಇಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದ ಕಾರಣ ಅಂತ್ಯ ಸಂಸ್ಕಾರ ಮಾಡಲು ಕುಟುಂಬಸ್ಥರು ಕಾರಿನ ಹೆಡ್‌ ಲೈಟ್ ಬಳಕೆ ಮಾಡಿಕೊಂಡರು. 

ಸಚಿವ ಮಾಧುಸ್ವಾಮಿ ಸ್ವ ಕ್ಷೇತ್ರದಲ್ಲಿ ಮುಕ್ತಿದಾಮಕ್ಕೆ ಇಲ್ಲ ವಿದ್ಯುತ್ ವ್ಯವಸ್ಥೆ ಮಾಡುವ ಜವಾಬ್ದಾರಿ ಮಾತ್ರ ಯಾರೂ ವಹಿಸಿಕೊಂಡಿಲ್ಲ.

ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ಅನೇಕ ಬಾರಿ ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಒಂದು ವಿದ್ಯುತ್ ದೀಪವನ್ನು ಅಳವಡಿಸುವ ಗೋಜಿಗೆ ಇಲ್ಲಿನ ಜನಪ್ರತಿನಿದಿಗಳು ಹೋಗಿಲ್ಲ. ಇದರಿಂದ ರಾತ್ರಿಯಾದರೆ ಜನರೆ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬೇಕಾದ ಸ್ಥಿತಿ ಇಲ್ಲಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios