ಜು.18 ಮತ್ತು 25ರಂದು ವಿವಿಧ ರೈಲುಗಳ ಸಂಚಾರ ರದ್ದು

ನಿಟ್ಟೂರು ಮತ್ತು ಸಂಪಿಗೆ ರೋಡ್‌ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ (62) ಕಾಮಗಾರಿ ಹಿನ್ನೆಲೆಯಲ್ಲಿ ಜು.18 ಮತ್ತು 25ರಂದು ವಿವಿಧ ರೈಲುಗಳ ಸಂಚಾರ ರದ್ದಾಗಿದೆ. ಇನ್ನು ಹಲವು ರೈಲುಗಳ ಸಂಚಾರ ಭಾಗಶಃ ರದ್ದಾಗಿದೆ.

Cancellation of various trains on June 18 and 25 snr

  ಬೆಂಗಳೂರು :  ನಿಟ್ಟೂರು ಮತ್ತು ಸಂಪಿಗೆ ರೋಡ್‌ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ (62) ಕಾಮಗಾರಿ ಹಿನ್ನೆಲೆಯಲ್ಲಿ ಜು.18 ಮತ್ತು 25ರಂದು ವಿವಿಧ ರೈಲುಗಳ ಸಂಚಾರ ರದ್ದಾಗಿದೆ. ಇನ್ನು ಹಲವು ರೈಲುಗಳ ಸಂಚಾರ ಭಾಗಶಃ ರದ್ದಾಗಿದೆ.

ಸಂಚಾರ ರದ್ದು:

ತುಮಕೂರು-ಚಾಮರಾಜನಗರ (07346), ಚಾಮರಾಜನಗರ-ಮೈಸೂರು (07328), ಚಾಮರಾಜನಗರ-ಯಶವಂತಪುರ (16239), ಯಶವಂತಪುರ-ಚಾಮರಾಜನಗರ (16240), ತುಮಕೂರು-ಕೆಎಸ್ಆರ್ ಬೆಂಗಳೂರು (06576), ಕೆಎಸ್ಆರ್ ಬೆಂಗಳೂರು-ತುಮಕೂರು (06575), ಯಶವಂತಪುರ-ಶಿವಮೊಗ್ಗ ಟೌನ್ (16579) ಮತ್ತು ಶಿವಮೊಗ್ಗ ಟೌನ್-ಯಶವಂತಪುರ (16580) ರೈಲುಗಳ ಸಂಚಾರ ಜುಲೈ 18 ಮತ್ತು 25 ರಂದು ರದ್ದಾಗಿದೆ.

ಭಾಗಶಃ ರದ್ದು:

ಜುಲೈ 18 ಮತ್ತು 25ರಂದು ಕೆಎಸ್ಆರ್ ಬೆಂಗಳೂರು-ತುಮಕೂರು ನಿಲ್ದಾಣಗಳ ನಡುವೆ ಸಂಚರಿಸುವ (06571/06572) ರೈಲುಗಳನ್ನು ಹಿರೇಹಳ್ಳಿ-ತುಮಕೂರು ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ತಾಳಗುಪ್ಪ-ಕೆಎಸ್ಆರ್ ಬೆಂಗಳೂರು (20652) ರೈಲು, ಕೆಎಸ್ಆರ್ ಬೆಂಗಳೂರು-ಧಾರವಾಡ-ಕೆಎಸ್ಆರ್ ಬೆಂಗಳೂರು (12725/12726) ರೈಲುಗಳನ್ನು ಅರಸೀಕೆರೆ-ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದು ಮಾಡಲಾಗಿದೆ.

ಮಾರ್ಗ ಬದಲಾವಣೆ:

ಜುಲೈ 17, 24 ರಂದು ವಾಸ್ಕೋ-ಡ-ಗಾಮಾದಿಂದ ಹೊರಡುವ ರೈಲು (17310) ವಾಸ್ಕೋ ಡ ಗಾಮಾ-ಯಶವಂತಪುರ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಆಗುವುದಿಲ್ಲ.

ಜುಲೈ18, 25 ರಂದು ಹೊರಡುವ ಮೈಸೂರು-ವಾರಣಾಸಿ (22687), ಯಶವಂತಪುರ-ಜೈಪುರ (82653) ರೈಲುಗಳು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದ ಮೂಲಕ ಸಂಚರಿಸಲಿದೆ. ತುಮಕೂರು ನಿಲ್ದಾಣದಲ್ಲಿ ನಿಲುಗಡೆ ಆಗುವುದಿಲ್ಲ. ಮೈಸೂರು-ಬೆಳಗಾವಿ (17326) ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದ ಮೂಲಕ ಸಂಚರಿಸಲಿದೆ. ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಆಗುವುದಿಲ್ಲ.

ಇನ್ನು, ಮೈಸೂರು-ಉದಯಪುರ ಸಿಟಿ (19668) ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ, ದಾವಣಗೆರೆ ಮೂಲಕ ಸಂಚರಿಸಲಿದೆ.

ರೈಲುಗಳ ನಿಯಂತ್ರಣ

ಜುಲೈ 16, 23ರಂದು ಬಿಕಾನೇರ್ ನಿಲ್ದಾಣದಿಂದ ಹೊರಡುವ ಬಿಕಾನೇರ್-ಯಶವಂತಪುರ (16588) ರೈಲನ್ನು ಮಾರ್ಗದಲ್ಲಿ ಎರಡೂವರೆ ಗಂಟೆ, ಜುಲೈ 18, 25 ರಂದು ಯಶವಂತಪುರ-ಹಜರತ್ ನಿಜಾಮುದ್ದೀನ್ (12629) ರೈಲು 50 ನಿಮಿಷ, ಕೆಎಸ್ಆರ್ ಬೆಂಗಳೂರು-ತಾಳಗುಪ್ಪ (20651) ರೈಲು 10 ನಿಮಿಷ, ಬೆಳಗಾವಿ-ಮೈಸೂರು (17325) ರೈಲು 55 ನಿಮಿಷ, ಚಾಮರಾಜನಗರ-ತುಮಕೂರು (07345) ರೈಲನ್ನು ಎರಡು ಗಂಟೆ ನಿಯಂತ್ರಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Latest Videos
Follow Us:
Download App:
  • android
  • ios