ಧಾರವಾಡ(ನ.23): ನಗರದ ಮಾಳಮಡ್ಡಿಯ ಪ್ರತಿಮಾ ಅಪಾರ್ಟ್‌ಮೆಂಟ್‌ ತಿರುವಿನಲ್ಲಿ ಸಾರಿಗೆ ಸಂಸ್ಥೆಯ ಬಸ್‌ ಹಾಯ್ದ ಪರಿಣಾಮ ಆಕಳು ಕರು ಮೃತಪಟ್ಟಿದೆ. ಈ ದೃಶ್ಯ ನೋಡಿ ತಾಯಿ ಆಕಳು ಮೂಕ ರೋದನೆ ಪಡುತ್ತಿದ್ದ ದೃಶ್ಯ ಜನತೆಯನ್ನು ಮಮ್ಮಲು ಮರುಗುವಂತೆ ಮಾಡಿತ್ತು.

ಬಸ್‌ ಡಿಕ್ಕಿ ಹೊಡೆದ ರಭಸಕ್ಕೆ ತಾಯಿ ಮುಂದೆ ಕರು ಪ್ರಾಣಬಿಟ್ಟಿತು. ಕೆಲಕಾಲ ಕರು ಮುಂದೆ ನಿಂತ ಆಕಳು ಮೂಕ ರೋದನೆ ಪಟ್ಟಿತು. ಆಕಳಿನ ಕಣ್ಣೀರು ನೋಡಿ ಸ್ಥಳೀಯರು ಕರುವನ್ನು ಬದುಕಿಸಲು ಎಷ್ಟೇ ಪ್ರಯತ್ನ ಮಾಡಿದರೂ ಸಹ ಫಲಕಾರಿಯಾಗಲಿಲ್ಲ. ಕೊನೆಗೆ ಸಂಚಾರಿ ಪೊಲೀಸರು ಹಾಗೂ ಸ್ಥಳೀಯ ಯುವಕರು ಸೇರಿ ರೈಲ್ವೆ ನಿಲ್ದಾಣದ ತೋಪಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. 

ನಾಮಫಲಕ ಎಡವಟ್ಟು ಮಾಡಿದ ನೈಋುತ್ಯ ರೈಲ್ವೆ

ಅಂತ್ಯಕ್ರಿಯೆ ಮುಗಿಯುವವರೆಗೂ ತಾಯಿ ಆಕಳು ಮಾತ್ರ ಜಾಗ ಬಿಟ್ಟು ಕದಲಿಲ್ಲ. ಇದಕ್ಕೆ ಸಾರ್ವಜನಿಕರು ಮಮ್ಮಲ ಮರಗಿದರು.