Asianet Suvarna News Asianet Suvarna News

ಬೆಂಗಳೂರಿನಲ್ಲಿ ಹೆಚ್ಚಾಗುತ್ತಾ ನೀರಿನ ದರ ..?

ನೀರಿನ ದರ ಏರಿಕೆ ಸಂಬಂಧ ಬೆಂಗಳೂರು ಜಲಮಂಡಳಿ ಮೂರು ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸಿದ್ಧವಾಗಿದೆ. 

BWSSB Proposal To Hike Water Price In Bangalore
Author
Bengaluru, First Published Jan 30, 2020, 11:15 AM IST
  • Facebook
  • Twitter
  • Whatsapp

ಬೆಂಗಳೂರು [ಜ. 30]: ಬೆಂಗಳೂರು ಜಲಮಂಡಳಿಯು ನೀರಿನ ಪರಿಷ್ಕರಣೆ ಸಂಬಂಧ ಮೂರು ವಿಭಿನ್ನ ಪ್ರಸ್ತಾವನೆ ಸಿದ್ಧಪಡಿಸಿದ್ದು, ಇನ್ನೊಂದು ವಾರದೊಳಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದೆ. ಈ ಮೂರು ಪ್ರಸ್ತಾವನೆ ಪೈಕಿ ರಾಜ್ಯ ಸರ್ಕಾರ ಯಾವುದಕ್ಕೆ ಒಪ್ಪಿಗೆ ನೀಡುತ್ತದೆಯೋ ಆ ಪ್ರಸ್ತಾವನೆ ಅನ್ವಯ ದರ ಏರಿಕೆಯಾಗಲಿದೆ.
 
 ಈ ಮಾಹಿತಿ ನೀಡಿದ ಜಲಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ಅವರು, ಹಿಂದೆ ಜಲ ಮಂಡಳಿಯು ನೀರಿನ ದರ ಹೆಚ್ಚಳ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸಿ ಶೇ.20ರಷ್ಟುಹೆಚ್ಚಳ ಮಾಡಲು ಮುಂದಾಗಿತ್ತು. ಈ ವೇಳೆ ಮಂಡಳಿ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಒಪ್ಪಿಗೆ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹೊರೆಯಾಗದಂತೆ ದರ ಪರಿಷ್ಕರಿಸಲು ಸೂಚಿಸಲಾಗಿತ್ತು. ಇದೀಗ ನೀರಿನ ದರ ಏರಿಕೆ ಸಂಬಂಧ ಮೂರು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

ಕಳೆದ ಆರು ವರ್ಷಗಳಿಂದ ನೀರಿನ ದರ ಪರಿಷ್ಕರಣೆ ಮಾಡಿಲ್ಲ. ಈ ಅವಧಿಯಲ್ಲಿ ವಿದ್ಯುತ್‌ ದರ ಏರಿಕೆ, ನೌಕರರ ವೇತನ, ನಿರ್ವಹಣೆ ಸೇರಿದಂತೆ ಖರ್ಚು ಹೆಚ್ಚಳವಾಗಿದೆ. ಇವೆಲ್ಲನ್ನೂ ಗಮನದಲ್ಲಿರಿಸಿಕೊಂಡು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಮೊದಲ ಪ್ರಸ್ತಾವನೆಯಲ್ಲಿ ವಿವಿಧ ಯೋಜನೆಗಳಿಗಾಗಿ ಮಾಡಿರುವ ಎಲ್ಲ ಬಗೆಯ ಸಾಲ ತೀರಿಸುವ ಹಾಗೂ ನಿರ್ವಹಣಾ ವೆಚ್ಚ ಭರಿಸಲು ಅನುವಾಗುವಂತೆ ದರ ಏರಿಕೆ ಶಿಫಾರಸು ಮಾಡಲಾಗುವುದು. ಎರಡನೇ ಪ್ರಸ್ತಾವದಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳಿಂದ ಮಾತ್ರ ಪಡೆದ ಸಾಲಗಳನ್ನು ತೀರಿಸುವ ದರ ಪರಿಷ್ಕರಣೆ ಶಿಫಾರಸು ಮಾಡಲಾಗುವುದು. ಇನ್ನು ಮೂರನೇ ಪ್ರಸ್ತಾಪದಲ್ಲಿ ನಿರ್ವಹಣಾ ವೆಚ್ಚವನ್ನು ಮಾತ್ರ ಭರಿಸುವ ದರ ಪರಿಷ್ಕರಣೆಯನ್ನು ಹೊಂದಿರಲಿದೆ ಎಂದು ಅವರು ಹೇಳಿದರು.

ಶಿಥಿಲಾವಸ್ಥೆ ತಲುಪಿದ ಓವರ್‌ಹೆಡ್‌ ಟ್ಯಾಂಕ್‌: ಮಕ್ಕಳ ಜೀವಕ್ಕೆ ಬೆಲೆನೇ ಇಲ್ವಾ?

ಈ ಮೂರು ಪ್ರಸ್ತಾವಗಳನ್ನು ಸರ್ಕಾರಕ್ಕೆ ಶೀಘ್ರದಲ್ಲೇ ಸಲ್ಲಿಸಲಾಗುವುದು. ವಸತಿ ಬಳಕೆ, ವಾಣಿಜ್ಯ ಬಳಕೆ ಸೇರಿದಂತೆ ವಿವಿಧ ರೀತಿಯ ಬಳಕೆಗಳ ಆಧಾರದಲ್ಲಿ ದರ ಪರಿಷ್ಕರಿಸಲಾಗಿದೆ. ಹೀಗಾಗಿ ನಿರ್ದಿಷ್ಟವಾಗಿ ಇಂತಿಷ್ಟೇ ಪ್ರಮಾಣದಲ್ಲಿ ದರ ಪರಿಷ್ಕರಣೆಯಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.

ಮೂಲಗಳ ಪ್ರಕಾರ ಶೇ.20ರಿಂದ 30ರಷ್ಟುದರ ಪರಿಷ್ಕರಣೆ ಮಾಡುವಂತೆ ಜಲಮಂಡಳಿ ಸರ್ಕಾರಕ್ಕೆ ಶಿಫಾರಸು ಮಾಡುವ ಚಿಂತನೆಯಲ್ಲಿದೆ ಎನ್ನಲಾಗಿ

Follow Us:
Download App:
  • android
  • ios