ಅಪ್ಪಾರಾವ್ ಸೌದಿ

ಬೀದರ್(ಏ.15):
ಕೊರೋನಾ ಲಾಕ್‌ಡೌನ್‌ ಪರಿಸ್ಥಿತಿಯ ಈ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿರುವವರ ಬೆನ್ನಿಗೆ ನಿಂತಿರುವ ಸರ್ಕಾರವು ವ್ಯಾಪಾರ ವಹಿವಾಟು ಇಲ್ಲದೆ ಸಮಸ್ಯೆಗೆ ಸಿಲುಕಿರುವ ವ್ಯಾಪಾರಿಗಳ ಸಹಾಯಕ್ಕೂ ಕೈ ಚಾಚಲಿ. ಮಹಾನಗರ ಪಾಲಿಕೆಮ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಸೇರಿದಂತೆ ಮತ್ತಿತರ ಇಲಾಖೆಗಳ ಹಾಗೂ ಅಧೀನ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅಂಗಡಿ ಮಳಿಗೆಗಳ ಒಂದೆರೆಡರು ತಿಂಗಳ ಬಾಡಿಗೆ ಮನ್ನಾ ಮಾಡುವತ್ತ ಹೆಜ್ಜೆ ಇಡಲಿ.

ಪ್ರತಿ ಮಾಸಿಕ ವಿವಿ ಇಲಾಖೆಗಳು, ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಮಳಿಗೆಗಳಿಂದ ಕೋಟ್ಯಂತರ ರುಪಾಯಿ ಆದಾಯ ಹೊಂದಿದ್ದಂತೂ ನಿಜ. ಆದರೆ ಕೊರೋನಾ ಮಹಾಮಾರಿಯ ಈ ಸಂಕಷ್ಟದ ದಿನಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಾಡಿಗೆ ಕಟ್ಟಲೂ ದುಡ್ಡಿಲ್ಲದೆ ಅತಂತ್ರವಾಗಿರುವ ಬಾಡಿಗೆದಾರರ ಬಗ್ಗೆ ಕನಿಕರ ತೋರಬೇಕಿದೆ.

ಬೀದರ್: ಜಮಾತ್‌ನಿಂದ ಸೋಂಕು ಹಚ್ಚಿಕೊಂಡು ಬಂದವರ ದುರ್ವರ್ತನೆ, ವೈದ್ಯರು ಬೇಸರ

ಈ ಪೈಕಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ವ್ಯಾಪಾರ ಮಳಿಗೆಗಳಿಂದ ಸುಮಾರು 2ಕೋಟಿ ರು.ಗಳ ಆದಾಯ ಇತ್ತು. ಇದೀಗ ಬಾಡಿಗೆಗೆ ಇದ್ದ ವ್ಯಾಪಾರಿಗಳ ವ್ಯಾಪಾರ ನಯಾ ಪೈಸೆ ಇಲ್ಲ. ಈ ಸಂದ‘ರ್ದಲ್ಲಿ ಸಂಸ್ಥೆಯು ಒಂದೆರೆಡು ತಿಂಗಳ ಬಾಡಿಗೆ ಮನ್ನಾ ಮಾಡುವ ಮೂಲಕ ಸಂಸ್ಥೆಗೆ ಆದಾಯದ ದಾರಿಯಾಗಿ ಇದೀಗ ಸಂಕಷ್ಟಕ್ಕೆ ಒಳಗಾಗಿರುವ ಬೆನ್ನಿಗೆ ನಿಲ್ಲುವ ಕೆಲಸ ಮಾಡಲಿ.


ಅದೇ ರೀತಿಯಾಗಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಸೇರಿದಂತೆ ಮತ್ತಿತರ ಇಲಾಖೆಗಳ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಅಂಗಡಿ, ಮಳಿಗೆಗಳ ಬಾಡಿಗೆಯತ್ತ ಸರ್ಕಾರ ಚಿಂತಿಸಿ ಸೂಕ್ತ ಸುತ್ತೋಲೆ ಹೊರಡಿಸುವ ಮೂಲಕ ಬಾಡಿಗೆದಾರರಿಗೆ ಧೈರ್ಯ ತುಂಬುವ ಕೆಲಸವಾಗಲಿ.

ಖಾಸಗಿಯವರೂ ಬಾಡಿಗೆ ಮನ್ನಾ ಮಾಡಿ ಮಾನವೀಯತೆ ಮೆರೆಯಲಿ:

ನಮಗೆಲ್ಲರಿಗೂ ಬಂದೆರಗಿರುವ ಕೊರೋನಾ ಮಹಾಮಾರಿಯ ಸಂಕಷ್ಟವನ್ನು ಹೋಗಲಾಡಿಸಲು ಅಂಗಡಿ ಮುಂಗಟ್ಟು ಮುಚ್ಚಿಟ್ಟು ಆರ್ಥಿಕ ದುಸ್ಥಿತಿಯನ್ನು ಎದುರಿಸುತ್ತ ಮನೆಗೆ ಸೇರಿರುವ ಸಣ್ಣ ಪುಟ್ಟ ವ್ಯಾಪಾರೋದ್ಯಮಿಗಳಿಗೆ ವಿಷ್ಯದ ಚಿಂತೆ ಎದುರಾಗಿದ್ದು ಖಾಸಗಿಯಾಗಿರುವ ಅಂಗಡಿ, ಮಳಿಗೆಗಳ ಮಾಲೀಕರು ಒಂದೆರೆಡು ತಿಂಗಳ ಬಾಡಿಗೆ ಮನ್ನಾ ಮಾಡುವ ಚಿಂತನೆಯನ್ನು ಹುಟ್ಟು ಹಾಕುವ ಅಗತ್ಯವಿದೆ.

ಕೊರೋನಾ ಸಂಕಷ್ಟ ಜನಜೀವನವನ್ನೇ ತಲ್ಲಣಗೊಳಿಸಿದೆ, ದೇಶ ವಿದೇಶದ ಆರ್ಥಿಕ ವ್ಯವಸ್ಥೆ ಹದೆಗೆಡಿಸಿದೆ. ಆರ್ಥಿಕವಾಗಿ ಕೊಂಚ ಸದೃಢವಾಗಿರುವ ಮಳಿಗೆಗಳ ಮಾಲೀಕರು ಈ ಬಗ್ಗೆ ಚಿಂತಿಸಿ ಹಲವಾರು ವರ್ಷಗಳಿಂದ ತಮ್ಮ ಮಳಿಗೆಗಳಲ್ಲಿ ಬಾಡಿಗೆಗೆ ಇದ್ದು ಪ್ರತಿ ಮಾಸಿಕವೂ ಬಾಡಿಗೆ ಪಾವತಿಸುತ್ತ ಬಂದಿರುವವರ ಬೆನ್ನಿಗೆ ನಿಲ್ಲುವಂಥ ಪ್ರಯತ್ನ ಮಾಡಲಿ.

ಹೀಗೆಯೇ ಒಂದೆರೆಡು ತಿಂಗಳ ಬಾಡಿಗೆ ಮನ್ನಾ ಮಾಡುವ ಮೂಲಕ ವ್ಯಾಪಾರಸ್ಥರ ಸಂಕಷ್ಟ ಪರಿಹರಿಸಿದ ಹಲವಾರು ಉದಾಹರಣೆಗಳು ರಾಜ್ಯದ ವಿವಿಧೆಡೆ ಕೇಳಿ, ಕಂಡು ಬಂದಿವೆ. ಗಡಿ ಜಿಲ್ಲೆಯಾದ ಇಲ್ಲಿಯೂ ಇಂಥದ್ದೊಂದು ಪ್ರಯತ್ನವನ್ನ ವ್ಯಾಪಾರ ಮಳಿಗೆಗಳ ಮಾಲೀಕರು ಮಾಡುವ ಮೂಲಕ ನಮ್ಮ ಜಿಲ್ಲೆಯೂ ಮಾದರಿಯಾಗಲಿ.

ಸಾರಿಗೆ ಸಂಸ್ಥೆ ಈ ನಿಟ್ಟಿನಲ್ಲಿ ಚಿಂತಿಸಲಿ. ಎರಡು ತಿಂಗಳಾಯಿತು ಅಂಗಡಿಗಳನ್ನು ಬಂದ್ ಮಾಡಿದ್ದೇವೆ. ಕೊರೋನಾ ಮಹಾಮಾರಿಗೆ ನಾವೆಲ್ಲ ಸಂಕಷ್ಟಕ್ಕೆ ಸಿಲುಕಿದ್ದೇವೆ. ವ್ಯಾಪಾರವಿಲ್ಲದೆ ಬಾಡಿಗೆ ಕಟ್ಟುವ ಮುಂದಿನ ದಿನಗಳನ್ನು ನೆನೆಸಿಕೊಂಡರೇ ಭಯವಾಗುತ್ತಿದೆ. 9 ತಿಂಗಳ ಮುಂಗಡ ಕಟ್ಟಿದ್ದೇವೆ, ಪ್ರತಿ ತಿಂಗಳು ಶೇ. 18ರಷ್ಟು GST ಕಟ್ಟುತ್ತಿದ್ದೇವೆ. ಹೀಗಾಗಿ ಬಾಡಿಗೆ ಮನ್ನಾ ನಿರ್ಧಾರ ಕೈಗೊಳ್ಳುವ ಮೂಲಕ ನಮಗೆ ಧೈರ್ಯ ತುಂಬಲಿ ಎಂದು ಹುಮನಾಬಾದ್ ಬಸ್ ನಿಲ್ದಾಣದಲ್ಲಿನ ಅಂಗಡಿ ಬಾಡಿಗೆದಾರರಾದ ಪ್ರಭಾಕರ ಕುಲಕರ್ಣಿ ಅವರು ಹೇಳಿದ್ದಾರೆ.