Asianet Suvarna News Asianet Suvarna News

ರಾಜ್ಯದಿಂದ ಮತ್ತೆ ಶುರುವಾಯ್ತು ಇಲ್ಲಿಗೆ ಬಸ್ ಸಂಚಾರ

ಒಂದೂವರೆ ವರ್ಷದ ಬಳಿಕ ಕೊಡಗಿನಿಂದ ಈ ಸ್ಥಳಕ್ಕೆ ಬಸ್ ಸಂಚಾರ ಆರಂಭವಾಗಿದೆ. ಭಾರೀ ಮಳೆ ಹಿನ್ನೆಲೆ ನಿಂತಿದ್ದ ಸಾರಿಗೆ ವ್ಯವಸ್ಥೆ ಪುನರಾರಂಭವಾಗಿದೆ.

Bus service Begins From Kodagu To Kerala After 1 Year
Author
Bengaluru, First Published Dec 13, 2019, 2:20 PM IST

ಮಂಜು​ನಾಥ್‌ ಟಿ.ಎ​ನ್‌.

ವಿರಾ​ಜ​ಪೇ​ಟೆ [ಡಿ.13]: ಒಂದೂವರೆ ವರ್ಷ​ಗಳ ಬಳಿಕ ಕೇರ​ಳ-ಕರ್ನಾ​ಟ​ಕದ ಮಾಕು​ಟ್ಟ-ಕೋಣ​ನೂರು ರಾಜ್ಯ ಹೆದ್ದಾರಿಯಲ್ಲಿ ತಾತ್ಕಾ​ಲಿಕ ರಸ್ತೆ ದುರಸ್ತಿ ಬಳಿಕ ಬಸ್‌ ಸಂಚಾರ ಶುರು​ವಾ​ಗಿದೆ. ಇದು ಈ ಭಾಗದ ನಿತ್ಯ ಪ್ರಯಾ​ಣಿ​ಕರು ಹಾಗೂ ವರ್ತ​ಕರ ಮುಖ​ದಲ್ಲಿ ನಗು ಅರ​ಳಿ​ಸಿ​ದೆ.

ಕಳೆದ ಎರಡು ವರ್ಷಗಳಿಂದ ಕೇರಳ-ಕರ್ನಾಟಕ ಹೆದ್ದಾರಿಗೆ ಭಾರಿ ಮಳೆಯೇ ಕಂಟಕಪ್ರಾಯವಾಗಿದೆ. 2018ರಲ್ಲಿ ಈ ಅಂತಾರಾಜ್ಯ ಹೆದ್ದಾರಿಯಲ್ಲಿ ಸುಮಾರು 40ಕ್ಕೂ ಅಧಿಕ ಕಡೆ ಭೂಕುಸಿತವಾಗಿ, ಓರ್ವ ವ್ಯಕ್ತಿ ಮೃತಪಟ್ಟು ಇಡೀ ಹೆದ್ದಾರಿಗೆ ಹೆದ್ದಾರಿಯೇ ಅಸ್ತವ್ಯಸ್ತವಾಗಿ ಹೋಗಿತ್ತು. ತಿಂಗ​ಳು​ಗ​ಟ್ಟಲೆ ಈ ಹೆದ್ದಾ​ರಿ​ಯ​ಲ್ಲಿ ವಾಹನ ಸಂಚಾರ ಬಂದ್‌ ಮಾಡಲಾಗಿತ್ತು. 2018 ಜೂ.12ರಿಂದಲೇ ಭಾರಿ ವಾಹನಗಳಿಗೆ ಸಂಚಾರ ನಿಷೇಧ ಹೇರ​ಲಾ​ಗಿ​ತ್ತು.

ಮತ್ತೆ ಕುಸಿ​ತ:

ಈ ವರ್ಷ ಆ.12ಕ್ಕೆ ಭಾರಿ ಮಳೆಗೆ ಮತ್ತೆ ಈ ಹೆದ್ದಾರಿ ಕುಸಿದು ಹೋಗಿ ಎರಡು ತಿಂಗಳು ಸಂಪೂ​ರ್ಣ ರಸ್ತೆ​ಯೇ ಬಂದ್‌ ಆಗಿತ್ತು. ಅಲ್ಲಲ್ಲಿ ತಾತ್ಕಾ​ಲಿಕ ದುರ​ಸ್ತಿ​ಗಳ ಬಳಿಕ ಅಕ್ಟೋ​ಬರ್‌ ಮೊದಲ ವಾರ ಲಘು ವಾಹ​ನ​ಗಳ ಸಂಚಾ​ರಕ್ಕೆ ಅವ​ಕಾಶ ನೀಡ​ಲಾ​ಗಿತ್ತು. ಹೆದ್ದಾರಿ ನಡು​ವಿ​ನ ವಾಟೆ​ಕೊಲ್ಲಿ ಸಮೀ​ಪದ ಆಂಜ​ನೇಯ ದೇವ​ಸ್ಥಾ​ನದ ಅಕ್ಕ​ಪಕ್ಕ ಮೂರು ಕಡೆ​ಗ​ಳಲ್ಲಿ ರಸ್ತೆ ಬಹು​ತೇಕ ಕುಸಿದು ಹೋಗಿದೆ. ಇದೀಗ ತಾತ್ಕಾ​ಲಿವಾಗಿ ಬರೆ​ಯನ್ನು ಅಗ​ಲ​ಗೊ​ಳಿಸಿ ಬಸ್‌ ಸಂಚಾ​ರಕ್ಕೆ ಅನುವು ಮಾಡಿ​ಕೊ​ಡ​ಲಾ​ಗಿದೆ. ಮಳೆ ಬಂದರೆ ಮತ್ತೆ ಈ ರಸ್ತೆ ಸಂಚಾ​ರ ಸ್ಥಗಿ​ತ​ವಾ​ಗ​ಲಿ​ದೆ.

ವಹಿ​ವಾ​ಟಿಗೆ ಧಕ್ಕೆ:

ಹೆದ್ದಾರಿ ಬಂದ್‌ ಆದ ಹಿನ್ನೆ​ಲೆ​ಯಲ್ಲಿ ಇಲ್ಲಿ ಭಾರಿ ಪ್ರಮಾಣದಲ್ಲಿ ವ್ಯಾಪಾರ ವಹಿ​ವಾ​ಟಿಗೆ ತೊಂದರೆಯಾಗಿತ್ತು. ಈ ಹೆದ್ದಾ​ರಿ​ಯನ್ನು ಅವ​ಲಂಬಿ​ಸಿಯೇ ಕೇರಳಕ್ಕೆ ಇಲ್ಲಿಂದ ಕಾಫಿ, ಮೆಣಸು, ಭತ್ತ, ತರಕಾರಿ, ಧವಸಧಾನ್ಯಗಳು ಹೋಗುತ್ತಿದ್ದವು. ಕೇರಳದಿಂದ ಪ್ಲೈವುಡ್‌, ಹಸಿ ಮತ್ತು ಒಣಗಿದ ಮೀನು, ಕೊಬ್ಬರಿ, ರಬ್ಬರ್‌, ಗೇರು ಬೀಜ, ಮರ, ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಕಲ್ಲು, ಜಲ್ಲಿ ರಾಜ್ಯಕ್ಕೆ ಬರುತ್ತಿದ್ದವು.

ತಾತ್ಕಾ​ಲಿಕ ದುರ​ಸ್ತಿಯ ಬಳಿಕ ಇಲ್ಲಿ ಲಘು ವಾಹನಗಳು ಸಂಚರಿಸುವ ಅವಕಾಶವಿದ್ದರೂ ಜೀವ ಕೈಯ್ಯಲ್ಲಿ ಹಿಡಿದು ಹೋಗಬೇಕಾದ ಅನಿವಾರ್ಯ ಸನ್ನಿವೇಶವಿತ್ತು. ರಸ್ತೆ ಮತ್ತು ತಡೆಗೋಡೆ ಕುಸಿತವಾದ ಬಳಿಕ ಕೇರಳ ಮತ್ತು ಕೊಡಗಿನ ನಡುವೆ ವ್ಯಾಪಾರ ವಹಿವಾಟು, ಮದುವೆ ಮಾಡಲು ಗಂಡು ಹೆಣ್ಣು ಕೊಟ್ಟು ತರುವುದು ಇವೆಲ್ಲದರ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಗಿತ್ತು.

ಪ್ರತಿವರ್ಷ ಕೊಡಗಿನಿಂದ ಶಬರೀಮಲೆಗೆ ಹೋಗುವ ಅಯ್ಯಪ್ಪ ಭಕ್ತಾದಿಗಳಿಗೂ ಪ್ರಯಾಣ ಮಾಡುವುದೇ ಕಷ್ಟದ ವಿಚಾರವಾಗಿತ್ತು. ಕಣ್ಣೂರು ವಿಮಾನ ನಿಲ್ದಾಣಕ್ಕೆ ಹೋಗ ಬಯಸುವವರಿಗೂ ಈ ದಾರಿ ಮುಚ್ಚಿಹೋದಂತಾಗಿತ್ತು.

ಆಸ್ಪತ್ರೆಗೆ ಹೋಗುವವರು, ಸಾವು, ನೋವು, ಕಷ್ಟ-ಸುಖ, ದೇವಾಲಯ ಬೇಟಿ ಎಂದು ಕೇರಳಕ್ಕೆ ಹೋಗಬೇಕೆಂದರೆ ಅವರು ಪಾಡು ಹೇಳತೀರದಾಗಿತ್ತು.

ಪ್ರತಿನಿತ್ಯ ಈ ದಾರಿಯಲ್ಲಿ 100ಕ್ಕೂ ಅಧಿಕ ಬಸ್‌ಗಳು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದವು. ಕಳೆದೆರೆಡು ವರ್ಷದಿಂದ ಭಾರಿ ವಾಹನಗಳೀಗೆ ಸಂಚಾರ ನಿಷೇಧವಾದ ಹಿನ್ನೆಲೆ ಪ್ರಯಾಣಿಕರ ಗೋಳು ಹೇಳತೀರದಾಗಿತ್ತು. ಜೀಪುಗಳು, ಖಾಸಗಿ ವಾಹನಗಳ​ಲ್ಲಿ ಕೇಳಿದಷ್ಟು ಹಣ ತೆತ್ತು ಪ್ರಯಾ​ಣಿ​ಕರು ಸಾಗ​ಬೇ​ಕಾ​ಗಿತ್ತು. ಒಂದು ರೀತಿಯಲ್ಲಿ ಇಲ್ಲಿ ಪ್ರಯಾಣಿಕರ ಹಗಲು ದರೋಡೆ ನಡೆಯುತ್ತಿತ್ತು.

ಅಂತಾ​ರಾಜ್ಯ ಸಂಚಾರ ಶುರು:

ಬುಧವಾರದಿಂದ ಕರ್ನಾಟಕ ಕೇರಳ ಅಂತಾರಾಜ್ಯ ಹೆದ್ದಾರಿಯಲ್ಲಿ ಬ​ಸ್‌ಗಳು ಎಂದಿನಂತೆ ತಮ್ಮ ಸಂಚಾರ ಆರಂಭಿಸಿವೆ. ಇದರಿಂದ ಹರ್ಷಗೊಂಡ ಸಾರ್ವಜನಿಕರು ಪರಸ್ಪರ ದೂರವಾಣಿಯ ಮೂಲಕ ವಿಚಾರ ವಿನಿಮಯ ಮಾಡಿಕೊಳ್ಳುವುದು, ಸಂತಸ ವ್ಯಕ್ತಪಡಿಸುವುದು ಕಂಡು ಬಂತು.

ಕಾಮ​ಗಾರಿ ಮುಗಿ​ದಿ​ಲ್ಲ:

ಆದರೆ, ಎರಡು ವರ್ಷದಿಂದ ಈ ಹೆದ್ದಾರಿ ವಿಕೋಪದ ತಾಣವಾಗಿ ಪರಿವರ್ತಿತವಾಗಿದೆ. ಇನ್ನು ಕೂಡಾ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಜನಸಾಮಾನ್ಯರಿಗೆ ಆಗುತ್ತಿದ್ದ ತೊಂದರೆಯನ್ನು ಗಮನಿಸಿ ಜಿಲ್ಲಾಧಿಕಾರಿ ಬಸ್‌ ಸಂಚಾ​ರಕ್ಕೆ ಅನುಮತಿ ನೀಡಿ​ದ್ದಾಗಿ ತಿಳಿ​ದು​ಬಂದಿ​ದೆ.

ಮಳೆ ಬಂದರೆ ಈ ರಸ್ತೆ ಮತ್ತೆ ಯಾವ ಸ್ವರೂಪ ತಳೆಯುತ್ತದೆಯೋ ಹೇಳ​ಲಾ​ಗದು. ಬುಧ​ವಾರ ಬಸ್‌ ಸಂಚಾರ ಆರಂಭ​ವಾ​ದೊ​ಡನೆ ಕೇರಳ ಭಾಗ​ದಿಂದ ಕೆಂಪು​ಕ​ಲ್ಲು​ಗ​ಳನ್ನು ಹೇರಿದ ಭಾರಿ ಭಾರದ ಲಾರಿ​ಗಳ ಸಂಚಾರ ಅಬಾ​ಧಿ​ತ​ವಾಗಿ ಶುರು​ವಾ​ಗಿದೆ. ಸುಮಾರು 200ರಷ್ಟುಲಾರಿ​ಗಳು ಬುಧ​ವಾರ ಕರ್ನಾ​ಟಕ ಪ್ರವೇ​ಶಿ​ಸಿವೆ. ಈ ಭಾರದ ಸಂಚಾರ ರಸ್ತೆಗೆ ಮತ್ತೆ ಸಮಸ್ಯೆ ಸೃಷ್ಟಿ​ಸುವ ಆತಂಕ​ವಿ​ದೆ.

ವಿರಾಜಪೇಟೆ ಪಟ್ಟಣ ಕೇರಳದ ಗಡಿ ಭಾಗವಾಗಿದ್ದು ಇಲ್ಲಿ ವ್ಯಾಪಾರ ವಹಿವಾಟುಗಳ ನಡೆಯುತ್ತಿದ್ದು ಈ ರಸ್ತೆಯ ಬಂದ್‌ ನಿಂದ ಪಟ್ಟಣದಲ್ಲಿ ವ್ಯಾಪಾರ ವಹಿವಾಟಿಗೆ ತೊಂದರೆ ಯಾಗಿತ್ತು. ಜಿಲ್ಲಾಡಳಿತ ಸಂಚಾರಕ್ಕೆ ಮುಕ್ತ ಮಾಡಿರುವದರಿಂದ ಒಳ್ಳೆಯದಾಗಿದೆ. ಜೊತೆಗೆ ಕುಸಿತಗೊಂಡ ಸ್ಥಳಗಳಲ್ಲಿ ಶಾಶ್ವತ ಪರಿಹಾರ ಕಾಮ​ಗಾರಿ ನಡೆ​ಸ​ಬೇ​ಕಾ​ಗಿ​ದೆ.

-ರಶೀದ್‌ ಯು.ಕೆ., ಉದ್ಯಮಿ, ವಿರಾ​ಜ​ಪೇ​ಟೆ.

ಜಿಲ್ಲಾಡಳಿತ ಅಂತಾ​ರಾಜ್ಯ ಹೆದ್ದಾ​ರಿಯ ಪರಿ​ಸ್ಥಿ​ತಿ​ಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ ಹೆದ್ದಾರಿಯಲ್ಲಿ ಆರು ಚಕ್ರಕಿಂತ ಕಡಿಮೆ ಇರುವ ವಾಹನಗಳು ಸಂಚರಿಸಲು ಅನುಮತಿ ಕೊಟ್ಟಿದೆ.

-ಜಯಕುಮಾರ್‌, ಡಿವೈ​ಎಸ್ಪಿ, ವಿರಾ​ಜ​ಪೇ​ಟೆ.

Follow Us:
Download App:
  • android
  • ios