ರಾಮನಗರ [ಜು.14]: ಸ್ಕೂಟಿಗೆ ಡಿಕ್ಕಿ ಹೊಡೆದು ಚಾಲ​ಕನ ನಿಯಂತ್ರಣ ಕಳೆ​ದು​ಕೊಂಡ ಖಾಸಗಿ ಗಾರ್ಮೆಂಟ್ಸ್‌ಗೆ ಸೇರಿದ ಬಸ್ಸೊಂದು ಉರು​ಳಿ ಬಿದ್ದು 21 ಮಂದಿ ಗಾಯ​ಗೊಂಡಿ​ರುವ ಘಟನೆ ತಾಲೂ​ಕಿನ ಜಯ​ಪುರ ಗ್ರಾಮದ ಬಳಿ ಶನಿ​ವಾರ ನಡೆ​ದಿದೆ.

ಘಟ​ನೆಯಲ್ಲಿ ಸ್ಕೂಟಿ ಚಾಲನೆ ಮಾಡು​ತ್ತಿದ್ದ ರಾಮ​ನ​ಗರ ತಾಲೂ​ಕಿನ ಹೊಸೂರು ಗ್ರಾಮದ ಶ್ವೇತಾ ಹಾಗೂ ಬಸ್ಸಿ​ನಲ್ಲಿ ಪ್ರಯಾ​ಣಿ​ಸು​ತ್ತಿದ್ದ ತುಮ​ಕೂರು ಜಿಲ್ಲೆ ಕುಣಿ​ಗಲ್‌ ತಾಲೂ​ಕಿನ ಕೆ.ಬ್ಯಾ​ಡ​ರ​ಹ​ಳ್ಳಿಯ ಸವಿತಾ, ಶಾರ​ದ​ಮ್ಮ, ಉಜಿ​ನಿಯ ಸೀತಮ್ಮ, ಸುಮಿತ್ರಾ, ಚಿಕ್ಕ​ಬ್ಯಾ​ಡ​ರ​ಹ​ಳ್ಳಿಯ ಸುಮಿ​ತ್ರಮ್ಮ, ಜಯಮ್ಮ, ಜ್ಯೋತಿ, ಲಕ್ಷ್ಮಿ, ಜೈಶೀಲಾ, ಲೀಲಾ​ವತಿ, ಲಕ್ಷ್ಮಿ​ದೇವಿ, ರಾಮ​ನ​ಗರ ತಾಲೂ​ಕಿನ ಕ್ಯಾಸಾ​ಪುರ ಗ್ರಾಮದ ಲಕ್ಷ್ಮಿ, ಸುನಿತಾ, ಮಂಗ​ಳ​ಗೌರಿ, ಚೌಡೇ​ಶ್ವರಿ ಹಳ್ಳಿಯ ರೂಪಾ, ಶೈಲಜಾ, ಪ್ರಭಾ​ವತಿ, ಸುಮಾ, ಹಿಪ್ಪೆ ಮರ​ದ​ದೊಡ್ಡಿ ಗ್ರಾಮದ ಅನಿತಾ, ಚಾಮ​ನ​ಹ​ಳ್ಳಿಯ ರತ್ನ ಗಾಯ​ಗೊಂಡಿ​ದ್ದಾರೆ. 

ತೀವ್ರ​ವಾಗಿ ಗಾಯ​ಗೊಂಡಿ​ರುವ ಶ್ವೇತಾ, ಜ್ಯೋತಿ ಸೇರಿ​ದಂತೆ ಐದಾರು ಮಹಿ​ಳೆ​ಯ​ರಿಗೆ ಜಿಲ್ಲಾ​ಸ್ಪ​ತ್ರೆ​ಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಖಾಸಗಿ ಆಸ್ಪ​ತ್ರೆಗೆ ದಾಖಲು ಮಾಡ​ಲಾ​ಗಿದೆ. ರಾಮನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.