ಗುಂಡ್ಲುಪೇಟೆ [ಸೆ.17]:  ಆಯುಷ್ಮಾನ್‌ ಭಾರತ್‌ ಆರೋಗ್ಯ ಯೋಜನೆಯಲ್ಲಿ ಬಿಪಿಎಲ್‌ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರು. ಆರೋಗ್ಯ ವಿಮೆ ಸಿಗಲಿದೆ ಎಂದು ಜಿಪಂ ಉಪಾಧ್ಯಕ್ಷ ಕೆ.ಎಸ್‌. ಮಹೇಶ್‌ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಈ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಆಗುತ್ತಿದೆ ಎಂದರು.

ತಾಪಂ ಅಧ್ಯಕ್ಷ ಕೆ.ಎಸ್‌. ಜಗದೀಶಮೂರ್ತಿ ಮಾತನಾಡಿ, ಆರೋಗ್ಯ ವಿಮೆಯಡಿ ಎಲ್ಲ ಸರ್ಕಾರಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಸಿಗಲಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಎಸ್‌.ರವಿಕುಮಾರ್‌ ಮಾತನಾಡಿ, ಬಿಪಿಎಲ್‌ ಕುಟುಂಬಕ್ಕೆ 5 ಲಕ್ಷ ರು. ವಿಮೆ, ಎಪಿಎಲ್‌ ಕುಟುಂಬಕ್ಕೆ 1.5 ಲಕ್ಷ ರು.ಆರೋಗ್ಯ ವಿಮೆಯಡಿ ಚಿಕಿತ್ಸೆಯ ಖರ್ಚು ಸಿಗಲಿದೆ ಎಂದರು.

ತಹಸೀಲ್ದಾರ್‌ ಎಂ. ನಂಜುಂಡಯ್ಯ ಮಾತನಾಡಿ, ಬಿಪಿಎಲ್‌ ಕುಟುಂಬ ಪಡಿತರ ಚೀಟಿ ಹಾಗೂ ಆಧಾರ್‌ ಕಾರ್ಡ್‌ ಜೆರಾಕ್ಸ್‌ಯೊಂದಿಗೆ 10 ರು. ಹಣ ಪಾವತಿಸಿ ನೋಂದಾಯಿಸಿ. ಈ ಯೋಜನೆ ಕಾರ್ಡ್‌ ನೋಂದಣಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಸೇವಾ ಸಿಂಧೂ ಕೇಂದ್ರಗಳಲ್ಲಿ ನೋಂದಣಿ ಮಾಡಿಸುವ ಸೌಲಭ್ಯ ಮಾಡಿಸಿಕೊಳ್ಳಿ ಎಂದರು.

ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರವೀಂದ್ರನ್‌, ಹಿರಿಯ ಆರೋಗ್ಯ ನಿರೀಕ್ಷಕ ಅಂಕಪ್ಪ ಸೇರಿದಂತೆ ನೂರಾರು ಮಂದಿ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು. ಚಾಲನೆ ಬಳಿಕ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಯಿತು.