ನಾಲತವಾಡ (ತಾ:ಮುದ್ದೇ​ಬಿ​ಹಾ​ಳ):(ಫೆ.01): ನೀರು ಕುಡಿದ ಕ್ಷಣಾರ್ಧದಲ್ಲೇ ಬೆಲೆ ಬಾಳುವ ಕೋಣ ಮತ್ತು ಎಮ್ಮೆ ಎರಡೂ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಅಂಬೇಡ್ಕರ್‌ ನಗರದಲ್ಲಿ ಶುಕ್ರ​ವಾರ ನಡೆದಿದ್ದು, ಅವರಲ್ಲಿ ಭೀತಿ ಹುಟ್ಟಿ​ಸಿದೆ.

ಸ್ಥಳೀಯ ದಲಿತ ಕುಟುಂಬದ ರೇಣುಕಾ ತಳವಾರ ಎಂಬ ಮಹಿಳೆಗೆ ಇವೆರಡೂ ಜಾನುವಾರುಗಳು ಸೇರಿವೆ. ಎಮ್ಮೆ ಗರ್ಭ ಧರಿಸಿತ್ತು. ಕೋಣ ಮತ್ತು ಎಮ್ಮೆ ಏಕಕಾಲಕ್ಕೆ ಮೃತಪಟ್ಟಿದ್ದರಿಂದ ಜೀವನಕ್ಕೆ ಆಧಾರ ಸ್ತಂಭ ಕಳ​ಚಿ​ದಂತಾ​ಗಿ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕ್ಷಣಾರ್ಧದಲ್ಲೇ ಬೆಲೆ ಬಾಳುವ ಜಾನುವಾರುಗಳ ಸಾವು ಸಹಜವಲ್ಲ, ಬೆಳವಣಿಗೆ ಸಹಿಸದ ಕೆಲವು ದುಷ್ಕ​ರ್ಮಿ​ಗಳು ನೀರು ತರಲು ಕೆರೆಗೆ ಹೋದ ವೇಳೆ ಸಮಯ ಸಾಧಿಸಿ ನೀರಲ್ಲಿ ವಿಷ ಬೆರೆಸಿರಬೇಕು ಎಂದು ಕುಟುಂಬಸ್ಥರು ಶಂಕೆ ವ್ಯಕ್ತ​ಪ​ಡಿ​ಸಿ​ದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್‌ ಠಾಣೆ​ಯಲ್ಲಿ ಪ್ರಕ​ರಣ ದಾಖ​ಲಾ​ಗಿಲ್ಲ.