ಹಾವಿನ ದ್ವೇಷ 12 ವರ್ಷಎನ್ನುವಂತೆ ಹೊಡೆದ ವ್ಯಕ್ತಿಯನ್ನು ಅಟ್ಟಿಸಿಕೊಂಡು ಹೋಗುತ್ತೆ ಈ ಕೋಣ
ಹಾವಿನ ದ್ವೇಷ 12 ವರ್ಷ ಎನ್ನುವಂತೆ, ಈ ಕೋಣವೊಂದು ಹೊಡೆದವನ ಬೆನ್ನ ಹಿಂದೆ ಬಿದ್ದಿದೆ. ಆತ ಎಲ್ಲಿ ಹೋದರು ಸಹ ಕೋಣ ಹಿಂದೆನೇ ಹೋಗುತ್ತಿದೆ.
ವರದಿ- ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ, (ಜೂನ್.26): ಹಾವಿನ ದ್ವೇಷ 12 ವರ್ಷ ಅನ್ನೋ ಮಾತಿದೆ. ಆದರೆ ಇಲ್ಲೊಂದು ಊರಲ್ಲಿ ಕೋಣದ ದ್ವೇಷ ಒಂದು ವಾರದ ಬಳಿಕ ಆರಂಭವಾಗಿದೆ. ಕೋಣಕ್ಕೆ ಹೊಡೆದ ಹಿನ್ನಲೆಯಲ್ಲಿ ಆ ಕೋಣ ಇದೀಗ ಬಡೆದವನ ಬೆನ್ನಿಗೆ ಬಿದ್ದಿದ್ದು, ಎಲ್ಲಿ ಹೋದರು ಆತನನ್ನು ಬಿಡುತ್ತಿಲ್ಲ. ಅಷ್ಟಕ್ಕೂ ಏನಿದು ಕೋಣದ ದ್ವೇಷದ ಕಥೆ ನೋಡೋಣ ಈ ರಿಪೋರ್ಟ್ ನಲ್ಲಿ.
ಕೊಪ್ಪಳ ಸದಾ ಒಂದಿಲ್ಲೊಂದು ಸುದ್ದಿಯಲ್ಲಿ ಸುದ್ದು ಮಾಡುತ್ತಲೆ ಇರುತ್ತದೆ. ಈ ಬಾರಿ ಕೊಪ್ಪಳ ಸದ್ದು ಮಾಡಿರುವುದು ಕೋಣವೊಂದರ ವಿಷಯದಲ್ಲಿ. ಹೌದು ಕೊಪ್ಪಳ ತಾಲೂಕಿನ ಹಳೆಬಂಡಿಹರ್ಲಾಪೂರ ಗ್ರಾಮದಲ್ಕಿ ಇದೀಗ ಅಪರೂಪದ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದೆ.
ರೈತರ ಹಿತಕ್ಕಾಗಿ ದೀರ್ಘದಂಡ ನಮಸ್ಕಾರ ಹಾಕುತ್ತಲೇ ಅಂಜನಾದ್ರಿ ಬೆಟ್ಟ ಏರಿದ ಸ್ವಾಮೀಜಿ
ಏನಿದು ಅಚ್ಚರಿಯ ಘಟನೆ?
ಈ ಗ್ರಾಮದಲ್ಲಿರುವ ಕಂಠಿದುರ್ಗಮ್ಮ ದೇವಸ್ಥಾನದ ದೇವರಿಗೆ ಕಳೆದ ಎರಡು ವರ್ಷಗಳ ಹಿಂದೆ ಗ್ರಾಮಸ್ಥರು ಕೋಣವೊಂದನ್ನು ಬಟ್ಟಿದ್ದಾರೆ. ಈ ಕೋಣ ಊರೆಲ್ಲ ಅಡ್ಡಾಡಿಕೊಂಡು ಇರುತ್ತದೆ. ಈ ವೇಳೆ ಕಳೆದ 8 ದಿನಗಳ ಹಿಂದೆ ಗ್ರಾಮದ ರೋಶನ್ ಅಲಿ ಎನ್ನುವರು ದೇವರಿಗೆ ಬಿಟ್ಟ ಕೋಣಕ್ಕೆ ಒಡೆದಿದ್ದಾರೆ. ಅದಾದ 6 ದಿನಗಳ ಬಳಿಕ ನಿನ್ನೆಯಿಂದ ದೇವರ ಕೋಣ ತನಗೆ ಒಡೆದ ರೋಶನ್ ಅಲಿ ಬೆನ್ನುಬಿದ್ದಿದ್ದು, ರೋಶನ್ ಲಿ ಎಲ್ಲಿಗೆ ಹೋಗುತ್ತಾನೋ ಅಲ್ಲಿಗೆಲ್ಲ ಹೋಗುವ ಕೋಣ, ಆತನ ಮೇಲೆ ದಾಳಿ ಮಾಡಲು ಮುಂದಾಗಿದೆ. ಇದರಿಂದಾಗಿ ರೋಶನ್ ಅಲಿಭಯವಾಗಿದ್ದು, ಮನೆ ಬಿಟ್ಟು ಹೋರಗೆ ಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ರೋಶನ್ ಅಲಿ ಬೆನ್ನು ಬಿಡದ ಕೋಣ
ಇನ್ನು ರೋಶನ್ ಅಲಿ ಜೊತೆಗೆ ಬಂಡಿಹರ್ಲಾಪುರ ಗ್ರಾಮದ ದೇವರಾಜ್, ಅನಿಲ್ ಎನ್ನುವರೂ ಸಹ ಕೋಣಕ್ಕೆ ಒಡೆದಿದ್ದಾರಂತೆ. ಆದರೆ ಅವರಿಗೆ ಬೆನ್ನ ಹಿಂದೆ ಕೋಣ ಬಿದ್ದಿಲ್ಲ.ಆದರೆ ರೋಶನ್ ಅಲಿಗೆ ಮಾತ್ರ ಕೋಣ ಎಲ್ಲಿಯೂ ಹೋಗದಂತೆ ದಿಗ್ಭಂಧನ ಹಾಕಿದ್ದು, ರಾತ್ರಿಯಿಡಿ ಮನೆಯ ಮುಂದೆಯೇ ಇರುತ್ತದೆ.ಬೆಳಿಗ್ಗೆ ಸಹ ಮನೆ ಬಿಟ್ಟು ಹೋರಗೆ ಬರಲಾರದಂತಹ ಪರಿಸ್ಥಿತಿ ರೋಶನ್ ಅಲಿಗೆ ನಿರ್ಮಾಣವಾಗಿದೆ.
ರೋಶನ್ ಅಲಿಗೆ ಮಾತ್ರ ತೊಂದರೆ
ಇನ್ನು ಕೋಣ ಕೇವಲ ರೋಶನ್ ಅಲಿಗೆ ಮಾತ್ರ ಈ ರೀತಿ ಮಾಡುತ್ತದೆ ಹೊರತು ಗ್ರಾಮದ ಯಾವೊಬ್ಬರಿಗೂ ಸಹ ಈ ರೀತಿ ಮಾಡುವುದಿಲ್ಲ.ಇನ್ನು ಇದೇಲ್ಲ ದೇವಿಯ ಪವಾಡ ಎನ್ನುವ ಗ್ರಾಮಸ್ಥರು ದೇವಿಗೆ ಬಿಟ್ಟ ಕೋಣಕ್ಕೆ ಯಾರೂ ಹೊಡೆಯ ಬಾರದೆಂದು ಮನವಿ ಮಾಡುತ್ತಾರೆ.
ಇನ್ನು ದೇವರಿಗೆ ಬಿಟ್ಟ ಕೋಣಕ್ಕೆ ಹೊಡೆದ ಹಿನ್ನಲೆಯಲ್ಲಿ ಗ್ರಾಮಸ್ಥರು ಗ್ರಾಮಸ್ಥರು ದೇವಿಗೆ ಕ್ಷಮೆ ಕೇಳಲು ಹೇಳಿದ್ದರಂತೆ. ಅದರಂತೆ ಈಗಾಗಲೇ ರೋಶನ್ ಅಲಿ ದೇವಿಗೆ ಕ್ಣಮೆ ಕೇಳಿ,ಕೋಣಕ್ಕೆ ಅಕ್ಕಿ,ಬೆಲ್ಲ ಇಟ್ಟಿದ್ದಾನೆ. ಆದರೂ ಸಹ ಕೋಣ ರೋಶನ್ ಅಲಿಗೆ ಬೆನ್ನು ಬಿಳುವುದು ಮಾತ್ರ ಕಡಿಮೆ ಮಾಡಿಲ್ಲ. ಇದರಿಂದಾಗಿ ರೋಶನ್ ಅಲಿ ಗೆ ಜೀವ ಭಯವಾಗಿದ್ದು,ಹೊರಗಡೆ ಹೋಗಬೇಕಾದರೆ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ರೋಶನ್ ಅಲಿ ಗೆ ನಿರ್ಮಾಣವಾಗಿದೆ. ಒಟ್ಟಿನಲ್ಲಿ ತನಗೆ ಹೊಡೆದ ವ್ಯಕ್ತಿಯ ಮೇಲೆ ಕೋಣ ಸೇಡು ತಿರಿಸಿಕೊಳ್ಳುತ್ತಿರುವುದು ನಿಜಕ್ಕೂ ಅಚ್ಚರಿಯೇ ಸರಿ.