'ಬಿಎಸ್‌ವೈ ಕೊಟ್ಟ ಮಾತಿಗೆ ತಪ್ಪಲ್ಲ: ಯಾರಿಗೂ ಅನ್ಯಾಯ ಆಗಲ್ಲ'..!

ಯಡಿಯೂರಪ್ಪ ಅವರು ಈಗಾಗಲೇ ಹಲವಾರು ಬಾರಿ ಹೇಳಿದಂತೆ, 17 ಮಂದಿ ಶಾಸಕರ ತ್ಯಾಗದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರು ಹೇಳಿದ ಮಾತಿಗೆ ತಪ್ಪುವ ವ್ಯಕ್ತಿತ್ವ ಉಳ್ಳವರಲ್ಲ ಎಂದು ಸಚಿವ ಸಿ.ಸಿ. ಪಾಟೀಲ್‌ ಹೇಳಿದ್ದಾರೆ.

BSY will not breack his  promise says cc patil

ಚಿಕ್ಕಬಳ್ಳಾಪುರ(ಜ.18): ಶನಿನಿವಾರ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮಿಸಲಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು ಸಚಿವ ಸಿ.ಸಿ. ಪಾಟೀಲ್‌ ಅಭಿಪ್ರಾಯಪಟ್ಟರು.

ನಗರ ಹೊರವಲಯದ ಡಿಸ್ಕವರಿ ವಿಲೇಜ್‌ ರೆಸಾರ್ಟಿನವಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈಗಾಗಲೇ ಹಲವಾರು ಬಾರಿ ಹೇಳಿದಂತೆ, 17 ಮಂದಿ ಶಾಸಕರ ತ್ಯಾಗದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರು ಹೇಳಿದ ಮಾತಿಗೆ ತಪ್ಪುವ ವ್ಯಕ್ತಿತ್ವ ಉಳ್ಳವರಲ್ಲ, ಹಾಗಾಗಿ ಅಮಿತ್‌ ಶಾ ಅವರ ಆಗಮನದ ನಂತರ ಸಂಪುಟ ವಿಸ್ತರಣೆಯಾಗಲಿದೆ ಎಂದಿದ್ದಾರೆ.

ಪ್ರಯಾಣ ಸಮಯ ಉಳಿಕೆ, ಮೈಸೂರು- ಬೆಳಗಾವಿ ವಿಮಾನ ಹಾರಾಟ ಆರಂಭ

ರಾಜ್ಯದಲ್ಲಿ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಯಾರಿಗೂ ಅನ್ಯಾಯ ಆಗಲು ಬಿಡಲ್ಲ. ಇನ್ನು ಸೋತ ಶಾಸಕರಿಗೂ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು ಶೀಘ್ರವೇ ಸಿಹಿ ಸುದ್ದಿ ದೊರೆಯಲಿದೆ ಎಂದು ಹೇಳಿದ್ದಾರೆ.

ಮಂಡ್ಯ: ಆದಿಚುಂಚನಗಿರಿಯಲ್ಲಿ ಸಂತ ಭಕ್ತ ಸಂಗಮ ಸಮಾರಂಭ

Latest Videos
Follow Us:
Download App:
  • android
  • ios