ರಾಮನಗರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಗೆ ಎಚ್ಚರಿಕೆ ಕೊಟ್ಟ ಮುಖಂಡ

 ಟೀಕಿ​ಸುವ ಕೆಲಸ ಮಾಡಿ​ದರೆ ಅವ​ರು ಹೋಗುವ ಸ್ಥಳ​ಗ​ಳಲ್ಲಿ ಘೇರಾವ್‌ ಮಾಡಬೇಕಾ​ಗು​ತ್ತದೆ ಮಾಜಿ ಸಿಎಂ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ ಮುಕಂಡರು. 

BSP Leaders Warns TO JDS Leader HD Kumaraswamy snr

ರಾಮನಗರ (ಜ.28):  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಹುಜನ ಸಮಾಜ ಪಾರ್ಟಿ (ಬಿ​ಎ​ಸ್ಪಿ​)ಯನ್ನು ಟೀಕಿ​ಸುವ ಕೆಲಸ ಮಾಡಿ​ದರೆ ಅವ​ರು ಹೋಗುವ ಸ್ಥಳ​ಗ​ಳಲ್ಲಿ ಘೇರಾವ್‌ ಮಾಡಬೇಕಾ​ಗು​ತ್ತದೆ ಎಂದು ಪಕ್ಷದ ಕರ್ನಾಟಕ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಎಚ್ಚ​ರಿಕೆ ನೀಡಿ​ದರು.

ನಗ​ರದ ಪ್ರವಾಸಿ ಮಂದಿರ​ದಲ್ಲಿ  ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಕಳೆದ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು, ತಪ್ಪಾಯಿತು ಎಂದು ಕುಮಾರಸ್ವಾಮಿ ಹತಾಶರಾಗಿ ಹೇಳಿಕೆ ನೀಡಿದ್ದಾರೆ. ಹತ್ತಿದ ಏಣಿ​ಯನ್ನು ಒದೆ​ಯು​ವುದು ದೇವೇ​ಗೌ​ಡ ಕುಟುಂಬ​ದ​ವರ ರಾಜ​ಕೀಯ ಚರಿ​ತ್ರೆ​ಯ​ಲ್ಲಿದೆ. ಅದನ್ನೇ ಕುಮಾ​ರ​ಸ್ವಾಮಿ ಪಾಲಿ​ಸು​ತ್ತಿ​ದ್ದಾರೆ ಎಂದು ಟೀಕಿ​ಸಿ​ದರು.

ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನ ಘೋಷಿಸಿದ ಕುಮಾರಸ್ವಾಮಿ .

ಚುನಾ​ವ​ಣೆ​ಯ​ಲ್ಲಿನ ಮೈತ್ರಿ​ಯಿಂದ ಜೆಡಿ​ಎಸ್‌ನಿಂದ ಬಿಎಸ್ಪಿಗೆ ಹಾನಿಯಾಗಿದೆಯೇ ಹೊರತು ಬಿಎಸ್ಪಿಯಿಂದ ಜೆಡಿಎಸ್‌ಗೆ ಯಾವುದೇ ಹಾನಿಯಾಗಿಲ್ಲ. ರಾಜ್ಯದಲ್ಲಿರುವ 224 ಕ್ಷೇತ್ರಗಳ ಪೈಕಿ ಬಿಎಸ್ಪಿ ಕೇವಲ 19 ಸೀಟುಗಳನ್ನು ಬಿಟ್ಟುಕೊಟ್ಟಿದ್ದು, ಈ ಜಾಗಗಳಲ್ಲಿ ಜೆಡಿಎಸ್‌ 5-6ನೇ ಸ್ಥಾನದಲ್ಲಿರುವ ಕ್ಷೇತ್ರಗಳಾಗಿವೆ. ಆದರೆ, ಬಿಎ​ಸ್ಪಿಯು 2-3ನೇ ಸ್ಥಾನದಲ್ಲಿರುವ ಸುಮಾರು ಸೀಟುಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ.

ಚುನಾ​ವ​ಣೆ​ಯಲ್ಲಿ 18-20 ಜಿಲ್ಲೆಗಳಲ್ಲಿ ಬಿಎಸ್ಪಿಯಿಂದ ಜೆಡಿಎಸ್‌ಗೆ ಅನುಕೂಲವಾಗಿದೆ. ಜೆಡಿಎಸ್‌ ಜೊತೆ ಬಿಎಸ್ಪಿ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಕನಿಷ್ಠ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಿತ್ತು. ಸುಮಾರು 10-12 ಲಕ್ಷ ವೋಟು ಬರುತ್ತಿತ್ತು. ಕೊಳ್ಳೇಗಾಲ ಕ್ಷೇತ್ರದಲ್ಲಿ ಎನ್‌.ಮಹೇಶ್‌ ಅವರು ಗೆಲುವು ಸಾ​ಧಿಸಿರುವುದು ಪಕ್ಷ ಹಾಗೂ ಸ್ವಂತ ಛಲದಿಂದ ಹೊರೆತು ಜೆಡಿ​ಎಸ್‌ ನಿಂದಲ್ಲ. ಕುಮಾರಸ್ವಾಮಿ ಅವರು ಮಾತ​ನಾ​ಡು​ವಾಗ ಎಚ್ಚರವಹಿ​ಸ​ಬೇಕು ಎಂದು ಮುನಿ​ಯಪ್ಪ ಸಲಹೆ ನೀಡಿ​ದರು.

ಫೆ. 1ರಂದು ಡೀಸಿ ಕಚೇರಿ ಎದುರು ಪ್ರತಿ​ಭ​ಟನೆ:

ಎಸ್‌ಸಿ, ಎಸ್‌ಟಿ ವಿದ್ಯಾ​ರ್ಥಿ​ಗಳ ವಿದ್ಯಾರ್ಥಿ ವೇತನ ಮುಂದು​ವ​ರೆ​ಸು​ವುದು, ಜನ​ಸಂಖ್ಯೆಗೆ ಅನು​ಗು​ಣ​ವಾಗಿ ವಿದ್ಯಾ​ಭ್ಯಾಸ ಮತ್ತು ಉದ್ಯೋ​ಗ​ದಲ್ಲಿ ಮೀಸ​ಲಾತಿ ಜಾರಿ​ಗೊ​ಳಿ​ಸುವುದು ಸೇರಿ​ದಂತೆ ಹಲ​ವಾರು ಬೇಡಿ​ಕೆ​ಗ​ಳನ್ನು ಮುಂದಿ​ಟ್ಟು​ಕೊಂಡು ಫೆ. 1ರಂದು ರಾಜ್ಯದ ಎಲ್ಲ ಜಿಲ್ಲಾ​ಧಿ​ಕಾ​ರಿ​ಗಳ ಕಚೇರಿ ಎದುರು ಪ್ರತಿ​ಭ​ಟನೆ ನಡೆ​ಸ​ಲಾ​ಗು​ವುದು ಎಂದು ಮುನಿ​ಯಪ್ಪ ಹೇಳಿದರು.

ಕೇಂದ್ರ ಸರ್ಕಾರ ರೈತ ವಿರೋ​ಧಿ​ಯಾದ ಮೂರು ಕೃಷಿ ಮಸೂ​ದೆ​ಗ​ಳನ್ನು ವಾಪಸ್‌ ಪಡೆ​ಯ​ಬೇಕು. ದೆಹ​ಲಿ​ಯಲ್ಲಿ ಗಣ​ರಾ​ಜ್ಯೋ​ತ್ಸವ ದಿನ​ದಂದು ದುಷ್ಕೃತ್ಯ ಎಸ​ಗಿ​ರುವ ಕಿಡಿ​ಗೇ​ಡಿ​ಗಳ ವಿರುದ್ಧ ಕಠಿಣ ಕ್ರಮ​ಕೈ​ಗೊ​ಳ್ಳ​ಬೇಕು. ರೈತ​ರನ್ನು ಭಯೋ​ತ್ಪಾ​ದ​ಕ​ರೆಂದು ಹೇಳಿ​ರುವ ಕೃಷಿ ಸಚಿವ ಬಿ.ಸಿ.​ಪಾ​ಟೀಲ್‌ ಅವ​ರನ್ನು ಸಂಪು​ಟ​ದಿಂದ ವಜಾ ಮಾಡ​ಬೇಕು ಎಂದು ಒತ್ತಾ​ಯಿ​ಸಿ​ದರು.

ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಮುಂತಾದ ದಿನ​ನಿ​ತ್ಯದ ಅಗತ್ಯ ವಸ್ತು​ಗಳ ಬೆಲೆ​ಯನ್ನು ದಿನ​ದಿಂದ ದಿನಕ್ಕೆ ಹೆಚ್ಚಿ​ಸು​ತ್ತಿದ್ದು, ಇದ​ರಿಂದ ಕೋಟ್ಯಂತರ ಜನ​ರಿಗೆ ತೊಂದರೆ ಆಗು​ತ್ತಿದೆ. ಎಲ್ಲಾ ದಿನ​ನಿ​ತ್ಯದ ಅಗತ್ಯ ವಸ್ತು​ಗಳ ಬೆಲೆ​ಯನ್ನು ಇಳಿಕೆ ಮಾಡ​ಬೇಕು ಎಂದು ಮುನಿ​ಯಪ್ಪ ಒತ್ತಾಯ ಮಾಡಿ​ದರು.

Latest Videos
Follow Us:
Download App:
  • android
  • ios