ನಡೆಯುತ್ತಿದ್ದ ತಂಗಿಯ ಬಾಲ್ಯ ವಿವಾಹವನ್ನು ಅಣ್ಣನೋರ್ವ ತಡೆದಿದ್ದಾನೆ. ಈ ಮೂಲಕ ತಂಗಿಯನ್ನು ರಕ್ಷಣೆ ಮಾಡಿದ್ದಾನೆ
ಗೋಕಾಕ್ (ಡಿ.19): ತಂಗಿಯ ಬಾಲ್ಯ ವಿವಾಹವನ್ನು ಸ್ವತಃ ಅಣ್ಣನೇ ತಡೆದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ತಂಗಿಯ ಬಾಲ್ಯವಿವಾಹ ನಿಲ್ಲಿಸಿದ ಅಣ್ಣ ರಾಜು ಮಗೆನ್ನವರ್ ಎಂದು ತಿಳಿದು ಬಂದಿದೆ.
ವಿದ್ಯಾಭ್ಯಾಸ ಕೊಡಿಸುವುದಾಗಿ ಹೇಳಿ ತಮ್ಮ ಸಂಬಂಧಿಕರ ಬಾಲಕಿಯನ್ನಿಟ್ಟು ಕೊಣ್ಣೂರಿಗೆ ಕರೆದುಕೊಂಡು ಬಂದಿದ್ದ ಸೋದರತ್ತೆ ಮತ್ತು ಮಾವ ಈಕೆಗೆ ಬಾಲ್ಯ ವಿವಾಹ ಮಾಡಲು ಮುಂದಾಗಿದ್ದರು. ಆದರೆ, ಬಾಲಕಿಗೆ ಈಗ 16 ವಷÜರ್ ಮತ್ತು ಮದುವೆಯಾಗುವ ವರನಿಗೆ 24 ವರ್ಷ. ವರ ಕೊಣ್ಣೂರಿನ ರಮೇಶ್ ಕೆಂಪಣ್ಣ ಮೊದಗಿ ಎಂದು ತಿಳಿದುಬಂದಿದೆ. ಶುಕ್ರವಾರ ಯುವಕನ ಜೊತೆ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು.
ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಸಿಕ್ಕಿಬಿದ್ದಳು ಆಟೋ ಚಾಲಕನ ಜೊತೆ : ಕುತೂಹಲದ ಲವ್ ಸ್ಟೋರಿ ..
ಆದರೆ, ತನ್ನ ತಂಗಿಯ ವಿವಾಹ ಮಾಡುತ್ತಿರುವುದನ್ನು ಅರಿತ ಬಾಲಕಿಯ ಅಣ್ಣ ರಾಜು, ಸ್ಥಳೀಯ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
