ಬಾಣಂತಿಗೆ ಸ್ಟ್ರೆಚರ್ ನೀಡದೇ ಅಮಾನವೀಯವಾಗಿ ವರ್ತಿಸಿದ ಬ್ರಿಮ್ಸ್ ಸಿಬ್ಬಂದಿ

- ಬೀದರ್ ಬ್ರಿಮ್ಸ್‌ನಲ್ಲಿ ಅಮಾನವೀಯ ಘಟನೆ 

-ಬಿಎಸ್‌ವೈ ಭೇಟಿ ಬಳಿಕವೂ ಮರುಕಳಿಸಿದ ಅಮಾನವೀಯ ಘಟನೆ 

- ಬಾಣಂತಿ ಪರದಾಟ ಕೇಳದ ಬ್ರಿಮ್ಸ್ ಸಿಬ್ಬಂದಿ 

BRIMS Bidar hospital facult shows inhumanity with pregnant women

ಬೀದರ್ (ಆ. 10):  ನಿನ್ನೆ ಬಿಎಸ್ ವೈ ಭೇಟಿ ನೀಡಿ ಬ್ರಿಮ್ಸ್ ಅವ್ಯವಸ್ಥೆ ಕಂಡು ಅಲ್ಲಿನ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರೂ ಬ್ರಿಮ್ಸ್  ಸಿಬ್ಬಂದಿ ಬದಲಾಗಿಲ್ಲ. ಇಂದು ಅಮಾನವೀಯ ಘಟನೆ ನಡೆದಿದೆ. 

ಬಾಣಂತಿಗೆ ಸ್ಟ್ರೆಚರ್ ನೀಡದೇ ಬ್ರಿಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ.  ಹೆರಿಗೆಯ ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಬಂದ ಬಾಣಂತಿ ಸ್ಟ್ರೆಚರ್ ಇಲ್ಲದೆ ಪರದಾಡಿದ್ದಾರೆ. ಸ್ಟ್ರೆಚರ್ ಇಲ್ಲದೆ 15 ನಿಮಿಷಕ್ಕೂ ಹೆಚ್ಚು ಹೊತ್ತು ಕಾಯ್ದು ಕೊನೆಗೆ ಬಾಣಂತಿ ನಡೆದುಕೊಂಡೇ ಹೋಗಿದ್ದಾರೆ. 

ಹುಮನಾಬಾದ ತಾಲೂಕಿನ ಮನ್ನಾ ಏಖೇಹಳ್ಳಿ ಗ್ರಾಮದಿಂದ ಹೆಚ್ಚಿನ ಚಿಕಿತ್ಸೆಗೆ ಬಾಣಂತಿ ಹೊನ್ನಮ್ಮ ಬಂದಿದ್ದರು.  ಸ್ಟ್ರೆಚರ್ ಇಲ್ಲದಿದ್ದಕ್ಕೆ ಗ್ಲೂಕೋಸನ್ನ ಕೈಯಲ್ಲೇ ಹಿಡಿದು ಕುಳಿತಿದ್ದರು ಬಾಣಂತಿ ಹೊನ್ನಮ್ಮ.   ಬಾಣಂತಿಯ ಪರದಾಟವನ್ನ ಕೇಳದ ಬ್ರಿಮ್ಸ್ ವೈದ್ಯರು. ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. 

ನಿತ್ಯ ಇಂತಹ ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ಬ್ರಿಮ್ಸ್ ಗೆ ಜನ  ಹಿಡಿ ಶಾಪ ಹಾಕುತ್ತಿದ್ದಾರೆ.   

Latest Videos
Follow Us:
Download App:
  • android
  • ios