ಫೋನ್ ಪೇ ಮೂಲಕ ಲಂಚ : ಪಿಎಸ್‌ಐ ಅಮಾನತು

  •  ಪೋನ್ ಪೇ ಮೂಲಕ ಆನ್‌ಲೈನ್ ಲಂಚಾವತಾರ ಆರೋಪದಡಿಯಲ್ಲಿ ಗುಬ್ಬಿ ಪಿಎಸ್‌ಐ ಸಸ್ಪೆಂಡ್ 
  • ಗುಬ್ಬಿ ಪೊಲೀಸ್ ಠಾಣೆಯ ಪಿಎಸ್‌ಐ ಜ್ಞಾನಮೂರ್ತಿ ಸಸ್ಪೆಂಡ್ 
bribe case gubbi PSI Jnanmurthy  suspended snr

ತುಮಕೂರು  (ಸೆ.10):  ಪೋನ್ ಪೇ ಮೂಲಕ ಆನ್‌ಲೈನ್ ಲಂಚಾವತಾರ ಆರೋಪದಡಿಯಲ್ಲಿ ಗುಬ್ಬಿ ಪಿಎಸ್‌ಐ ಸಸ್ಪೆಂಡ್ ಮಾಡಲಾಗಿದೆ.  ಗುಬ್ಬಿ ಪೊಲೀಸ್ ಠಾಣೆಯ ಪಿಎಸ್‌ಐ ಜ್ಞಾನಮೂರ್ತಿ ಸಸ್ಪೆಂಡ್ ಆಗಿದ್ದಾರೆ. 

ಕಳೆದ ವಾರ ವಿನಾಕಾರಣ ಮ್ಯಾಕ್ಸಿಕ್ಯಾಬ್ ತಡೆದು ಕಿರುಕುಳ ನೀಡಿದ್ದ ಆರೋಪ ಎದುರಿಸುತ್ತಿದ್ದ ಪಿಎಸ್‌ಐ ಜ್ಞಾನಮೂರ್ತಿ  ಕ್ಯಾಬ್ ಚಾಲಕನಿಂದ 7 ಸಾವಿರ ರೂ ಫೋನ್ ಪೇ ಮೂಲಕ ಹಣ ಪಡೆದಿದ್ದರೆನ್ನಲಾಗಿದೆ.  

ರಜೆ ನೀಡಲು ಲಂಚ ಕೇಳಿದ ಸಾರಿಗೆ ಅಧಿಕಾರಿ ಅರೆಸ್ಟ್‌

ಜೀಪ್ ಚಾಲಕ ಕರಿಯಪ್ಪರ ನಂಬರ್ ಗೆ ಫೋನ್ ಪೇ ಮಾಡಿಸಿಕೊಂಡದ್ದ ಪಿಎಸ್ ಐ ಜ್ಞಾನ ಮೂರ್ತಿ ವಿರುದ್ಧ ದೌರ್ಜನ್ಯ ಮಾಡಿದ್ದಾರೆಂದು ಆರೋಪಿಸಿ  ಪ್ರತಿಭಟನೆ ನಡೆಸಲಾಗಿತ್ತು. ಚಾಲಕರು ಕರಿಯಪ್ಪ ವಿರುದ್ಧ ಪ್ರತಿಘಟನೆ ನಡೆಸಿದ್ದರು. 

ಈ ಪ್ರಕರಣ ಸಂಬಂಧ ಪಿಎಸ್‌ಐ ಅಮಾನತು ಮಾಡಿ ತುಮಕೂರು ಎಸ್‌ಪಿ ರಾಹುಲ್ ಕುಮಾರ್ ಶಹಾಪುರ್ ಆದೇಶ ನೀಡಿದ್ದಾರೆ.

Latest Videos
Follow Us:
Download App:
  • android
  • ios