ಬೆಂಗಳೂರು (ಜೂ. 12) ಬ್ರಾಹ್ಮಣರಿಗೂ ಇನ್ನು ಮುಂದೆ ಜಾತಿ ಪ್ರಮಾಣ ಪತ್ರ ಸಿಗಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಬ್ರಾಹ್ಮಣ ಸಮುದಾಯದ ಜನಪ್ರತಿನಿಧಿಗಳು ಪ್ರಮಾಣ ಸಮುದಾಯಕ್ಕೆ ಪ್ರಮಾಣ ಪತ್ರ ವಿತರಿಸಲಿದ್ದಾರೆ ಎಂದು ಹೇಳಿದ್ದಾರೆ.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕಚೇರಿ ಮತ್ತು ವೆಬ್ ತಾಣ ಲೋಕಾರ್ಪಣೆ ಸಂದರ್ಭ ಮಾತನಾಡಿದ ಸಿಎಂ,  ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಸಮುದಾಯದ ನಾಯಕರು ಒತ್ತಾಯ ಮಾಡಿದ್ದರು ಎಂದು ತಿಳಿಸಿದರು.

ಇದ್ದಕ್ಕಿದ್ದಂತೆ ಡಿಕೆಶಿಗೆ ಕರೆ ಮಾಡಿದ ಯಡಿಯೂರಪ್ಪ

ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗಲೇ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಚಾಲನೆ ಸಿಕ್ಕಿತ್ತು. ಇದು ಬಹಳ ಹಿಂದಿನಿಂದ ಕೇಳಿಕೊಂಡು ಬಂದ ಬೇಡಿಕೆ ಎಂದು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ತಿಳಿಸಿದರು.

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ  ಕೇಂದ್ರ ಸರ್ಕಾರ ಘೋಷಣೆ ಮಾಡಿದ  ಶೇ. 10  ಮೀಸಲನ್ನು ಅನುಷ್ಠಾನ ಮಾಡಲು ಸಮುದಾಯದ ಮುಖಂಡರು ಮನವಿ ಮಾಡಿಕೊಂಡಿರು.