ಮೈಸೂರು [ಆ.27]:  ಶಾಸಕ ಎಸ್‌.ಎ. ರಾಮದಾಸ್‌ ಅವರಿಗೆ ಹಳೇ ಮೈಸೂರು ಭಾಗದಿಂದ ಸಚಿವ ಸ್ಥಾನ ನೀಡಬೇಕು ಹಾಗೂ ಕರ್ನಾಟಕ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನವನ್ನು ಬ್ರಾಹ್ಮಣ ಸಮುದಾಯದ ಶಾಸಕರಿಗೆ ನೀಡಬೇಕು ಎಂದು ಆಗ್ರಹಿಸಿ ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದವರು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಮೂಲಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಲ್ಲಿಸಿದರು.

ಮೈಸೂರಿನ ಕೃಷ್ಣಧಾಮದಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಪೇಜಾವರಶ್ರೀ ಭೇಟಿಯಾದ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್‌ ಮತ್ತು ಮುಖಂಡರು ಪಕ್ಷಾತೀತವಾಗಿ ಸೇರಿ ಎಸ್‌.ಎ. ರಾಮದಾಸ್‌ ಅವರಿಗೆ ಹಳೇ ಮೈಸೂರು ಭಾಗದಿಂದ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್‌, ಜಿಎಸ್‌ಎಸ್‌ ಫೌಂಡೇಷನ್‌ ಅಧ್ಯಕ್ಷ ಶ್ರೀಹರಿ, ನಗರ ಪಾಲಿಕೆ ಸದಸ್ಯ ಎಂ.ಸಿ. ರಮೇಶ್‌, ಮಾಜಿ ಸದಸ್ಯರಾದ ಎಂ.ಡಿ. ಪಾರ್ಥಸಾರಥಿ, ಸೀಮಾ ಪ್ರಸಾದ್‌, ಆರ್‌ಐಐಟಿ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್‌, ಎಂಐಟಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮುರಳಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಆರ್‌. ಬಾಲಕೃಷ್ಣ, ಹರೀಶ್‌, ಮುಖಂಡರಾದ ವಿಕ್ರಂ ಅಯ್ಯಂಗಾರ್‌, ಅಪೂರ್ವ ಸುರೇಶ್‌, ಅಜಯ್‌ ಶಾಸ್ತ್ರಿ, ಕಡಕೊಳ ಜಗದೀಶ್‌, ಶ್ರೀನಿಧಿ, ರಂಗನಾಥ್‌, ಕೃಷ್ಣ, ಪ್ರಶಾಂತ್‌, ಚಕ್ರಪಾಣಿ, ಮಂಜುನಾಥ್‌, ಲತಾ ಬಾಲಕೃಷ್ಣ ಮೊದಲಾದವರು ಇದ್ದರು.