ಸರ್ಕಾರಿ ಸವಲತ್ತು ವಂಚಿಸುವವರ ಬಹಿಷ್ಕರಿಸಿ: ಜ್ಞಾನೇಂದ್ರ

ದಲಿತ ಸಮುದಾಯದ ಉದ್ಧಾರಕರ ಮುಖವಾಡ ಧರಿಸಿ, ಜನಾಂಗದ ಹೆಸರಿನಲ್ಲಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಲಪಟಾಯಿಸುವ ಅವಕಾಶವಾದಿಗಳನ್ನು ಬಹಿಷ್ಕರಿಸುವ ಅಗತ್ಯವಿದೆ. ಸರ್ಕಾರಿ ಸವಲತ್ತನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧವೂ ಬಿಗಿಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Boycott government privilege cheats says araga jnanendra rav

ತೀರ್ಥಹಳ್ಳಿ (ಅ.23) : ದಲಿತ ಸಮುದಾಯದ ಉದ್ಧಾರಕರ ಮುಖವಾಡ ಧರಿಸಿ, ಜನಾಂಗದ ಹೆಸರಿನಲ್ಲಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಲಪಟಾಯಿಸುವ ಅವಕಾಶವಾದಿಗಳನ್ನು ಬಹಿಷ್ಕರಿಸುವ ಅಗತ್ಯವಿದೆ. ಸರ್ಕಾರಿ ಸವಲತ್ತನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧವೂ ಬಿಗಿಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Bengaluru: ನಿಯಮ ಮೀರಿದರೆ ಕ್ಯಾಮೆರಾ ಜೊತೆ ಸ್ಪೀಕರ್‌ನಲ್ಲೇ ಎಚ್ಚರಿಕೆ

ಕಂದಾಯ ಇಲಾಖೆ ವತಿಯಿಂದ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳ 500 ಮಂದಿಗೆ ಜಾತಿ ಸರ್ಟಿಫಿಕೇಟ್‌ ವಿತರಣೆ ಮಾಡಿ, ಸಮಾಜದ ಕಟ್ಟಕಡೆಯ ವರ್ಗಕ್ಕೆ ಸರ್ಕಾರದಿಂದ ಸಲ್ಲುವ ಸವಲತ್ತುಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ಮಾನವೀಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಕಂದಾಯ ಇಲಾಖೆ ಅಧಿಕಾರಿಗಳು ಆಂದೋಲನ ರೀತಿ ತಾಲೂಕಿನ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳ ಮನೆಗಳಿಗೆ ತೆರಳಿ ದಾಖಲೆ ಸಂಗ್ರಹಿಸುವ ಮೂಲಕ ಜಾತಿ ಧೃಡೀಕರಣ ಪತ್ರ ಕೊಡುತ್ತಿರುವುದು ದಾಖಲೆಯಾಗಿದೆ. ದಲಿತರು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಬಾರದೆಂಬ ಕಾರಣ ಈ ಮಹತ್ವದ ಕಾರ್ಯ ನಡೆದಿದೆ. ಇದರಿಂದ ಹೃದಯವಂತಿಕೆ ಇರುವ ಅಧಿಕಾರಿಗಳೂ ಇದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳ ಮೀಸಲು ಏರಿಕೆ ಮಾಡುವ ಮೂಲಕ ರಾಜ್ಯ ಸರ್ಕಾರ ದಲಿತ ಸಮುದಾಯಗಳ ಹಿತವನ್ನು ಬಯಸಿದೆ. ಇದರಿಂದ ಈ ಸಮುದಾಯಗಳಿಗೆ ಶಿಕ್ಷಣ ನೌಕರಿ ಮತ್ತು ಪದೋನ್ನತಿ ಕೂಡ ಲಭ್ಯವಿದೆ. ಆದರೆ ಜನಾಂಗದ ಹೆಸರಿನಲ್ಲಿ ಎಲ್ಲ ಸವಲತ್ತುಗಳನ್ನು ತಮ್ಮದಾಗಿಸಿಕೊಳ್ಳುವ ವಂಚಕರ ಬಗ್ಗೆ ಎಚ್ಚರ ಇರಬೇಕು. ಹಲವು ಪ್ರಬಾವಿ ಸಮುದಾಯಗಳು ಕೂಡಾ ಮೀಸಲಾತಿಗಾಗಿ ಹೋರಾಟ ನಡೆಸುತ್ತಿವೆ ಎಂದು ಮಾರ್ಮಿಕವಾಗಿ ಹೇಳಿದರು.

ಕಾರು ಹೊಂದಿದವರ ಬಿಪಿಎಲ್‌ ಚೀಟಿ ರದ್ದಾಗುವುದನ್ನು ತಡೆ ಹಾಕಲಾಗಿದೆ. ಆದರೆ ಐಷಾರಾಮಿ ಕಾರಿನಲ್ಲಿ ಬಂದು ಪಡಿತರ ಪಡೆಯುವವರ ನಿಯಂತ್ರಣ ಮಾಡಬೇಕಿದೆ. ಭೂ ವಿತರಣೆಗೆ ಅಡಚಣೆಯಾಗಿರುವ ಸರ್ಕಾರಿ ಕಾನು ಸೊಪ್ಪಿನ ಬೆಟ್ಟಕ್ಕೆ ಇರುವ ಕಾನೂನು ತೊಡಕು ಕೆಲವೇ ದಿನಗಳಲ್ಲಿ ಬಗೆಹರಿಸಲಾಗುವುದು ಎಂದೂ ಹೇಳಿದರು.

ಕರ್ನಾಟಕದಲ್ಲಿ ಮೊದಲ ಬಾರಿಗೆ ಬೆಂಗ್ಳೂರಲ್ಲಿ ಸಿಸಿಟಿವಿ ಕಂಟ್ರೋಲ್ ರೂಮ್ ಸ್ಥಾಪನೆ..!

ತಹಸೀಲ್ದಾರ್‌ ಅಮೃತ್‌ ಆತ್ರೇಶ್‌ ಮಾತನಾಡಿ, ಸತತ ಮೂರು ತಿಂಗಳ ಕಾಲ ನಮ್ಮ ಸಿಬ್ಬಂದಿ ಶ್ರಮ ವಹಿಸಿ ತಾಲೂಕಿನ ಸುಮಾರು ಒಂದು ಸಾವಿರ ಮಂದಿಯ ಮನೆಗಳಿಗೆ ತೆರಳಿ ಜಾತಿ ಧೃಡೀಕರಣ ಪತ್ರವನ್ನು ಸಿದ್ದಪಡಿಸಿದ್ದಾರೆ ಎಂದರು. ದಲಿತ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಕಾಸರವಳ್ಳಿ ಶ್ರೀನಿವಾಸ್‌, ಎಸ್‌ಸಿ, ಎಸ್‌ಟಿ ಸಮುದಾಯಗಳ ಮೀಸಲಾತಿ ಏರಿಕೆ ಮಾಡಿರುವ ಸರ್ಕಾರಕ್ಕೆ ಸಮುದಾಯದ ಅಭಿನಂದನೆಗಳನ್ನು ಸಲ್ಲಿಸಿದರು.

Latest Videos
Follow Us:
Download App:
  • android
  • ios