ಚಿತ್ರದುರ್ಗ [ಜೂ.21]:  ಚಿತ್ರದುರ್ಗದಲ್ಲಿ ಯುವಕನೋರ್ವ ಸೆಲ್ಫಿ ವಿಡಿಯೋ ಮಾಡಿ ಬಳಿಕ  ಕೆರೆಗೆ ಧುಮಿಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ. 

ನಗರದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತಿದ್ದ ಯುವಕ ಜೋಗಿಮಟ್ಟಿ ರಸ್ತೆ ಬಳಿಯ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಆತ್ಮಹತ್ಯೆಗೆ ಶರಣಾದ ಈ ಯುವಕನನ್ನು ಬೆಂಗಳೂರು ಮೂಲದ ಪವನ್ ಎಂದು ಗುರುತಿಸಲಾಗಿದ್ದು, ಆತ ವಿಡಿಯೋದಲ್ಲಿ, ನನಗಾದಂತೆ ಬೇರಯವರಿಗೆ ಆಗಬಾರದು.  ನನ್ನ ನಂಬಿಕೆಯೇ ನನಗೆ ದ್ರೋಹ ಮಾಡಿದೆ. ಮುಂದಿನ ಜನ್ಮದಲ್ಲಿ ಒಳ್ಳೆಯನಾಗುವ ಎಂದು ಹೇಳಿ ಜೀವ ಕಳೆದುಕೊಂಡಿದ್ದಾನೆ. 

ಇನ್ನು ವಿಡಿಯೋದಲ್ಲಿ ಚಿತ್ರದುರ್ಗದಲ್ಲಿರುವ ತನ್ನ ಅಕ್ಕ  ಬಾವನ ಬಗ್ಗೆಯೂ ಕೂಡ ಪ್ರಸ್ತಾಪಿಸಿದ್ದು, ತನ್ನೆಲ್ಲ ಮಾತುಗಳನ್ನು ವಿಡಿಯೋ ರೆಕಾರ್ಡ್ ಮಾಡಿ ಬಳಿಕ ಕೆರೆಗೆ ಹಾರಿದ್ದಾನೆ.