ಉಡುಪಿ(ಜ.25): ಮಂಗಳೂರು ಬಾಂಬರ್ ಆದಿತ್ಯ ರಾವ್‌ ಹಲವು ಬ್ಯಾಂಕ್‌ಗಳಲ್ಲಿ ಲಾಕರ್ ತೆಗೆದಕೊಂಡಿದ್ದ ಎಂಬುದು ವಿಚಾರಣೆಯ ವೇಳೆ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲಿಸರು ಬ್ಯಾಂಕ್‌ಗಳಲ್ಲಿಯೂ ಸ್ಥಳ ಮಹಜರು ನಡೆಸಿದ್ದಾರೆ.

ಮಂಗಳೂರು ಬಾಂಬರ್ ಆದಿತ್ಯ ರಾವ್‌ನನ್ನು ಪೊಲೀಸರು ಉಡುಪಿಗೆ ಕರೆ ತಂದಿದ್ದಾರೆ. ಬಾಂಬ್ ಇಟ್ಟು ಉಡುಪಿಗೆ ಬಂದಿದ್ದ ಬಗ್ಗೆ ಆದಿತ್ಯ ರಾವ್‌ನ ವಿಚಾರಣೆ ನಡೆಸಿದ್ದಾರೆ. ಮೂರು ಸ್ಥಳಗಳಲ್ಲಿ ಮಹಜರು ನಡೆಸಲಿರುವ ಪೊಲೀಸರು, ಮಲ್ಪೆ ವಡಬಾಂಡೇಶ್ವರ ಪರಿಸರಕ್ಕೆ ಆದಿತ್ಯ ಆಗಮಿಸಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಬಾಂಬರ್ ಆದಿತ್ಯರಾವ್‌ನ ಇಂಟ್ರೆಸ್ಟಿಂಗ್ ಕಹಾನಿ ಕೇಳಿದ ಪೊಲೀಸರು

ಕಡಿಯಾಳಿ ಸಮೀಪದ ಕರ್ನಾಟಕ ಬ್ಯಾಂಕ್‌ನಲ್ಲೂ ಮಹಜರು ನಡೆಸಲಾಗಿದೆ. ಉಡುಪಿಯಲ್ಲಿ ಮಹಜರು ಮುಗಿಸಿ ಪೊಲೀಸರು ಕಾರ್ಕಳಕ್ಕೆ ತೆರಳಲಿದ್ದಾರೆ. ಕಾರ್ಕಳದ ಎರಡು ಹೊಟೇಲುಗಳಲ್ಲಿ ಸ್ಥಳ ಮಹಜರು ನಡೆಯಲಿದೆ. ತನಿಖೆಯ ಬಗ್ಗೆ ಪೊಲೀಸರು ಹೆಚ್ಚಿನ ಗೌಪ್ಯತೆ ಕಾಯ್ದುಕೊಂಡಿದ್ದಾರೆ.

ತನಿಖೆ ವೇಳೆ ಹಲವು ವಿಚಾರ ಬಹಿರಂಗ ಮಾಡಿರುವ ಆದಿತ್ಯ ಹಲವು ಬ್ಯಾಂಕ್ ನಲ್ಲಿ ಲಾಕರ್‌ಗಳನ್ನು ಪಡೆದಿರುವುದನ್ನು ಬಹಿರಂಗಪಡಿಸಿದ್ದಾನೆ. ಉಡುಪಿ ಕರ್ನಾಟಕ ಬ್ಯಾಂಕ್ ಗೆ ಆಗಮಿಸಿದ ಪೊಲೀಸರು ಆದಿತ್ಯ ರಾವ್‌ನನ್ನು ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಬಾಂಬ್ ಇಡುವ ಮುನ್ನ ಆದಿತ್ಯ ಲಾಕರ್‌ನಲ್ಲಿ ಕೆಲ ವಸ್ತುಗಳನ್ನು ಇಟ್ಟು ಬಂದಿದ್ದ ಎಂಬುದು ತಿಳಿದುಬಂದಿದೆ.

ಎರಡು ದಿನ ಸ್ಫೋಟಕದ ಪಕ್ಕದಲ್ಲೇ ಮಲಗಿದ್ದ ಆದಿತ್ಯ!