ನಮ್ಮ ಮೆಟ್ರೋ 2ನೇ ಹಂತದ ಯೋಜನೆಗಾಗಿ ಬಿಎಂಆರ್‌ಸಿಎಲ್ 3000 ಕೋಟಿ ಸಾಲದ ಒಪ್ಪಂದ
ನಮ್ಮ ಮೆಟ್ರೋ 2ನೇ ಹಂತದ ಯೋಜನೆಗಾಗಿ ಬಿಎಂಆರ್‌ಸಿಎಲ್ ₹ 3000 ಕೋಟಿ ಸಾಲದ ಒಪ್ಪಂದ ಮಾಡಿಕೊಂಡಿದ್ದು, ಈ ಮೂಲಕ 2ನೇ ಹಂತದ ಯೋಜನೆಗೆ ಸಂಪೂರ್ಣ ಬಾಹ್ಯ ಸಾಲ ಪಡೆದಂತಾಗಿದೆ.
ಬೆಂಗಳೂರು (ಡಿ.15): ನಮ್ಮ ಮೆಟ್ರೋ 2ನೇ ಹಂತದ ಯೋಜನೆಗಾಗಿ ಬಿಎಂಆರ್‌ಸಿಎಲ್ ₹ 3000 ಕೋಟಿ ಸಾಲದ ಒಪ್ಪಂದ ಮಾಡಿಕೊಂಡಿದ್ದು, ಈ ಮೂಲಕ 2ನೇ ಹಂತದ ಯೋಜನೆಗೆ ಸಂಪೂರ್ಣ ಬಾಹ್ಯ ಸಾಲ ಪಡೆದಂತಾಗಿದೆ. ಭಾರತ ಸರ್ಕಾರವು ಜರ್ಮನ್‌ನ ಹೂಡಿಕೆ ಬ್ಯಾಂಕ್ ಕೆಎಫ್‌ಡಬ್ಲ್ಯೂ ಜೊತೆ 3,044.54 ಕೋಟಿ (€340 ಮಿಲಿಯನ್) ಸಾಲಕ್ಕೆ ನವದೆಹಲಿಯಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮನೀಶಾ ಸಿನ್ಹಾ ಮತ್ತು ಕೆಎಫ್‌ಡಬ್ಲ್ಯೂ ಜರ್ಮನಿಯ ನಿರ್ದೇಶಕಿ (ದಕ್ಷಿಣ ಏಷ್ಯಾ) ಕ್ಯಾರೊಲಿನ್ ಗ್ಯಾಸ್ನರ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಬಿಎಂಆರ್‌ಸಿಎಲ್ ಮ್ಯಾನೇಜಿಂಗ್ ಡೈರೆಕ್ಟರ್ ಎಂ.ಮಹೇಶ್ವರ್ ರಾವ್ ಅವರು ಕೆಎಫ್‌ಡಬ್ಲ್ಯೂ ಕಚೇರಿಯಲ್ಲಿ ಗ್ಯಾಸ್ನರ್ ಜೊತೆ ಪ್ರತ್ಯೇಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
2ನೇ ಹಂತದ ಯೋಜನೆ 75.06 ಕಿ.ಮೀ ಮಾರ್ಗದಲ್ಲಿ ವ್ಯಾಪಿಸಿದ್ದು ಈವರೆಗೆ ₹ 12,141.14 ಕೋಟಿ ಸಾಲವನ್ನು ಪಡೆದುಕೊಳ್ಳಲಾಗಿದೆ. ಜಪಾನ್ ಇಂಟರ್‌ನ್ಯಾಷನಲ್ ಕೋಆಪರೇಷನ್ ಏಜೆನ್ಸಿ , ಏಜೆನ್ಸ್ ಫ್ರಾಂಕಾಯ್ಸ್ ಡಿ ಡೆವಲಪ್ಮೆಂಟ್ , ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ , ಮತ್ತು ಯುರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಮೂಲಕ ₹ 9,096.60 ಕೋಟಿ ಸಾಲ ಪಡೆದುಕೊಂಡಿದ್ದು, ಈಗ ಜರ್ಮನಿಯ ಕೆಎಫ್‌ಡಬ್ಲ್ಯೂ ಬ್ಯಾಂಕ್ ಸಾಲ ಪಡೆಯಲಾಗಿದೆ. ನಮ್ಮ ಮೆಟ್ರೋ 2ನೇ ಹಂತರ ಕಾಮಗಾರಿಗೆ ₹ 30,695 ಕೋಟಿ ಅನುಮೋದನೆ ನೀಡಲಾಗಿತ್ತು, ಆದರೆ ಕಾಮಗಾರಿ ವಿಳಂಬ, ಕಾಮಗಾರಿಗೆ ಹೆಚ್ಚಿನ ಭೂಮಿ ಅಗತ್ಯತೆ ಮತ್ತು ಇನ್ನಿತರ ಕಾರಣಗಳಿಂದ ಯೋಜನಾ ವೆಚ್ಚ ₹ 40,614.27 ಕೋಟಿ ಹೆಚ್ಚಳವಾಗಿದೆ.
ಅಂಬರೀಷ್ ಅವರ ಅವಧಿಯಲ್ಲಿ ಮಾಡಿದ ಕೆಲಸಗಳಿಂದ ನನಗೆ ತೃಪ್ತ ಮನೋಭಾವ: ಸುಮಲತಾ
ಸರ್ಜಾಪುರ-ಹೆಬ್ಬಾಳ ಮೆಟ್ರೋ ಕಾಮಗಾರಿಗೆ ಸಂಪುಟ ಒಪ್ಪಿಗೆ: ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ರಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ ಉದ್ದೇಶಿಸಿರುವ 36.59 ಕಿ.ಮೀ. ಉದ್ದದ ಮೆಟ್ರೋ ಕಾಮಗಾರಿಯ ಯೋಜನಾ ಪೂರ್ವ ಸಿದ್ಧತೆಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಅಂಗೀಕಾರ ನೀಡಿದೆ. ಅಲ್ಲದೆ, ಕೇಂದ್ರ ಸರ್ಕಾರದ ಅನುಮೋದನೆ ಪಡೆದ ಬಳಿಕ ಸಿವಿಲ್ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಂಪುಟ ಸಲಹೆ ನೀಡಿದೆ. 28,405 ಕೋಟಿ ರು. ಅಂದಾಜು ವೆಚ್ಚದಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಿಸಲು ಉದ್ದೇಶಿಸಿದ್ದು, 17 ಮೆಟ್ರೋ ನಿಲ್ದಾಣ ಒಳಗೊಂಡ 22.14 ಕಿ.ಮೀ. ಎಲಿವೇಟೆಡ್ ಮಾರ್ಗ ಹಾಗೂ 11 ನಿಲ್ದಾಣ ಒಳಗೊಂಡ 14.45 ಕಿ.ಜೀ. ಸುರಂಗ ಮಾರ್ಗದ ಕಾಮಾರಿ ನಡೆಸಬೇಕಿದೆ.
ಈ ಬಗ್ಗೆ ಭಾರತ ಸರ್ಕಾರದ ಮೂಲಕ ಸಾವರಿನ್ ಲೋನ್ ಅಥವಾ ಪಾಸ್-ಥ್ರೂ - ಅಸಿಸ್ಟೆನ್ಸ್ (ಪಿಟಿಎ) ರೀತಿಯಲ್ಲಿ ಸಾಲ ಮಾಡಬೇಕಿದೆ. ಈ ಬಗ್ಗೆ ಕೇಂದ್ರದ ಅನುಮೋದನೆ ನಿರೀಕ್ಷಿಸಿ ಪೂರ್ವ ಯೋಜನಾ ಚಟುವಟಿಕೆ ನಡೆಸಬಹುದು. ಕೇಂದ್ರದ ಅನುಮೋದನೆ ಬಳಿಕ ಸಿವಿಲ್ ಕಾಮಗಾರಿ ಕೈಗೊಳ್ಳಬಹುದು ಎಂದು ಸಂಪುಟ ನಿರ್ಣಯ ತೆಗೆದುಕೊಂಡಿದೆ.
ಬೆಳಗಾವೀಲಿ ಜಯಮೃತ್ಯುಂಜಯ ಶ್ರೀಗಳ ಮುಗಿಸಲು ಪ್ಲಾನ್: ರೇಣುಕಾಚಾರ್ಯ ಹೊಸ ಬಾಂಬ್
ಬಿಬಿಎಂಪಿ ಅಭಿವೃದ್ಧಿಗೆ ಘಟನೋತ್ತರ ಅನುಮತಿ: ಬಿಬಿಎಂಪಿ ವ್ಯಾಪ್ತಿಯಲ್ಲಿ 1611 ಕಿ.ಮೀ. ಉದ್ದದ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಪೈಕಿ ಕೆಲವು ರಸ್ತೆಗಳು ಹಾಳಾಗಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿತ್ತು. ಹೀಗಾಗಿ 389.68 ಕಿ.ಮೀ. ರಸ್ತೆಯನ್ನು 694 ಕೋಟಿ ರು. ವೆಚ್ಚದಲ್ಲಿ ತುರ್ತಾಗಿ ಅಭಿವೃದ್ಧಿಪಡಿಸಿದ್ದು, ಇದಕ್ಕೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮತಿ ಪಡೆಯಲಾಗಿದೆ. ಇನ್ನು ಬೆಂಗಳೂರು ನಗರ ಜಿಲ್ಲೆಯ ಬಿದರಹಳ್ಳಿ ಹೋಬಳಿಯ ಹುಸ್ಕೂರು ಗ್ರಾಮದ 2.06 ಎಕರೆ ವಿಸ್ತೀರ್ಣದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಪಿಪಿಪಿ ಮಾದರಿಯಲ್ಲಿ ಬಹುಮಹಡಿ ವಸತಿ ಸಮುಚ್ಛಯ ಯೋಜನೆ ಕೈಗೊಳ್ಳಲು ಸಂಪುಟ ಅಂಗೀಕಾರ ನೀಡಿದೆ. ಇದಕ್ಕೆ 64.78 ಕೋಟಿ ರು. ವೆಚ್ಚ ಅಂದಾಜಿಸಲಾಗಿದೆ.