Asianet Suvarna News Asianet Suvarna News

'ರಸ್ತೆ ಬಂದ್‌ ಮಾಡಿಸಿದ್ದೇ ಮೋದಿ ಸಾಧನೆ'..!

ಮೋದಿ ಬಂದು ಹೋಗಿದ್ದರಿಂದ ಯಾವುದೇ ಲಾಭವಾಗದೆ ನಷ್ಟವಾಗಿದ್ದೇ ಕಣ್ಣಿಗೆ ರಾಚುತ್ತಿದೆ. ರಸ್ತೆ ಬಂದ್ ಮಾಡಿಸಿದ್ದೇ ಪ್ರಧಾನಿ ಮೋದಿ ಸಾಧನೆ ಎಂದು ತುಮಕೂರು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಆರೋಪಿಸಿದ್ದಾರೆ.

blocking road is pm modi achievement says tumakuru cpim head
Author
Bangalore, First Published Jan 4, 2020, 8:48 AM IST
  • Facebook
  • Twitter
  • Whatsapp

ತುಮಕೂರು(ಜ.04): ನಗರದಲ್ಲಿ ಜ. 2ರಂದು ನಡೆದ ಬೃಹತ್‌ ರೈತ ಸಮಾವೇಶದಲ್ಲಿ ರೈತರ ಕೈ ಬಲಪಡಿಸುವ ಅವರ ಜೀವನವನ್ನು ಸುಭದ್ರಗೊಳಿಸುವ ಯಾವುದೇ ಯೋಜನೆಯನ್ನು ಘೋಷಿಸದೆ ಹಳೆ ಮಾತುಗಳನ್ನು ಆಡಿ ರಸ್ತೆ ಬಂದ್‌ ಮಾಡಿಸಿ ಭದ್ರತೆಯ ಹೆಸರಿನಲ್ಲಿ ನಾಗರಿಕರಿಗೆ ಕಿರುಕುಳ ನೀಡಿ, ರೈತ ಸಮುದಾಯಕ್ಕೆ ದ್ರೋಹ ಬಗೆದಿದ್ದಾರೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್‌, ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್‌.ಕೆ.ಸುಬ್ರಮಣ್ಯ ಆರೋಪಿಸಿದ್ದಾರೆ.

2014ರಲ್ಲಿ ಪ್ರಧಾನಿಯಾದ ಹೊಸದರಲ್ಲಿ ತುಮಕೂರಿಗೆ ಬಂದ ಮೋದಿ ವಸಂತ ನರಸಾಪುರದಲ್ಲಿ ಫುಡ್‌ಪಾರ್ಕ್ ಉದ್ಘಾಟಿಸಿ ಇದೊಂದು ರೈತಸ್ನೇಹಿ ರೈತರ ಜೀವನಾಡಿ ಕೈಗಾರಿಕೆಯಂದೇ ಬಿಂಬಿಸಿ ಬಹು ನಿರೀಕ್ಷೆ ಹುಟ್ಟಿಸಿ ಹೋಗಿದ್ದರು.

ರಸ್ತೆ ಬದಿಯಲ್ಲೇ ಕುರಿ-ಕೋಳಿ ಕಡೀತಾರೆ, ಜನ ಮೂಗು ಮುಚ್ಕೋತಾರೆ..!

ಫುಡ್‌ಪಾರ್ಕ್ ಉದ್ಘಾಟನೆಯಾಗಿ ಆರು ವರ್ಷಗಳೇ ಕಳೆಯುತ್ತಾ ಬಂದರೂ ಈವರೆಗೂ ಜಿಲ್ಲೆ ಹಾಗೂ ದಕ್ಷಿಣ ಕರ್ನಾಟಕದ ಜಿಲ್ಲೆಯ ರೈತರು ಹಾಗೂ ನಿರುದ್ಯೋಗಿ ಯುವ ಜನತೆಗೆ ಯಾವುದೇ ಉಪಯೋಗ ಆಗದೇ ಇರುವುದು ದುರಂತವೇ ಸರಿ. ಶಿವಕುಮಾರ ಸ್ವಾಮಿಗಳಿಗೆ ಭಾರತರತ್ನ ಪ್ರಶಸ್ತಿ ನೀಡುವ ಬಗ್ಗೆಯೂ ಮಾತನಾಡುವಂತೆ ಒತ್ತಾಯಿಸಿದ್ದವು.

ರೈತ ಸಮಾವೇಶದಲ್ಲಿ ತಾವೇ ಉದ್ಘಾಟಿಸಿದ ಫುಡ್‌ಪಾರ್ಕ್ ಬಗ್ಗೆ ಸೊಲ್ಲೆತ್ತದ ಪ್ರಧಾನಿ ಮೋದಿ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದ್ದು ಬಿಟ್ಟರೇ ಬೇರೇನೂ ಹೇಳಲಿಲ್ಲ. ಈಗಾಗಲೇ ಕೇಂದ್ರ ಬಜೆಟ್‌ನಲ್ಲಿ ಹೇಳಿರುವ ಹಳಸಲು ಘೋಷಣೆಗಳನ್ನೆ ಮತ್ತೊಮ್ಮೆ ತುಮಕೂರಿನಲ್ಲಿ ಹೇಳಿ ಭ್ರಮನಿರಸನವುಂಟು ಮಾಡಿದ್ದಾರೆ ಎಂದಿದ್ದಾರೆ.

ಹೊಸ ವರ್ಷದ ಆರಂಭದಲ್ಲೇ ಹಾಲು ಉತ್ಪಾದಕರಿಗೆ ಬಂಪರ್..! ದರ ಹೆಚ್ಚಳ

ಮೋದಿ ಬಂದು ಹೋಗಿದ್ದರಿಂದ ಯಾವುದೇ ಲಾಭವಾಗದೆ ನಷ್ಟವಾಗಿದ್ದೇ ಕಣ್ಣಿಗೆ ರಾಚುತ್ತಿದೆ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ನೆರೆ ಸಂತ್ರಸ್ತರ ಪರಹಾರಕ್ಕೆ ಹಾಗೂ ರಾಜ್ಯದ ಆರ್ಥಿಕ ದುಸ್ಥಿತಿಯ ಬಗ್ಗೆ ಪ್ರಧಾನಿಯ ಎದುರೇ ಬಹಿರಂಗವಾಗಿ ಅಲವತ್ತುಕೊಂಡರೂ ಯಾವುದೇ ಪ್ರತಿಕ್ರಿಯೆ, ಭರವಸೆ ನೀಡದೆ ಹೋಗಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ ಎಂದಿದ್ದಾರೆ.

Follow Us:
Download App:
  • android
  • ios