Asianet Suvarna News Asianet Suvarna News

'ಕಾಂಗ್ರೆಸ್‌ ಪಕ್ಷದ ಸಾಧ​ನೆ​ಗ​ಳನ್ನು ಜನ​ರಿಗೆ ಮನವರಿಕೆ ಮಾಡಿ'

ಅಭಿವೃದ್ಧಿ ಎನ್ನುವುದು ನಿರಂತರ ಸಾಗುವಿಕೆ ಹಾಗೂ ಸಾಧಿಸುವಿಕೆಯಿಂದ ಸಾಧ್ಯವಾಗುತ್ತದೆ ಹೊರತು ಪೊಳ್ಳು ಭಾಷಣ ಹಾಗೂ ಮ್ಯಾನರಿಸಂಗಳಿಂದಲ್ಲ| ಸ್ವಾತಂತ್ರ್ಯ ನಂತರ ದೇಶವನ್ನು ಸದೃಢವಾಗಿ ನಿರ್ಮಿಸಲು ಕಾಂಗ್ರೆಸ್‌ ಸಾಕಷ್ಟು ಶ್ರಮಿಸಿದೆ| ಜೂ. 7ರಂದು ನಿಗದಿ ಪಡಿಸಿದ್ದ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪದಗ್ರಹಣ ಕಾರ್ಯಕ್ರಮ ಮುಂದೂಡಿಕೆ|  

Block Congress observer Prabhuraj Talks Over Congress party
Author
Bengaluru, First Published Jun 7, 2020, 7:51 AM IST

ಕಾರಟಗಿ(ಜೂ.07):  ಕಾಂಗ್ರೆಸ್‌ ಅವಧಿಯಲ್ಲಿ ದೇಶವನ್ನು ಸದೃಢವಾಗಿ ನಿರ್ಮಿಸುವ ಯೋಜನೆಗಳನ್ನು ರೂಪಿಸಿದ್ದು, ಕಾರ್ಯಕರ್ತರು ಜನತೆಗೆ ಸತ್ಯದ ಮನವರಿಕೆ ಮಾಡುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಬ್ಲಾಕ್‌ ಕಾಂಗ್ರೆಸ್‌ ವೀಕ್ಷಕ ಪ್ರಭುರಾಜ್‌ ಹೇಳಿದ್ದಾರೆ. 

ಪಟ್ಟಣದಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ನಿವಾಸದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೆಪಿಸಿಸಿ ನೂತನ ಅಧ್ಯಕ್ಷರ ಪದಗ್ರಹಣ ಹಿನ್ನೆಲೆಯಲ್ಲಿ ಕನಕಗಿರಿ ವಿಧಾನಸಭಾ ವ್ಯಾಪ್ತಿಯ ಕಾರಟಗಿ ಬ್ಲಾಕ್‌ ಕಾಂಗ್ರೆಸ್‌ ವೀಕ್ಷಕರ, ಕಾರ್ಯಕ್ರಮ ಉಸ್ತುವಾರಿಗಳ ಸಭೆಯಲ್ಲಿ ಮಾತನಾಡಿದರು.

ಕೊಪ್ಪಳ: ಜೂ.30ರ ವರೆಗೂ ಹುಲಿಗೆಮ್ಮ ದೇವಿಯ ದರ್ಶನ ಭಾಗ್ಯ ಇಲ್ಲ

ಅಭಿವೃದ್ಧಿ ಎನ್ನುವುದು ನಿರಂತರ ಸಾಗುವಿಕೆ ಹಾಗೂ ಸಾಧಿಸುವಿಕೆಯಿಂದ ಸಾಧ್ಯವಾಗುತ್ತದೆ ಹೊರತು ಪೊಳ್ಳು ಭಾಷಣ ಹಾಗೂ ಮ್ಯಾನರಿಸಂಗಳಿಂದಲ್ಲ. ಸ್ವಾತಂತ್ರ್ಯ ನಂತರ ದೇಶವನ್ನು ಸದೃಢವಾಗಿ ನಿರ್ಮಿಸಲು ಕಾಂಗ್ರೆಸ್‌ ಸಾಕಷ್ಟು ಶ್ರಮಿಸಿದೆ. ಸಮಾಜವಾದ, ಪ್ರಜಾಪ್ರಭುತ್ವದ ತಳಹದಿಯಲ್ಲಿ ದೇಶವನ್ನು ಶಿಕ್ಷಣ, ಆರೋಗ್ಯ, ಆಹಾರ, ನೀರಾವರಿ, ಕೃಷಿ, ಔದ್ಯೋಗಿಕ, ಆರ್ಥಿಕ ರಂಗಗಳಲ್ಲಿ ಗಮನಾರ್ಹ ಅಭಿವೃದ್ಧಿಯತ್ತ ಕೊಂಡೊಯ್ದಿದೆ. ರಾಜ್ಯದಲ್ಲಿಯೂ ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಾಮಾಜಿಕ ಸಮಾನತೆಗೆ ಶ್ರಮಿಸಲಾಗಿತ್ತು. ಆದರೆ, ಕಾರ್ಯಕರ್ತರು, ಪಕ್ಷದ ಜೀವಾಳವಾಗಿದ್ದು ಜನತೆಗೆ ನೈಜ ಅಭಿವೃದ್ಧಿ ಮಾದರಿಯನ್ನು ಮನವರಿಕೆ ಮಾಡದೆ ನಿರುತ್ಸಾಹಗೊಂಡರೆ ಪಕ್ಷ ಸಂಘಟನೆಯಾಗುವುದಿಲ್ಲ. ಹೀಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ನವ ಉತ್ಸಾಹದೊಂದಿಗೆ ವಿವೇಕಪೂರ್ಣತೆಯಿಂದ ಜನತೆಗೆ ಕಾಂಗ್ರೆಸ್‌ನ ಪರಿಶ್ರಮವನ್ನು ಮನವರಿಕೆ ಮಾಡಬೇಕಿದೆ ಎಂದರು.

ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶರಣಬಸವರಾಜ ರೆಡ್ಡಿ ಮಾತನಾಡಿ, ಜೂ. 7ರಂದು ನಿಗದಿ ಪಡಿಸಿದ್ದ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪದಗ್ರಹಣ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಜೂಮ್‌ ಆ್ಯಪ್‌ ಮೂಲಕ ವೀಕ್ಷಕರು ಹಾಗೂ ಕಾರ್ಯಕರ್ತರು ನೇರವಾಗಿ ಡಿಕೆಶಿ ಜತೆ ಮಾತನಾಡಬಹುದಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿ​ಸಿದರು.

ತಾಪಂ ಸದಸ್ಯರಾದ ಪ್ರಕಾಶ್‌ ಭಾವಿ, ಎಂ. ಗವಿಸಿದ್ದಪ್ಪ ನಾಯಕ, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಶಶಿಧರಗೌಡ, ಶಿವರಡ್ಡಿ ನಾಯಕ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಂಬಣ್ಣ ನಾಯಕ, ತಾಪಂ ಮಾಜಿ ಸದಸ್ಯ ಬಸವರಾಜ ನೀರಗಂಟಿ, ಗ್ರಾಪಂ ಮಾಜಿ ಅಧ್ಯಕ್ಷ ಜಡಿಯಪ್ಪ ನವಲಿ, ಪ್ರಮುಖರಾದ ವೆಂಕಟೇಶ್‌, ಮಹೇಶ್‌ ಸೇರಿದಂತೆ ಇತರರಿದ್ದರು.
 

Follow Us:
Download App:
  • android
  • ios