Asianet Suvarna News Asianet Suvarna News

ಗ್ರಾಪಂ ಚುನಾವಣೆಗೆ ಎರಡೂ ಕಣ್ಣು ಕಾಣದ ಯುವಕನ ಸ್ಪರ್ಧೆ..!

ಗ್ರಾಮ ಪಂಚಾಯಿತಿ ಚುನಾವಣಾ ಕಣಕ್ಕೆ ಇಳಿದ ಕಣ್ಣು ಕಾಣದ ಯುವಕ| ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಮಲಗುಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ| ಕೋಟೇಶ ಮಾರುತಿ ಆನವಟ್ಟಿ ಸ್ಪರ್ಧಿಸಿರುವ ಅಂಧ ಯುವಕ| 

Blind Person Contested in Grama Panchayat Election in Haveri grg
Author
Bengaluru, First Published Dec 18, 2020, 3:14 PM IST

ಹಾನಗಲ್ಲ(ಡಿ.18): ಹಾನಗಲ್ಲ ತಾಲೂಕಿನ ಮಲಗುಂದ ಗ್ರಾಮ ಪಂಚಾಯಿತಿ ಚುನಾವಣಾ ಕಣಕ್ಕೆ ಎರಡು ಕಣ್ಣು ಕಾಣದೆ ಹುಟ್ಟು ಅಂಧ ಯುವಕನೊಬ್ಬ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

ತಾಲೂಕಿನ ಮಲಗುಂದ ಗ್ರಾಮದ ಮಾರುತಿ ನಗರದ ನಿವಾಸಿ 25 ವರ್ಷದ ಕೋಟೇಶ ಮಾರುತಿ ಆನವಟ್ಟಿ ಸ್ಪರ್ಧಿಸಿರುವ ಅಂಧ ಯುವಕ. ಯತ್ತಿನಳ್ಳಿ ಮತ್ತು ಮಲಗುಂದ ಗ್ರಾಮಗಳನ್ನು ಒಳಗೊಂಡಿರುವ 10 ಸದಸ್ಯರ ಬಲದ ಮಲಗುಂದ ಗ್ರಾಪಂಗೆ ಮಲಗುಂದ ಗ್ರಾಮದಿಂದ 2 ವಾರ್ಡ್‌ಗೆ ಸಾಮಾನ್ಯ ಕ್ಷೇತ್ರಕ್ಕೆ ಕೋಟೇಶ ಸ್ಪರ್ಧಿಸಿದ್ದಾನೆ.

ಜಿಲ್ಲಾ ಕಾರಾಗೃಹ ಸಿಬ್ಬಂದಿ ಕೊಲೆ ಮಾಡಲು ಕೈದಿಗೆ ಹೇಳಿದ ಜೈಲು ಅಧೀಕ್ಷಕ

ಬಿಜೆಪಿ ಮತ್ತು ಕಾಂಗ್ರೆಸ್‌ಬೆಂಬಲ ಕೋರಿದ್ದ ಅಂಧ ಯುವಕ ಕೋಟೇಶ, ಎರಡೂ ಪಕ್ಷದ ಬೆಂಬಲ ಸಿಗದ ಹಿನ್ನಲೆಯಲ್ಲಿ ಬಿ.ಕೆ. ಮೋಹನಕುಮಾರ ಜನಹಿತ ರಕ್ಷಣಾ ವೇದಿಕೆ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾನೆ. ಹುಟ್ಟಿನಿಂದ ಎರಡೂ ಕಣ್ಣು ಕಾಣದೆ ಇದ್ದರೂ 8 ತರಗತಿ ವರೆಗೂ ಶಿಕ್ಷಣ ಹೊಂದಿರುವ ಕೋಟೇಶ ಪಂಚಾಯತ್‌ರಾಜ್ಯ ವ್ಯವಸ್ಥೆ ಕುರಿತು ವಿಶೇಷ ಆಸಕ್ತಿ ಹೊಂದಿದ್ದಾನೆ.

ಮಂಗಳವಾರ ಮಲಗುಂದ ಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ್ದಾನೆ. ಎರಡು ಕಣ್ಣು ಕಾಣದ ಹಿನ್ನಲೆಯಲ್ಲಿ ಮನಸ್ಸು ಏಕಾಂಗಿಯಾಗಿ ದುರ್ಬಲ ಎನಿಸಿತು ಎಲ್ಲವನ್ನು ಸಾಧಿಸಬಲ್ಲ ಸಾಮರ್ಥ್ಯವಿದ್ದರೂ, ಅಂಧತ್ವ ಅಡ್ಡಿಯಾಗಿದೆ. ಗ್ರಾಪಂ ಸದಸ್ಯನಾದ ನಂತರ ನನ್ನ ಕಾರ್ಯ ಎಲ್ಲರಿಗೂ ತಿಳಿಯುತ್ತದೆ ಎಂದು ಕೋಟೇಶ ಮನದಾಳದ ಮಾತು ಹಂಚಿಕೊಂಡನು.
 

Follow Us:
Download App:
  • android
  • ios