ಕಮಲ ಪಾಳಯದಿಂದ ಕೈ ಗೆ : ಬಿಜೆಪಿ ಸಂಸದರ ಪುತ್ರನೊಂದಿಗೆ ಕಾಂಗ್ರೆಸ್ ಸೇರಿದ ಮುಖಂಡರು
ಬಿಜೆಪಿ ಸಂಸದರ ಪುತ್ರರೊಂದಿಗೆ ಹಲವು ಮುಖಂಡರು ಕಮಲ ಪಾಳಯವನ್ನು ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಹತ್ತಾರು ಮುಖಂಡರು ಏಕಕಾಲದಲ್ಲಿ ಪಕ್ಷ ಸೇರಿದರು.
ಹೊಸಕೋಟೆ (ಮಾ.22): ತಾಲೂಕಿನ 33 ಕೆರೆಗಳಿಗೆ ನೀರೊದಗಿಸುವ ಶಾಶ್ವತ ನೀರಾವರಿ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಅತ್ತಿವಟ್ಟಗ್ರಾಮದಲ್ಲಿ ನೂತನವಾಗಿ ಕೊರೆಸಲಾದ ಕೊಳವೆಬಾವಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೇಸಿಗೆ ಸಮೀಪ ಇರುವ ಕಾರಣ ತಾಲೂಕಿನಲ್ಲಿ ನೀರಿನ ಸಮಸ್ಯೆ ಸಾಕಷ್ಟುಉಲ್ಬಣವಾಗಲಿದೆ. ಸಮಸ್ಯೆ ನಿವಾರಣೆಗೆ ಅಗತ್ಯವಾದ ಕೊಳವೆಬಾವಿ ಕೊರೆಸುವ ಹಾಗೂ ನೀರು ಲಭ್ಯವಾಗದ ಗ್ರಾಮಗಳಿಗೆ ಟ್ಯಾಂಕರ್ ನೀರು ಸರಬರಾಜಿಗೆ ಆದ್ಯತೆ ನೀಡಲಾಗುವುದು. ನೀರಾವರಿ ದೃಷ್ಟಿಯಿಂದ ತಾಲೂಕಿಗೆ ಯಾವುದೇ ರೀತಿಯ ಶಾಶ್ವತ ನೀರಾವರಿ ಯೋಜನೆ ಇನ್ನು ಲಭ್ಯವಾಗದ ಕಾರಣ ನೀರಿನ ಜಟಿಲ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಸುಮಾರು ನೂರು ಕೋಟಿಗೂ ಅಧಿಕ ವೆಚ್ಚದಲ್ಲಿ 33 ಕೆರೆಗಳಿಗೆ ನೀರುಣಿಸುವ ಯೋಜನೆಗೆ ತ್ವರಿತವಾಗಿ ಚಾಲನೆ ಕೊಟ್ಟು ಕಾಮಗಾರಿ ಮುಗಿಸಲು ಸರ್ಕಾರದ ಮೇಲೆ ಸದನದಲ್ಲಿ ಒತ್ತಡ ಹಾಕಿದ್ದು, ಒಂದು ವರ್ಷದಲ್ಲಿ ಕಾಮಗಾರಿ ಮುಗಿಸುವ ಭರವಸೆ ಕೊಟ್ಟಿದ್ದಾರೆ ಎಂದರು.
ಶರತ್ ಬಚ್ಚೇಗೌಡ ಬೆನ್ನಿಗೆ ನಿಂತ ಸಿದ್ದು, ಎಂಟಿಬಿಗೆ ಗುದ್ದು ...
ಬಿಜೆಪಿ ಪಕ್ಷದ ಬೆಲೆ ಏರಿಕೆ ಬಿಸಿ ಬಡ ವರ್ಗದವರನ್ನು ಸಂಕಷ್ಟಕ್ಕೆ ದೂಡಿದ್ದು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. ಇದೇ ಸಂದರ್ಭದಲ್ಲಿ ಹತ್ತಾರು ಬಿಜೆಪಿ ಕಾರ್ಯಕರ್ತರು ಶರತ್ ಬಚ್ಚೇಗೌಡ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಮಹಿಳೆಯರಿಗೆ ಸೀರೆ ವಿತರಣೆ ಮಾಡಲಾಯಿತು.
ಕುರುಬರನ್ನು ಕಡೆಗಣಿಸಿಲ್ಲ: ಶಾಸಕನಾಗಿ ತಾಲೂಕಿನಲ್ಲಿ ಕುರುಬ ಸಮುದಾಯವನ್ನು ಕಡೆಗಣಿಸುತ್ತಿದ್ದೇನೆ ಎಂಬ ಆರೋಪ ನನ್ನ ಮೇಲೆ ಕೇಳಿ ಬರುತ್ತಿದೆ. ಆದರೆ, ನಾನೊಬ್ಬ ಜಾತ್ಯತೀತ ನಾಯಕನಾಗಿದ್ದು, ಜಾತ್ಯತೀತವಾಗಿ ಆಡಳಿತ ನೀಡಿ, ಅಭಿವೃದ್ಧಿ ಮಾಡುವವನಿದ್ದೇನೆ. ಕನಕದಾಸರ ಕುಲದ ನೆಲೆ ಏನಾದರೂ ಬಲ್ಲಿರಾ, ಎಂಬ ವಚನದಂತೆ, ನನಗೆ ಕುಲದ ನೆಲೆ ಗೊತ್ತಿಲ್ಲ. ಎಲ್ಲಾ ವರ್ಗದವರ ಅಭಿವೃದ್ಧಿಯೇ ನನ್ನ ದೃಡ ಸಂಕಲ್ಪ. ಜಾತಿ ಆಧಾರದಲ್ಲಿ ರಾಜಕಾರಣ ಕೆಲಸ ಮಾಡೊಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ