TRK Bhat Passed Away: ಬಿಜೆಪಿ ಹಿರಿಯ ಮುಖಂಡ ಟಿ.ಆರ್.ಕೆ. ಭಟ್ ಇನ್ನಿಲ್ಲ
* ಕೇರಳದ ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಪೆರ್ಲದಲ್ಲಿ ನಿಧನ
* ಪೆರ್ಲ ಪೇಟೆಯಲ್ಲಿ ಹಿರಿಯ ವ್ಯಾಪಾರಿಯಾಗಿಯೂ ಗುರುತಿಸಿಕೊಂಡಿದ್ದ ಭಟ್
* ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ ಹೋರಾಟಗಾರ
ಮಂಗಳೂರು(ಫೆ.19): ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ, ಬಿಜೆಪಿ ಮುಂದಾಳು ಟಿ.ಆರ್.ಕೆ. ಭಟ್ ಪೆರ್ಲ (ತಡೆಗಲ್ಲು ರಾಮಕೃಷ್ಣ ಭಟ್) (94) ಅವರು ಕಾಸರಗೋಡು(Kasaragod) ಜಿಲ್ಲೆ ಮಂಜೇಶ್ವರ ತಾಲೂಕು ಪೆರ್ಲದ ಸ್ವಗೃಹದಲ್ಲಿ ಶುಕ್ರವಾರ ಮಧ್ಯಾಹ್ನ ಹೃದಯಾಘಾತದಿಂದ(Heart Attack) ನಿಧನರಾದರು.
ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷರಾಗಿದ್ದ ಅವರು ಪೆರ್ಲ ಪೇಟೆಯಲ್ಲಿ ಹಿರಿಯ ವ್ಯಾಪಾರಿಯಾಗಿಯೂ ಗುರುತಿಸಿಕೊಂಡಿದ್ದರು.
Bagalkot: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಇನ್ನಿಲ್ಲ
ವಿವಿಧ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಲ್ಲೂ ತೊಡಗಿಸಿಕೊಂಡಿದ್ದರು. ಆರ್‌ಎಸ್‌ಎಸ್(RSS) ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ್ದ ಅವರು ತುರ್ತು ಪರಿಸ್ಥಿತಿಯಲ್ಲಿ(Emergency) ಜೈಲುವಾಸ ಅನುಭವಿಸಿದ ಹೋರಾಟಗಾರರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು 2020ರ ಏ.23ರಂದು ಹಿಂದೆ ದೂರವಾಣಿ ಕರೆ ಮಾಡಿ ಬಿಜೆಪಿಯ(BJP) ಹಿರಿಯ ಧುರೀಣರಾದ ಡಿ.ಎಚ್.ಶಂಕರಮೂರ್ತಿ, ಉರಿಮಜಲು ರಾಮ ಭಟ್ ಅವರ ಜೊತೆ ಟಿ.ಆರ್.ಕೆ.ಭಟ್(TRK Bhat) ಅವರ ಆರೋಗ್ಯ ಕ್ಷೇಮವನ್ನೂ ವಿಚಾರಿಸಿದ್ದರು. ಟಿ.ಆರ್.ಕೆ.ಭಟ್ ಅವರು ಪತ್ನಿ, ಐವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.