Kodagu: ಬಿಜೆಪಿ ಭದ್ರಕೋಟೆ ಉಳಿಸಿಕೊಳ್ಳಲು ಯುವ ಮತದಾರರ ಸೆಳೆಯಲು ಮುಂದಾದ ಕಮಲ ಪಾಳಯ

ಕೊಡಗು 25 ವರ್ಷಗಳ ಆಡಳಿತ ವಿರೋಧಿ ಅಲೆಯ ನಡುವೆ ಬಿಜೆಪಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದಿದೆ. ಅದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಯುವಕರನ್ನು ಸೆಳೆಯಲು ಮುಂದಾಗಿದೆ.

BJP plans to attract young voters in Kodagu gow

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮಾ.13): ಕೊಡಗು 25 ವರ್ಷಗಳ ಆಡಳಿತ ವಿರೋಧಿ ಅಲೆಯ ನಡುವೆ ಬಿಜೆಪಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದಿದೆ. ಅದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಜಿಲ್ಲೆಯಲ್ಲಿ ಯುವ ಮತದಾರರೇ ಅತೀ ಹೆಚ್ಚಿರುವುರಿಂದ ಬಿಜೆಪಿ ಯುವಕರನ್ನು ಸೆಳೆಯಲು ಮುಂದಾಗಿದೆ.  ಕೊಡಗು ಜಿಲ್ಲೆಯಲ್ಲಿ  ಒಟ್ಟು ಮತದಾರರಲ್ಲಿ ಅರ್ಧದಷ್ಟು ಯುವ ಮತದಾರರಿದ್ದಾರೆ. ಅವರನ್ನು ಸೆಳೆಯುವುದಕ್ಕಾಗಿ ಇಂದು ಮಡಿಕೇರಿಯಲ್ಲಿ ವಿಧಾನಸಭಾ ಕ್ಷೇತ್ರದ ಸೋಮವಾರ ಪೇಟೆಯಲ್ಲಿ ಯುವಕ ಶಕ್ತಿ ಸಂಗಮ ಹೆಸರಿನಲ್ಲಿ ಬಿಜೆಪಿ ಬೈಕ್ ರ್ಯಾಲಿ ನಡೆಸಿತು.

ಸೋಮವಾರಪೇಟೆಯ ಆನೆಕೆರೆ ಬಳಿಯಿಂದ ಬೈಕ್ ಜಾಥಾ ನಡೆಯಿತು. ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಸಕ ಅಪ್ಪಚ್ಚು ರಂಜನ್ ಬೈಕ್ ಜಾಥಾಕ್ಕೆ ಚಾಲನೆ ನೀಡಿದರು. ಐದು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಯುವಕರು ಬೈಕ್ಗಳಿಗೆ ಬಿಜೆಪಿ ಬಾವುಟ ಕಟ್ಟಿ ರ್ಯಾಲಿಯಲ್ಲಿ ಭಾಗವಹಿಸಿದರು. ಆನೆ ಕೆರೆಯಿಂದ ಹೊರಟ ಬೈಕ್ ರ್ಯಾಲಿ ಸೋಮವಾರಪೇಟೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರ್ಯಾಲಿ ಉದ್ಧಕ್ಕೂ ಬಿಜೆಪಿಗೆ ಜೈಕಾರ ಹಾಕುತ್ತಾ ಕಾರ್ಯಕರ್ತರು ಸಾಗಿದರು. ಬೈಕ್ ರ್ಯಾಲಿ ಒಕ್ಕಲಿಗರ ಸಮುದಾಯ ಭವನಕ್ಕೆ ಬಂದು ಸಮಾಪ್ತಿಗೊಂಡಿತು.

ಯುವಕರು, ಯುವತಿಯರು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್ ಕಾಂಗ್ರೆಸ್ ವಿರುದ್ಧ ಗುಡುಗಿದರು. ಭಾರತ್ ಜೋಡೋ ಎಂದು ಕಾರ್ಯಕ್ರಮ ಮಾಡಿದ ಕಾಂಗ್ರೆಸ್ ನ ಪಪ್ಪು ನಮ್ಮ ವೈಮನಸ್ಸುಗಳು ಏನೇ ಇದ್ದರೂ ರಾಷ್ಟ್ರದ ಒಳಗೆ ಮಾತನಾಡುವ ಬದಲು ಬ್ರಿಟನ್ ನಲ್ಲಿ ಯಾವುದೋ ಕ್ಲಾಸ್ ಕೊಡಲು ಹೋಗಿ ದೇಶದ ವಿರುದ್ಧ ಮಾತನಾಡಿದ್ದಾರೆ.

ಇಂತಹ ದೇಶ ದ್ರೋಹಿ ಶಕ್ತಿಯಗಳಿಗೆ ತಕ್ಕ ಉತ್ತರ ನೀಡಬೇಕಾದರೆ ಬಿಜೆಪಿ ಗೆಲವು ಸಾಧಿಸಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಮತ್ತು ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಜಿಲ್ಲೆಗೆ ಯಾವುದೇ ಅನುದಾನ ನೀಡದೆ ಕಡೆಗಣಿಸಲಾಯಿತು. ಆದರೆ ನಮ್ಮ ಸರ್ಕಾರ ಬಂದ ಮೇಲೆ ಯಡಿಯೂರಪ್ಪನವರಾಗಲಿ, ಬೊಮ್ಮಾಯಿ ಅವರಾಗಲಿ ಸಾಕಷ್ಟು ಅನುದಾನ ಕೊಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಿದರು. ಹೀಗಾಗಿ ಜಿಲ್ಲೆಯಲ್ಲೂ ಎರಡು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವನ್ನು ಜನರೇ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಭದ್ರ ಕೋಟೆ ಉಳಿಸಿಕೊಳ್ಳಲು ಕೊಡಗಿನಲ್ಲಿ ಇಡೀ ತಿಂಗಳು ಸಚಿವರುಗಳ ನೇತೃತ್ವದಲ್ಲಿ ಬಿಜೆಪಿ ಸಮಾವೇಶ

ಬಿಜೆಪಿ ಯುವ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಸಂದೀಪ್ ಕುಮಾರ್ ಅವರು ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಅನ್ನದಾನದಿಂದ ಹಿಡಿದು ಅಂತ್ಯ ಸಂಸ್ಕಾರದವರೆಗೆ ಓಡಾಡಿ ಜನರಿಗೆ ಸಹಾಯದ ಮಾಡಿದ ರಾಜಕೀಯ ಪಕ್ಷ ಎಂದರೆ ಅದು ಬಿಜೆಪಿಯ ಯುವ ಮೋರ್ಚಾ ಮಾತ್ರ. ಇಂತಹ ಪಕ್ಷದಲ್ಲಿ ಯುವ ಶಕ್ತಿ ಆಗಿರುವ ನಾವು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಜನರಿಗೆ ಆರೋಗ್ಯ ಸೇವೆ ನೀಡುವುದಕ್ಕಾಗಿ ಆಯುಷ್ಮಾನ್ ಆರೋಗ್ಯ ಕಾರ್ಡ್ ಮಾಡಿತು. ಜನರಿಗೆ ಎಲ್ಲಾ ಔಷಧಗಳು ಕಡಿಮೆ ಬೆಲೆಯಲ್ಲಿ ಸಿಗಬೇಕೆಂಬ ಜನೌಷಧ ಅಂಗಡಿಗಳನ್ನು ತೆರೆಯಲಾಗಿದೆ. ನಮ್ಮ ಸರ್ಕಾರಗಳ ಇಂತಹ ಹಲವಾರು ಯೋಜನೆಗಳ ಮಾಹಿಯನ್ನು ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಯುವಕರಿಗೆ ಕಿವಿಮಾತು ಹೇಳಿದರು.

ಕಾಂಗ್ರೆಸ್ ನಾಯಿಗಳು ಮೋದಿ, ಬೊಮ್ಮಾಯಿಯನ್ನು ಕೆಟ್ಟದ್ದಾಗಿ ಬೈಯುತ್ತವೆ: ಈಶ್ವರಪ್ಪ

ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಬಿಜೆಪಿ ಬರೀ ಆಶ್ವಾಸನೆ ಕೊಡುವುದಿಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸಿದೆ. ದೇಶದ ಅಭಿವೃದ್ಧಿ ಆಗಬೇಕಾದರೆ ಸಾರಿಗೆ ವ್ಯವಸ್ಥೆ ಅಭಿವೃದ್ಧಿ ಆಗಬೇಕಾಗುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. ಹಾಗೆಯೇ ಮೈಸೂರು ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಪ್ರಧಾನಿ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ್ದಾರೆ. ಜೊತೆಗೆ ಸೋಮವಾರಪೇಟೆ ಮತ್ತು ಅರಕಲಗೂಡು ಮೂಲಕ ಬೆಂಗಳೂರು ಯಶ್ವಂತಪುರಕ್ಕೆ ಸಂಪರ್ಕ ಕಲ್ಪಿಸಲಿರುವ ಆ ರಸ್ತೆ ಕಾಮಗಾರಿಯು ಈಗಾಗಲೇ ಆರಂಭವಾಗಿದೆ. ಯುವಶಕ್ತಿ ದೇಶದ ಶಕ್ತಿ ಆಗಿದೆ. ಸ್ವಾತಂತ್ರ್ಯ ಚಳುವಳಿಯಲ್ಲೂ ಯುವಶಕ್ತಿಯ ಪಾತ್ರ ಮಹತ್ವದ್ದಾಗಿತ್ತು. ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಆಶಯ ಈಡೇರಿಸಬೇಕಾದರೆ ಇಂದಿನ ದೇಶದ ಯುವ ಶಕ್ತಿ ಸದ್ವಿನಿಯೋಗ ಆಗಬೇಕಾಗಿದೆ ಎಂದರು.

Latest Videos
Follow Us:
Download App:
  • android
  • ios