ಸುಮಲತಾ ಅವರು ಹೈಲಿ ಡಿಗ್ನಿಫೈಡ್ ಸಂಸದೆ ಎಂದು ಬಣ್ಣಿಸಿದ ಮುಖಂಡ ಸಂಸದ ಪ್ರಜ್ವಲ್ ರೇವಣ್ಣಗೂ ಒಳ್ಳೆ ಭವಿಷ್ಯವಿದೆ - ಬಿಜಪಿ ಸಂಸದ ಮಾಜಿ ಸಿಎಂ ಕುಮಾರಸ್ವಾಮಿ ಮಾತಿನ ಬಗ್ಗೆಯೂ ತೀವ್ರ ಅಸಮಾಧಾನ

ತುಮಕೂರು (ಜು.09): ಸುಮಲತಾ ಅವರು ಹೈಲಿ ಡಿಗ್ನಿಫೈಡ್ ಸಂಸದೆ ಎಂದು ಸಂಸದ ಜಿ ಎಸ್ ಬಸವರಾಜು ಬಣ್ಣಿಸಿದ್ದಾರೆ. 

ತುಮಕೂರಿನಲ್ಲಿ ಗುರುವಾರ ಮಾತನಾಡಿದ ಬಸವರಾಜು ಸಂಸತ್‌ನಲ್ಲಿ ಮಾತನಾಡುವಾಗ ಅವರ ಗಾಂಭೀರ್ಯತೆ ನೋಡಿದರೆ ನಾವು ಹೆಮ್ಮೆ ಪಡಬೇಕು. ಮಾಜಿ ಸಿಎಂ ಕುಮಾರಸ್ವಾಮಿ ಅವರು ಆ ಹೆಣ್ಣು ಮಗಳ ಬಗ್ಗೆ ಹಾಗೆ ಹೇಳಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು. 

ಸುಮಲತಾರನ್ನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದ ಎಚ್‌ಡಿಕೆ

ಹಾಗೆಯೇ ಸಂಸದ ಪ್ರಜ್ವಲ್ ರೇವಣ್ಣಗೆ ಉತ್ತಮ ರಾಜಕೀಯ ಭವಿಷ್ಯವಿದೆ ಎಂದ ಬಸವರಾಜು ಆತ ಸಂಸತ್‌ನಲ್ಲಿ ಮಾತನಾಡಿದ್ದು ನೋಡಿ ನಾನು ಬೆನ್ನುತಟ್ಟಿ ಬಂದಿದ್ದೇನೆ. ಇದನ್ನೇ ಮುಂದುವರಿಸುವಂತೆ ಹೇಳಿದ್ದೇನೆ ಎಂದರು. 

ಕುಮಾರಸ್ವಾಮಿ-ಸುಮಲತಾ ಮಾತಿನ ಸಮರಕ್ಕೆ ದೇವೇಗೌಡ್ರ ಮೊದಲ ಪ್ರತಿಕ್ರಿಯೆ .

ಡಾ.ಜಿ ಪರಮೇಶ್ವರ್ ಅವರು ಮುಖ್ಯಮಂತ್ರಿಯಾದರೆ ಇಡೀ ಜಿಲ್ಲೆಯನ್ನೇ ಝೀರೋ ಟ್ರಾಫಿಕ್ ಮಾಡಿಬಿಡುತ್ತಾರೆ. ಡಿಸಿಎಂ ಅಗಿದ್ದಾಗಲೇ ಝೀರೋ ಟ್ರಾಫಿಕ್ ಮಾಡಿಕೊಂಡು ಓಡಾಡುತ್ತಿದ್ದರು ಇನ್ನು ಸಿಎಂ ಆದರೆ ಜಿಲ್ಲೆಯನ್ನೇ ಝೀರೋ ಮಾಡುತ್ತಾರೆ. ಅಲ್ಲದೇ ಪೊಲೀಸರಿಗೆ ಮೂತ್ರ ಮಾಡುವುದಕ್ಕೂ ಬಿಡುವುದಿಲ್ಲ ಎಂದು ಲೇವಡಿ ಮಾಡಿದರು. 

ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹಾಗಾಗಿ ಯಡಿಯೂರಪ್ಪನವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ ಎಂದು ಈ ವೇಳೆ ಬಸವರಾಜು ಹರಿಹಾಯ್ದರು.