ಕೊರೋನಾ ಸಂದರ್ಭದಲ್ಲಿ ಮುಷ್ಕರ ಸರಿಯಲ್ಲ : ಬಿಜೆಪಿ ಸಂಸದ ಬಚ್ಚೇಗೌಡ
ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದ ಈ ಸಂಬಂಧ ಚಿಕ್ಕಬಳ್ಳಾಪುರ ಸಂಸದ ಬಿ ಎನ್ ಬಚ್ಚೇಗೌಡ ಪ್ರತಿಕ್ರಿಯಿಸಿ ಸಚಿವರು ಬಿಗಿಯಾಗಬೇಕು ಎಂದು ಸಲಹೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಈ ನಿರ್ಧಾರ ಸರಿಯಲ್ಲ ಎಂದು ಮುಷ್ಕರ ಬಗ್ಗೆ ಮಾತನಾಡಿದ್ದಾರೆ.
ಚಿಕ್ಕಬಳ್ಳಾಪುರ (ಏ.08): ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುವುದು ಸೂಕ್ತವಲ್ಲ. ಈ ವಿಚಾರದಲ್ಲಿ ರಾಜ್ಯದ ಸಾರಿಗೆ ಸಚಿವರು ಇನ್ನಷ್ಟು ಬಿಗಿ ಆಗಬೇಕೆಂದು ಮಾಜಿ ಸಾರಿಗೆ ಸಚಿರು ಆಗಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಸಂಕಷ್ಟದಲ್ಲಿ ಈಗಾಗಲೇ ಸರ್ಕಾರ ಸಾಕಷ್ಟುಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಸಾರಿಗೆ ನೌಕರರು ಪದೇ ಪದೆ ಮುಷ್ಕರ ನಡೆಸುವುದು ಅಕ್ಷಮ್ಯ ಅಪರಾಧ, ಇದು ಯಾರು ಒಪ್ಪುವ ಸಂಗತಿ ಅಲ್ಲ ಎಂದರು.
ಬಸ್ ಮುಷ್ಕರ : ಸಾರಿಗೆ ನಿಗಮಗಳಿಗೆ 17 ಕೋಟಿ ರು. ನಷ್ಟ .
ಯಾವ ದೇಶದಲ್ಲಿಯು, ರಾಜ್ಯದಲ್ಲಿಯು ಸಾರ್ವಜನಿಕ ಸಾರಿಗೆ ನಿಗಮಗಳು ಲಾಭದಾಯಕವಾಗಿ ನಡೆಯುತ್ತಿಲ್ಲ. ಸಾರ್ವಜನಿಕ ಸಾರಿಗೆ ಸಾಕಷ್ಟುಸರ್ಕಾರಕ್ಕೆ ಹೊರೆ ತಂದುಕೊಡುತ್ತದೆ. ಸಾರಿಗೆ ನೌಕರರು ಕೂಡ ಕೊರೋನಾ ಸಂದರ್ಭದಲ್ಲಿ ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಬೇಕೆಂದ ಅವರು, ಪದೇ ಪದೆ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಮುಷ್ಕರ ನಡೆಸುವುದು ಎಷ್ಟುಮಾತ್ರ ಸರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಗೆ ಅವಕಾಶ ಇದೆ.
ನೌಕರರು ಬೇಡಿಕೆ ನ್ಯಾಯಯುತವಾಗಿ ಇರಬಹುದು. ಆದರೆ ಮುಷ್ಕರಕ್ಕೆ ಇದು ಸಂದರ್ಭವಲ್ಲ ಎಂದರು. ಸಾರ್ವಜನಿಕರ ಹಿದೃಷ್ಟಿಯಿಂದ ನೌಕರರು ಮುಷ್ಕರ ವಾಪಸ್ಸು ಪಡೆದುಕೊಳ್ಳಬೇಕೆಂದು ಮನವಿ ಮಾಡುತ್ತೇನೆಂದರು.