ಬಳ್ಳಾರಿ [ಜ.07]: ‘ಮುಂದಿನ ಸೋಮವಾರ ಬಳ್ಳಾರಿಗೆ ಬರುತ್ತೇನೆ. ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ ಮನೆಯ ಮುಂದೆಯೇ ಕೂಡುತ್ತೇನೆ. ಅದ್ಯಾವ ಕತ್ತಿ ಹಿಡಿದು ಬರುತ್ತಾರೆ ಬರಲಿ’ ಎಂದು ಸವಾಲು ಹಾಕಿರುವ ಶಾಸಕ ಜಮೀರ್‌ ಅಹ್ಮದ್‌ಗೆ ತಿರುಗೇಟು ನೀಡಿರುವ ಶಾಸಕ ಜಿ.ಸೋಮಶೇಖರ ರೆಡ್ಡಿ, ‘ಜಮೀರ್‌ ಬಳ್ಳಾರಿಗೆ ಬರಲಿ. ನಮ್ಮ ಮನೆಯಲ್ಲಿಯೇ ಟಿಫಿನ್‌ ಮಾಡಿಕೊಂಡು ಹೋಗಲಿ’ ಎಂದು ಆಹ್ವಾನ ನೀಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ ಅವರು, ನನ್ನ ಹೇಳಿಕೆಯನ್ನು ಜಮೀರ್‌ ತಮ್ಮ ಸಮುದಾಯಕ್ಕೆ ಎಂದು ಏಕೆ ತೆಗೆದುಕೊಂಡಿದ್ದಾರೆ? ಕುಂಬಳಕಾಯಿ ಕಳ್ಳ ಎಂದರೆ ಇವರೇಕೆ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸಿದ್ದು ಹೋದಲ್ಲಿ ಬಂದಲ್ಲಿ ಜಮೀರ್, ಏನಿದು ಖಾನ್ ಹೊಸ ಅವತಾರ್!...

ನಾನು ಮುಸ್ಲಿಂ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಿಲ್ಲ. ಶಿವಾಜಿಯಂತೆ ದುರ್ಗಮ್ಮಳ ದರ್ಶನ ಪಡೆದು ಖಡ್ಗ ಹಿಡಿದುಕೊಂಡ್ರೆ ಎಂದು ಹೇಳಿದ್ದನ್ನು ಬೇರೆ ಅರ್ಥದಲ್ಲಿ ಬಿಂಬಿಸಲಾಗುತ್ತಿದೆ. ಅಮಾಯಕ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್‌ ಮಾಡಿ ಕಾಂಗ್ರೆಸ್‌ನವರು ಪ್ರಚೋದನೆ ಮಾಡುತ್ತಿದ್ದಾರೆ. ಇದನ್ನೇ ನಾನು ಹೇಳಿದ್ದೇನೆ. ಇದರಲ್ಲಿ ನನ್ನ ತಪ್ಪಾದರೂ ಏನಿದೆ ಎಂದರು.

ರೆಡ್ಡಿ ಖಡ್ಗ ತಂದರೆ ಜಮೀರ್ ಏನ್ ಮಾಡ್ತಾರೆ? ನೋಡ್ತಾ ಇರಿ...

ನಾನು ಹೊರಗಡೆಯಿಂದ ಬಂದವನಲ್ಲ, ಕರ್ನಾಟಕದವನು. ನಮ್ಮ ತಂದೆ ಇಲ್ಲಿಯೇ ಪೊಲೀಸ್‌ ಆಗಿದ್ದರು. ನನ್ನಲ್ಲಿ ಸಹ ಪೊಲೀಸ್‌ ರಕ್ತ ಹರಿಯುತ್ತಿದೆ. ಜಮೀರ್‌ ಅಹ್ಮದ್‌ ಏನಾದರೂ ಬೇರೆ ದೇಶದಿಂದ ಬಂದಿದ್ದಾರೋ ಏನೋ ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.