ಬಂಟ್ವಾಳ(ಫೆ.01): ಯಾರೋ ಒಬ್ರು ಹೇಳಿಕೆ ನೀಡಿದರೂ ಅಂತ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗೋಲ್ಲ ಎಂದು ಬಿಜೆಪಿ ಶಾಸಕ ಕುಮಾರ್‌ ಬಂಗಾರಪ್ಪ ಹೇಳಿದ್ದಾರೆ.

ಬಂಟ್ವಾಳ ಹೊಕ್ಕಾಡಿಗೋಳಿಯಲ್ಲಿ ಕಂಬಳ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಪೂರ್ಣಾವಧಿ ಯಡಿಯೂರಪ್ಪನವರೇ ಆಗಿರುತ್ತಾರೆ. ಈ ನಿರ್ಧಾರ ಕೇಂದ್ರದ್ದು. ಯತ್ನಾಳ್‌ ಈ ರೀತಿಯ ಗೊಂದಲಗಳನ್ನು ಮಾಡುವುದು ಸೂಕ್ತ ಅಲ್ಲ ಎಂದು ಹೇಳಿದರು.

ಸಿಎಂ ಬದಲಾವಣೆ ವಿಚಾರ : ಮುಂದಿನ ದಿನದಲ್ಲಿ ಎಲ್ಲಾ ಸರಿಯಾಗುತ್ತೆಂದ ಸವದಿ .

ಈಗಾಗಲೇ ಯತ್ನಾಳ್‌ ಅವರಿಗೆ ಕೇಂದ್ರ ಎಚ್ಚರಿಕೆ ಕೂಡ ನೀಡಿದೆ. ಪಕ್ಷದ ವಿರುದ್ಧ ಬೇಕಾಬಿಟ್ಟಿಹೇಳಿಕೆ ನೀಡುವುದು ಸರಿಯಲ್ಲ. ಕೇಂದ್ರ ಈ ಬಗ್ಗೆ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ ಎಂದರು.

ಸಿಎಂ ಬದಲಾವಣೆ ವಿಚಾರವಾಗಿ ಯತ್ನಾಳ್ ನೀಡಿದ ಹೇಳಿಕೆ ಸಂಬಂಧ ಈಗಾಗಲೇ ಸಚಿವರು ಅನೇಕ ಬಿಜೆಪಿ ಮುಖಂಡರು ಪ್ರತಿಕ್ರಿಯಿಸಿದ್ದು, ಮುಂದಿನ ಎರಡೂವರೆ ವರ್ಷವೂ ಬಿ ಎಸ್‌ ವೈ ಸಿಎಂ ಆಗಿ ಮುಂದುವರಿಯುತ್ತಾರೆಂದು ಹೇಳಿದ್ದಾರೆ.