ಕಲಬುರಗಿ, [ಡಿ.03]: ನನಗೆ ಸಿದ್ರಾಮಯ್ಯ ನಡುವೆ ಬಹಳ ಲವ್ ಇದೆ.  ಅದಕ್ಕಾಗಿಯೇ ಅವರು ನನ್ನ ಬಗ್ಗೆ ಸಲ್ಲದ ಮಾತಾಡುತ್ತಾರೆ ಎಂದು ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಅವರು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಇಂದು [ಸೋಮವಾರ] ಬರ ಅಧ್ಯಯನಕ್ಕೆಂದು ಕಲಬುರಗಿಗೆ ಆಗಮಿಸಿದ್ದ ಈಶ್ವರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿ,  ನನ್ನ ಕತ್ತರಿಸಿದ್ರೂ ನಾನು ಬಿಜೆಪಿ ಬಿಡೊಲ್ಲ. ಆದ್ರೆ ಸಿದ್ರಾಮಯ್ಯ ಹಂಗಲ್ಲ.ಅವಕಾಶ ಸಿಕ್ರೆ ಬಿಜೆಪಿಗೆ ಬರಲು ರೆಡಿ ಆಗ್ತಾರೆ ಎಂದು ವಾಗ್ದಾಳಿ ನಡೆಸಿದರು.

ಅವರಂಥ ಆಶವಾದಿ ರಾಜಕಾರಣಿ ಈ ದೇಶದಲ್ಲಿ ಇನ್ನೊಬ್ಬರಿಲ್ಲ. ಇದನ್ನು ನಾನು ಹೇಳಿದ್ರೆ ನನ್ನ ಕೆಟ್ಟದಾಗಿ ಬೈತಾರೆ.  ಬಿಜೆಪಿ ಗಂಗಾ ನದಿ ಇದ್ದಂತೆ.  ಎಂತಹ ಕೆಟ್ಟ, ಕೊಳೆತವರು ಬಂದ್ರೂ ಶುದ್ಧ ಮಾಡುವ ಶಕ್ತಿ ಬಿಜೆಪಿಗಿದೆ ಎಂದರು.