ಚಿತ್ರದುರ್ಗ [ಜ.23]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹತಾಶ ಭಾವನೆಯಲ್ಲಿದ್ದಾರೆ ಎಂದು ಬಿಜೆಪಿ ಶಾಸಕ ಚಂದ್ರಪ್ಪ ವಾಗ್ದಾಳಿ ನಡೆಸಿದ್ದಾರೆ. 

ಚಿತ್ರದುರ್ಗದಲ್ಲಿ ಮಾತನಾಡಿದ ಶಾಸಕ ಚಂದ್ರಪ್ಪ, ರಾಜ್ಯ ಸರ್ಕಾರ ಟೇಕ್ ಆಫ್ ಆಗದೇ ಸತ್ತೇ ಹೋಗಿದೆ ಎಂದ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. 

ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹತಾಶರಾಗಿದ್ದಾರೆ. ವಿಪಕ್ಷ ಮುಖಂಡ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ದಡ ಸೇರಲಾಗದೇ ಸಿದ್ದರಾಮಯ್ಯ ಹತಾಶರಾಗಿದ್ದಾರೆ ಎಂದರು. 

ರಾಜ್ಯದಲ್ಲೀಗ ಬೆತ್ತಲೆ ಸೇವೆ ಸಂಪೂರ್ಣ ಬಂದ್: ಸಿದ್ದು ತಂದ ಕಾಯ್ದೆ ಜಾರಿಗೆ!...

ಸಿದ್ದರಾಮಯ್ಯ ಅತ್ತ, ಇತ್ತ ಯಾವುದೂ ಇಲ್ಲದೇ ಅಂತರ ಪಿಶಾಚಿಯಂತಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಅವರ ಬೆಂಬಲಿಗರು ನೇಮಕವಾಗುತ್ತಿಲ್ಲ ಎನ್ನುವ ಕೊರಗಿನಲ್ಲಿದ್ದಾರೆ. 

ಮಹಿಳೆಯರಿಗೆ ಬಿಜೆಪಿ ಕಡೆ ಒಲವು ಜಾಸ್ತಿ: ಮಾಜಿ ಸಿಎಂ...

ತಮ್ಮವರನ್ನೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತೂರಿಸುವ ಯತ್ನ ನಡೆಸುತ್ತಿದ್ದು, ಅವರ ತಟ್ಟೆಗೆ ಬಿದ್ದಿರುವುದನ್ನು ನೋಡಿಕೊಳ್ಳಲಿ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದ್ದು, ಡಿಕೆ ಶಿವಕುಮಾರ್ ಆಯ್ಕೆ ಖಚಿತವಾದರೂ ಘೋಷಣೆಯಾಗುತ್ತಿಲ್ಲ. ಈ ಬಗ್ಗೆ ನೇರವಾಗಿಯೇ ಅಸಮಾಧಾನ, ಆರೋಪಗಳು ಕೇಳಿಬರುತ್ತಿವೆ.