Asianet Suvarna News Asianet Suvarna News

ಹಿಂದುತ್ವ ಪ್ರತಿಪಾದಕರಿಗೆ ಮತ ಹಾಕಿ, ತಾಕತ್ತು ತೋರಿಸಿ: ಯತ್ನಾಳ್‌

ಸಾವರ್ಕರ್‌ ಬಗ್ಗೆ ಮಾತನಾಡುವವರು ಅವರ ಪಾದದ ಧೂಳಿಗೂ ಸಮಾನವಿಲ್ಲ: ವಿಜಯಪುರ ಶಾಸಕ ಬಸವರಾಜ ಪಾಟೀಲ್‌ ಯತ್ನಾಳ್‌

BJP MLA Basanagouda Patil Yatnal Talks Over Hindutva grg
Author
First Published Sep 16, 2022, 2:00 PM IST

ಶಹಾಪುರ(ಸೆ.16):  ಈ ದೇಶದ ಹಿಂದೂ ಸಂಸ್ಕೃತಿ ಮತ್ತು ಹಿಂದುತ್ವದ ಬಗ್ಗೆ ಪ್ರತಿಪಾದನೆ ಮಾಡುವವರಿಗೆ ಮಾತ್ರ ಮತ ಹಾಕುವ ಮೂಲಕ ಹಿಂದುಗಳ ತಾಕತ್ತು ತೋರಿಸಿರಿ ಎಂದು ವಿಜಯಪುರ ಶಾಸಕ ಬಸವರಾಜ ಪಾಟೀಲ್‌ ಯತ್ನಾಳ್‌ ಯುವಕರಿಗೆ ಕರೆ ನೀಡಿದರು. ನಗರದ ಸುಬೇದಾರ್‌ ಆಸ್ಪತ್ರೆಯಲ್ಲಿ ಹಿಂದೂ ಮಹಾಗಣಪತಿ ಮಹಾಮಂಡಳಿ ಶಹಾಪುರ ಮತ್ತು ಶ್ರೀರಾಮ ಸೇನೆ ವತಿಯಿಂದ ಸ್ಥಾಪಿಸಲಾಗಿದ್ದ ಹಿಂದೂ ಮಹಾಗಣಪತಿಯ ವಿಸರ್ಜನೆ ಶೋಭಾಯಾತ್ರೆಯ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಡಿಜೆಯೊಂದಿಗೆ ಶ್ರೀರಾಮ ಪುತ್ಥಳಿ ಮತ್ತು ವೀರ ಸಾವರ್ಕರ್‌ ಅವರ ಭಾವಚಿತ್ರ ಮೆರವಣಿಗೆ ಪ್ರಮುಖ ಆಕರ್ಷಣೆಯಾಗಿದ್ದವು. ಈ ಮೆರವಣಿಗೆ ಪ್ರಮುಖ ಬೀದಿಯಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರ ಡ್ಯಾನ್ಸ್‌ ಮತ್ತು ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಿತು.

ಸೂರತ್‌-ಚೆನ್ನೈ ಎಕ್ಸಪ್ರೆಸ್‌ ವೇ: ನ್ಯಾಯಯುತ ಪರಿಹಾರಕ್ಕೆ ರೈತರ ಆಗ್ರಹ

ಈ ಕಾರ್ಯಕ್ರಮಕ್ಕೆ ಪೊಲೀಸರು ಡಿಜೆಗೆ ಅವಕಾಶ ಕೊಡೋದಿಲ್ಲ ಎನ್ನುವುದಕ್ಕೆ ಕರ್ನಾಟಕ ಏನು ಪಾಕಿಸ್ತಾನದಲ್ಲಿ ಇಲ್ಲ. ಹಿಂದೂಸ್ತಾನದಲ್ಲಿದೆ. ಯಾವುದೇ ಪರ್ಮಿಷನ್‌ ಅವಶ್ಯಕತೆ ಇಲ್ಲ. ಸಾವರ್ಕರ್‌ ಬಗ್ಗೆ ಮಾತನಾಡುವವರು ಅವರ ಪಾದದ ಧೂಳಿಗೂ ಸಮನಾಗಲ್ಲ. ಅಂತದರಲ್ಲಿ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತೀರಾ ಎಂದು ಯತ್ನಾಳ ಟಾಂಗ್‌ ನೀಡಿದರು.

ದೇಶದಲ್ಲಿನ ಸಾವರ್ಕರ್‌ ವಿರೋಧಿಗಳಿಗೆ ಒಂದು ಸವಾಲು ಹಾಕ್ತೀನಿ, ಇವರಿಗೆ ತಾಕತ್ತಿದ್ದರೆ ಅಂಡಮಾನ್‌ ನಿಕೋಬಾರ್‌ ದ್ವೀಪದಲ್ಲಿ ಸಾವರ್ಕರ್‌ ಅವರನ್ನು ಇಡಲಾಗಿದ್ದ ಜೈಲಿನಲ್ಲಿ ಒಂದು ವಾರ ಇದ್ದು ಬರಬೇಕು. ಕಾಲಾಪಾನಿ ಶಿಕ್ಷಗೆ ಒಳಗಾಗಿ ಸಾವರ್ಕರ್‌ ಇದ್ದ ರೂಮ್‌ನಲ್ಲಿ ಒಂದು ವಾರ ಅಲ್ಲಿರಬೇಕೆಂದು ಅವರು ಸವಾಲೆಸಿದರು.

ಎತ್ತಿನ ಬದಲಾಗಿ ಸಾವರ್ಕರ್‌ ಅವರನ್ನು ಕಟ್ಟಿಗಾಣ ತೆಗೆಯುತ್ತಿದ್ದರು. ಬೆನ್ನಿಗೆ ಬಾರ್‌ ಕೋಲಿನಿಂದ ಹೊಡೆಯುತ್ತಿದ್ದರು. ಅದನ್ನು ಯಾರು ತಾಳಿಕೊಳ್ಳುತ್ತಾರೆ. ಇಷ್ಟೆಲ್ಲ ನರಕಾಯತನೇ 25 ವರ್ಷಗಳ ಕಾಲ ಜೈಲಿನಲ್ಲಿದ್ದು, ಕಳೆದಿದ್ದಾರೆ. ಅವರಲ್ಲಿರುವ ದೇಶಪ್ರೇಮದ ಬಗ್ಗೆ ಮಾತನಾಡುವ ಅವಿವೇಕಿಗಳಿಗೆ ಮತ್ತು ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡರು. ಹಿಂದೂಗಳು ಜಾಗೃತರಾಗಿದ್ದಾರೆ. ನಿಮ್ಮ ಕುತಂತ್ರ ನೀತಿ ಇನ್ನು ಮುಂದೆ ನಡೆಯುವುದಿಲ್ಲ ಕಾಂಗ್ರೆಸ್‌ ವಿರುದ್ಧ ಗುಡುಗಿದರು.

ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಆಂದೋಲದ ಸಿದ್ದಲಿಂಗ ಮಹಾಸ್ವಾಮಿ ಮಾತನಾಡಿ, ವಿನಾಶವಾಗಿರುವ ಕಾಂಗ್ರೆಸ್‌ನಿಂದ ಈಗ ಭಾರತ ಜೋಡೋ ಯಾತ್ರೆ ನಡೆಸುತ್ತಿದೆ. ಇದು ಭಾರತ ಜೋಡೋ ಯಾತ್ರೆಯಲ್ಲ. ಅದು ಭಾರತ ತೋಡೋ ಯಾತ್ರೆಯಾಗಿದೆ ಎಂದು ಕಾಂಗ್ರೆಸ್‌ಗೆ ಟಾಂಗ್‌ ನೀಡಿದರು.

ದಂಡನಾಯಕ ಯತ್ನಾಳರ ಮುಂದಾಳತ್ವದಲ್ಲಿ ಹಿಂದುಗಳ ಸೈನ್ಯ ತೆಗೆದುಕೊಂಡು ಪಾಕಿಸ್ತಾನಕ್ಕೆ ಯುದ್ಧಕ್ಕೆ ಹೊರಟಂತಿದೆ ಈ ಮೆರವಣಿಗೆ. ಹಿಂದುತ್ವದ ಬಗ್ಗೆ ಅಧಿವೇಶನದಲ್ಲಿ ಸಿಂಹದಂತೆ ಘರ್ಜಿಸುವ ಬಸವರಾಜ್‌ ಪಾಟೀಲ್‌ ಯತ್ನಾಳ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಯೋಗ್ಯವಾದ ವ್ಯಕ್ತಿ. ಅವರು ಮುಖ್ಯಮಂತ್ರಿಯಾಗಬೇಕೆಂಬುದೇ ಹಿಂದುಗಳ ಮಹಾದಾಸೆಯಾಗಿದೆ ಎಂದರು.

ವೀರ ಸಾವರ್ಕರ್‌ ಕ್ಷಮಾಪಣೆ ಪತ್ರ ಒಂದು ತಂತ್ರವಾಗಿತ್ತು. ಜೈಲಿನಿಂದ ಹೊರಬಂದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವುದು ಕ್ಷಮಾಪಣೆ ಪತ್ರದ ಉದ್ದೇಶವಾಗಿತ್ತು. ಜೈಲಿನಲ್ಲಿದ್ದು ಸಾಯುವುದಕ್ಕಿಂತ ಕ್ಷಮಾಪಣೆ ನಾಟಕವಾಡಿ ಹೊರಬಂದು ಸ್ವಾತಂತ್ರ್ಯ ಚಳುವಳಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕ್ಷಮಾಪಣೆ ಪತ್ರ ಬರೆದಿದ್ದಾರೆ ಹೊರತು ಹೆಡಿಯಾಗಿ ಅಲ್ಲ. ಆದರೆ, ಗಾಂಧಿ ಮನೆತನ ಈ ದೇಶಕ್ಕೆ ಅತಿ ದೊಡ್ಡ ಪ್ರಮಾಣದಲ್ಲಿ ಮೋಸ, ವಂಚನೆ ಮಾಡಿದೆ. ಸಾವರ್ಕರ್‌ ಬಗ್ಗೆ ಮಾತನಾಡುವ ಯೋಗ್ಯತೆ ಇವರಿಗಿಲ್ಲ ಎಂದರು.

ಡಾ. ಚಂದ್ರಶೇಖರ್‌ ಸುಬೇದಾರ್‌, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಕರಣ ಸುಬೇದಾರ್‌, ಶ್ರೀರಾಮ ಸೇನೆಯ ತಾಲೂಕಾಧ್ಯಕ್ಷ ಶಿವಕುಮಾರ್‌ ಶಿರವಾಳ ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.

ಶಹಾಪುರದಲ್ಲಿ ಗೋ ಹತ್ಯೆ ತಡೆಯುವಲ್ಲಿ ವಿಫಲ

ಗೋ ಹತ್ಯೆ ತಡೆಯುವಲ್ಲಿ ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಗೋ ಹತ್ಯೆ ತಡೆಯಲು ಹೋದ ನಮ್ಮ ಕಾರ್ಯಕರ್ತರಿಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಗೋ ಹತ್ಯೆ ನೀವು ತಡೆಯದಿದ್ದರೆ ನಾವೇ ತಡಿಯಬೇಕಾಗುತ್ತದೆ ಎಂದು ಆಂದೋಲ ಶ್ರೀಗಳು ಎಚ್ಚರಿಕೆ ನೀಡಿದರು. ಅದ್ಧೂರಿಯಾಗಿ ನಡೆಯುವ ಹಿಂದೂ ಮಹಾಗಣಪತಿ ವಿಸರ್ಜನಾ ಸಮಾರಂಭಕ್ಕೆ ಆಗಮಿಸುವಂತೆ ಮಾಜಿ ಶಾಸಕರಿಗೆ ಹಲವು ಬಾರಿ ಫೋನ್‌ ಕರೆ ಮೂಲಕ ಅಹ್ವಾನಿಸಲಾಗಿತ್ತು. ಆದರೆ, ಅವರು ಅಧಿವೇಶನ ನಡೆಯುತ್ತಿರುವುದಾಗಿ ಹೇಳಿದರು. ವಿಧಾನಸಭಾ ಅಧಿವೇಶನದಲ್ಲಿ ಮಾಜಿ ಶಾಸಕರಿಗೆ ಏನು ಕೆಲಸ? ಅಧಿವೇಶನದಲ್ಲಿ ಭಾಗವಹಿಸುವ ಶಾಸಕ ಬಸವರಾಜ್‌ ಪಾಟೀಲ್‌ ಯತ್ನಾಳ್‌ ಅವರು ಬಂದಿದ್ದಾರೆ. ಇವರಿಗೆ ಅಧಿವೇಶನ ಇಲ್ಲವೇ? ಅವರಿಗೆ ಇಂತಹ ಸಮಾರಂಭಕ್ಕೆ ಬರುವ ಮನಸ್ಸಿಲ್ಲ. ಟಿಪ್ಪು ಜಯಂತಿಗೆ ಹೋಗುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.

PSI Recruitment Scam:ಪಿಎಸ್‌ಐ ಅಕ್ರಮ: ತುಮಕೂರು, ದಾವಣಗೆರೆ, ಮೂಡಬಿದಿರೆಗೂ ಲಿಂಕ್‌..!

ಶಿರವಾಳಗೌಡರ ಮನೆತನ ಕಳೆದ 40 ವರ್ಷಗಳಿಂದಲೂ ರಾಜಕೀಯದಲ್ಲಿ ಸಕ್ರಿಯವಾಗಿ ಮತ್ತು ಅಜಾತ ಶತ್ರುವಾಗಿ ಈ ಕ್ಷೇತ್ರದ ಬಗ್ಗೆ ಅಭಿವೃದ್ಧಿ ಮತ್ತು ಕಾಳಜಿಯೊಂದಿಗೆ ಕಾರ್ಯನಿರ್ವಹಿಸುತ್ತಾ, ಬಂದಿದೆ. ಈ ಕ್ಷೇತ್ರದ ಜನ ಅವರ ಮೇಲೆ ಅಪಾರವಾದ ನಂಬಿಕೆ ಮತ್ತು ವಿಶ್ವಾಸ ಇಟ್ಟಿದ್ದಾರೆ. ಆದರೆ, ಕೆಲ ಟಿಕೆಟ್‌ ಆಕಾಂಕ್ಷಿಗಳು ಹೇಗಾದರೂ ಮಾಡಿ ಎಂಎಲ್‌ಎ ಟಿಕೆಟ್‌ ಪಡೆಯಬೇಕೆಂಬ ಉದ್ದೇಶದಿಂದ ಹಿಂದುತ್ವ ಬಳಸಿಕೊಂಡು ಸಮಾರಂಭ ಮಾಡಿದರೆ ಸಾಲದು. ಜನರ ಮತ್ತು ಕಾರ್ಯಕರ್ತರ ವಿಶ್ವಾಸಗಳಿಸಬೇಕು ಅಂತ ಹೆಸರೇಳಲಿಚ್ಛಿಸದ ಬಿಜೆಪಿ ಹಿರಿಯ ಮುಖಂಡರು ತಿಳಿಸಿದ್ದಾರೆ. 

ಶಹಾಪುರ ನಗರದ ಸುಬೇದಾರ್‌ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದ್ದ ಹಿಂದೂ ಮಹಾಗಣಪತಿ ವಿಸರ್ಜನೆ ಶೋಭಾಯಾತ್ರೆ ಅದ್ಧೂರಿಯಾಗಿ ನಡೆಯಿತು. ಶಾಸಕ ಬಸವರಾಜ್‌ ಪಾಟೀಲ್‌ ಯತ್ನಾಳ್‌, ಆಂದೋಲ ಶ್ರೀ, ಚಂದ್ರಶೇಖರ ಸುಬೇದಾರ್‌ ಇದ್ದರು.
 

Follow Us:
Download App:
  • android
  • ios