Asianet Suvarna News Asianet Suvarna News

ಸಾಮೂಹಿಕ ರಾಜೀನಾಮೆಗೆ ಮುಂದಾದ ಬಿಜೆಪಿ ಮುಖಂಡರು

  • ಅಧ್ಯಕ್ಷರ ನೇಮಕಕ್ಕೆ ಹೊರಬಿತ್ತು ತೀವ್ರ ಅಸಮಾಧಾನ
  • ಸಾಮೂಹಿಕ ರಾಜೀನಾಮೆಗೆ ಮುಂದಾದ ಮುಖಂಡರು
BJP minority leaders Decide Over mass resignation in mysore snr
Author
Bengaluru, First Published Jul 9, 2021, 11:21 AM IST

 ಮೈಸೂರು (ಜು.09):  ವಕ್ಫ್ ಬೋರ್ಡ್‌ಗೆ ಕಾಂಗ್ರೆಸ್‌ ಕಾರ್ಯಕರ್ತನನ್ನು ಅಧ್ಯಕ್ಷರಾಗಿ ನೇಮಿಸಿರುವುದನ್ನು ಖಂಡಿಸಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಮತ್ತು ನಗರ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಪಕ್ಷದ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ಮೈಸೂರಿನ ಇಲ್ಯಾಸ್‌ ಅಹಮದ್‌ ಅವರನ್ನು ವಕ್ಫ್ ಬೋರ್ಡ್‌ ಅಧ್ಯಕ್ಷರಾಗಿ ನೇಮಿಸಿದ್ದರೂ ಯಾವ ಸೂಚನೆಯೂ ನೀಡದೆ ಮತ್ತೆ ಕಾಂಗ್ರೆಸ್‌ ಕಾರ್ಯಕರ್ತನನ್ನು ಹೊಸದಾಗಿ ಸರ್ಕಾರ ನೇಮಕ ಮಾಡಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.

ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯ ಹೊಸಮುಖಗಳು..! ..

ಮೈಸೂರು ನಗರ ಹಾಗೂ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪದಾಧಿಕಾರಿಗಳು ನಮ್ಮ ಪಕ್ಷ ಅಧಿಕಾರದಲ್ಲಿದ್ದು, ನಮ್ಮ ಪಕ್ಷದ ಅಭ್ಯರ್ಥಿಯನ್ನೇ ವಕ್ಫ್ ಬೋರ್ಡ್‌ ಅಧ್ಯಕ್ಷರಾಗಿ ಮುಂದುವರಿಸಬೇಕು. ಇಲ್ಲದಿದಲ್ಲಿ ಎಲ್ಲರೂ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬಿಜೆಪಿ ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ, ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎಲ್‌. ನಾಗೇಂದ್ರ, ಎಸ್‌.ಎ. ರಾಮದಾಸ್‌, ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಜಿಲ್ಲಾಧ್ಯಕ್ಷ ಇಲಿಯಾಜ್‌ ಅಹಮದ್‌, ಪದಾಧಿಕಾರಿಗಳಾದ ಎಂ.ಕೆ. ನಾಜೀರ್‌, ಸಂತೋಷ್‌ ಪಾಲ್‌, ನವೀದ್‌ ಅಹಮದ್‌, ಜೆ. ಸ್ಟೀಫನ್‌ ಸುಜಿತ್‌, ಸಿಕಂದರ್‌, ರೋಸ ಲಿನ ನೋಯೆಲ್, ಮಹಮ್ಮದ್‌ ಹನೀಫ್‌, ತನ್ವೀರ್‌ ಅಹಮದ್‌, ತಬರೇಜ್‌, ಫಾರೂಕ್‌ ಮಲಿಕ್‌, ಇಮ್ರಾನ್‌, ಉಸ್ಮಾನ್‌, ಇರ್ಫಾನ್‌ ಅಹಮದ್‌ ಇದ್ದರು.

Follow Us:
Download App:
  • android
  • ios