ರಾಜ್ಯದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಆಕಾಂಕ್ಷಿಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ.
ಮೈಸೂರು (ಸೆ.21): ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು 63ನೇ ವಾರ್ಡ್‌ನ ಬಿಜೆಪಿ ಉಸ್ತುವಾರಿ ಎಚ್.ಸಿ. ದೇವರಾಜೇಗೌಡ ಒತ್ತಾಯಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಪಕ್ಷದ ಶಿಸ್ತಿನ ಸಿಪಾಯಿಯಂತೆ ಕಾರ್ಯ ನಿರ್ವಹಿಸುತ್ತಿರುವ ರಾಮದಾಸ್ ಅವರು ಈ ಹಿಂದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೈಸೂರು ಭಾಗಕ್ಕೆ ಉತ್ತಮ ಕೆಲಸಗಳಿಗೆ ಒತ್ತು ನೀಡಿದ್ದಾರೆ. ಅಲ್ಪಸಂಖ್ಯಾತರು ಮತ್ತು ಬಡವ ದೀನ ದಲಿತರ ಪರವಾಗಿ ಕೆಲಸ ಮಾಡಿದ್ದು, ಕೆ.ಆರ್. ಕ್ಷೇತ್ರವನ್ನು ಕೊರೋನಾ ಮುಕ್ತವನ್ನಾಗಿಸಲು ಶ್ರಮಿಸಿದ್ದಾರೆ.
ರಾಜ್ಯದಲ್ಲಿ ಮಳೆಯಬ್ಬರ : ಸರ್ಕಾರದ ವಿರುದ್ಧ ಕೈ ಸಮರ ...
ಲಾಕ್‌ಡೌನ್ ಸಂದರ್ಭದಲ್ಲಿ 6 ರಿಂದ 7 ಸಾಇರ ಆಹಾರ ಪೊಟ್ಟಣ ನೀಡಿದ್ದಾರೆ. ಎಲ್ಲಾ ವರ್ಗದ ಜನರ ಪ್ರೀತಿ ಗಳಿಸಿರುವುದಾಗಿ ಅವರು ತಿಳಿಸಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ 25 ಸಾವಿರಕ್ಕೂ ಅಧಿಕ ಮತಗಳಿಸಿದ್ದಾರೆ. ಅವರನ್ನು ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವರನ್ನಾಗಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
