Asianet Suvarna News Asianet Suvarna News

ಬಿಜೆಪಿ ತೊರೆದು ಜೆಡಿಎಸ್ ಸೇರಿದ ಮುಖಂಡರು : 'ಇನ್ನೂ ಅನೇಕರು ಸಂಪರ್ಕದಲ್ಲಿ'

  • ಗ್ರಾಮಾಂತರ ಕ್ಷೇತ್ರವೂ ಸೇರಿದಂತೆ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲ ಮುಖಂಡರು ನನ್ನ ಜೊತೆ ಸಂಪರ್ಕದಲ್ಲಿ
  • ಶೀಘ್ರದಲ್ಲಿ ಜೆಡಿಎಸ್ ಸೇರಲಿದ್ದಾರೆ ಎಂದು ಜೆಡಿಎಸ್ ಶಾಸಕರೋರ್ವರಿಂದ ಸುಳಿವು 
BjP leaders joins JDS in Tumakuru snr
Author
Bengaluru, First Published Sep 13, 2021, 1:36 PM IST
  • Facebook
  • Twitter
  • Whatsapp

ತುಮಕೂರು (ಸೆ.13): ಗ್ರಾಮಾಂತರ ಕ್ಷೇತ್ರವೂ ಸೇರಿದಂತೆ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲ ಮುಖಂಡರು ನನ್ನ ಜೊತೆ ಸಂಪರ್ಕದಲ್ಲಿದ್ದು ಶೀಘ್ರದಲ್ಲಿ ಜೆಡಿಎಸ್ ಸೇರಲಿದ್ದಾರೆ ಎಂದು ಶಾಸಕ ಡಿಸಿ ಗೌರಿ ಶಂಕರ್ ತಿಳಿಸಿದರು. 

ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಜಿಪಂ ಮಾಜಿ ಸದಸ್ಯ ರಾಮಾಂಜಿನಪ್ಪ ತಾಲೂಕು ಪಂಚಾಯಿತಿ ಹಾಲಿ ಸದಸ್ಯ  ಪಿಎಲ್‌ಆರ್‌ ರಮೇಶ್, ಶಿವಣ್ಣ, ಕವಿತಾ ರಮೇಶ್, ಹಾಲಿ ಗ್ರಾಪಂ ಸದಸ್ಯರಾದ  ಕುಂಭಯ್ಯ,  ಹೊನ್ನೇಶ್ ಸೇರಿದಂತೆ ಅನೇಕರನ್ನು ಜೆಡಿಎಸ್  ಬಾವುಟ ನಿಡುವ ಮೂಲಕ ಸ್ವಾಗತಿಸಿದರು. 

ಎಚ್‌ಡಿಕೆಗೆ ನಾನು ಯಾರು ಗೊತ್ತಿಲ್ಲ, ಕಾಂಗ್ರೆಸ್‌ ಸೇರುವೆ ಎಂದ ಜೆಡಿಎಸ್ ಶಾಸಕ

ಈ ವೇಳೆ ಮಾತನಾಡಿದ ಶಾಸಕ  ತುಮಕೂರು ಗ್ರಾಮಾಂತರದಲ್ಲಿ ಬಿಜೆಪಿಯಲ್ಲಿ ಉಸಿರುಕಟ್ಟುವ  ವಾತಾವರಣದಿಂದ ಅನೇಕ ಮಂದಿ ಪಕ್ಷವನ್ನು ತೊರೆದು ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದಾರೆ  ಎಂದರು. 

ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕೊಟ್ಟ ಜನಪರ ಕಾರ್ಯ ಯೋಜನೆಗಳು ಮತ್ತು ನಮ್ಮ ಪಕ್ಷದ ಅಜೆಂಡಾ, ತತ್ವ ಸಿದ್ಧಾಂತರಗಳನ್ನು ಒಪ್ಪಿ ಇಂದು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದರು. 

ಗ್ರಾಮಾಂತರ ಕ್ಷೇತ್ರದಲ್ಲಿ  ಬಿಜೆಪಿಯಲ್ಲಿ ನಮಗೆ ಉಸಿರುಕಟ್ಟುವ  ವಾತಾವರಣವಿದೆ. ಆದ್ದರಿಂದ ಎಚ್ ಡಿ ದೇವೇಗೌಡರು ಮತ್ತು ಕುಮಾರಸ್ವಾಮಿಯರ  ಕೈ ಬಲಪಡಿಸಲು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾಗಿ ತಿಳಿಸಿದ್ದಾರೆ ಎಂದರು.

ಜಿಲ್ಲೆಯಲ್ಲಿ  ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸ್ಥಾನಗಳನ್ನು ಹೆಚ್ಚು ಗೆಲ್ಲಲು ಪಣ ತೊಡಲಾಗಿದೆ.   ಉಪ ಚುನಾವಣೆಯನ್ನು ಗೆಲ್ಲಬೇಕೆಂದು ಅನೇಕರು ಪಕ್ಷ ಸೇರುತ್ತಿದ್ದಾರೆಂದರು. 

Follow Us:
Download App:
  • android
  • ios