'ಆಡಳಿತರೂಢ ಬಿಜೆಪಿ ತ್ಯಜಿಸಿ, ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದು ಮತ್ತಷ್ಟು ಬಲ ಬಂದಿದೆ'

ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರ ಪಡೆದು ನೊಂದ, ಅಸಹಾಯಕರ ದ್ವನಿಯಾಗಿ ತಳ ಮಟ್ಟದಿಂದ ಪಕ್ಷ ಸಂಘಟನೆಯೊಂದಿಗೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತೇವೆ: ಬಸವರಾಜ ಬಂಕದ|

BJP Leaders Basavaraj Bankad Sharanappa Chalageri joined Congress Party in Gadag

ಗಜೇಂದ್ರಗಡ(ಮೇ.17): ಕ್ಷೇತ್ರದಲ್ಲಿ ಆಡಳಿತಾರೂಢ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ನ ತತ್ವ, ಸಿದ್ಧಾಂತ ಒಪ್ಪಿಕೊಂಡು ಜನರ ಸೇವೆಗಾಗಿ ಬಸವರಾಜ ಬಂಕದ ಹಾಗೂ ಶರಣಪ್ಪ ಚಳಗೇರಿ ಬಂದಿರುವುದು ಸ್ಥಳೀಯವಾಗಿ ಬಲ ಬಂದಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದ್ದಾರೆ. 

ಸಮೀಪದ ದಿಂಡೂರು ರಸ್ತೆಯಲ್ಲಿರುವ ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ ನಿವಾಸದಲ್ಲಿ ಶನಿವಾರ ಬಿಜೆಪಿ ಮುಖಂಡರಾದ ಬಸವರಾಜ ಬಂಕದ ಹಾಗೂ ಶರಣಪ್ಪ ಚಳಗೇರಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.

'ಪಕ್ಷದ ಕಾರ್ಯ ವೈಖರಿಯಿಂದ ಮನನೊಂದು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆ'

ಬದಲಾವಣೆ ಬಯಸಿದ್ದ ದೇಶದ ಜನತೆಗೆ ಕೇವಲ ಸುಳ್ಳು ಭರವಸೆಗಳ ನೀಡಿ ಜನರ ದಾರಿ ತಪ್ಪಿಸಿ ಅಧಿಕಾರಿ ಚುಕ್ಕಾಣಿ ಹಿಡಿದ ಪ್ರಧಾನಿ ಮೋದಿ ಅವರು ಇಂದಿಗೂ ಸಹ ಹೇಳಿದ ಉದ್ಯೋಗ ಸೃಷ್ಠಿ, ವಿದೇಶದಲ್ಲಿನ ಕಪ್ಪು ಹಣ ವಾಪಸ್ ಹಾಗೂ ಸ್ಮಾರ್ಟ್ ಸಿಟಿ ನಿರ್ಮಾಣ ಸೇರಿ ಯಾವುದೇ ಭರವಸೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ. ಪರಿಣಾಮ ಮೋದಿ ಸರ್ಕಾರವೆಂದರೆ ಕೇವಲ ಮಾತಿನ ಸರ್ಕಾರ ಎಂದು ದೇಶದ ಜನತೆಗೆ ಈಗಾಗಲೇ ತಿಳಿದಿದೆ ಎಂದರು.

BJP Leaders Basavaraj Bankad Sharanappa Chalageri joined Congress Party in Gadag

ಮುಖಂಡ ಬಸವರಾಜ ಬಂಕದ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ ತಾಲೂಕಿನಲ್ಲಿ ಕಳಕಪ್ಪ ಬಂಡಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಲು ಶ್ರಮಿಸಿದ್ದೆವು. ಆದರೆ ನಮ್ಮ ಸ್ವಾಭಿಮಾನ ಹಾಗೂ ಗೌರವಕ್ಕೆ ಧಕ್ಕೆ ಬಂದಿದ್ದರಿಂದ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದಿದ್ದೇವೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರ ಪಡೆದು ನೊಂದ, ಅಸಹಾಯಕರ ದ್ವನಿಯಾಗಿ ತಳ ಮಟ್ಟದಿಂದ ಪಕ್ಷ ಸಂಘಟನೆಯೊಂದಿಗೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತೇವೆ ಎಂದರು.

ಲಾಕ್‌ಡೌನ್ ಹಿನ್ನಲೆಯಲ್ಲಿ ಯಾವುದೇ ಸಭೆ, ಸಮಾರಂಭ ಹಾಗೂ ಕಾರ್ಯಕ್ರಮಗಳಿಗೆ ಜಿಲ್ಲೆಯಲ್ಲಿ ನಡೆಸುವಂತಿಲ್ಲ. ಆದರೆ ಬಿಜೆಪಿ ತೊರೆದು ಬಂದ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಸಭೆಯನ್ನು ಶನಿವಾರ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ ಅವರು ನಡೆಸುವ ಮೂಲಕ  ಲಾಕ್‌ಡೌನ್ ನಿಮಯ ಉಲ್ಲಂಘಿಸಿದ್ದು ಎಷ್ಟು ಸರಿ ಎನ್ನುವ ಪ್ರಜ್ಞಾವಂತ ನಾಗರಿಕರ ಪ್ರಶ್ನೆಗೆ ಉತ್ತವಿಲ್ಲದಂತಾಗಿದೆ ಎಂದು ಹೇಳಿದ್ದಾರೆ.

ತಾ.ಪಂ ಸದಸ್ಯ ಶಶಿಧರ ಹೂಗಾರ, ಪುರಸಭೆ ಸದಸ್ಯರಾದ ಶಿವರಾಜ ಘೋರ್ಫಡೆ, ರಾಜು ಸಾಂಗ್ಲೀಕರ, ವೆಂಕಟೇಶ ಮುದಗಲ್, ಮುರ್ತುಜಾ ಡಾಲಯತ, ಮಿಥುನ ಪಾಟೀಲ ಹಾಗೂ ಅಶೋಕ ಬಾಗಮಾರ, ಎಚ್.ಎಸ್.ಸೋಂಪುರ, ಶ್ರೀಧರ ಬಿದರಳ್ಳಿ, ಅರ್ಜುನ ರಾಠೋಡ, ಇಮಾಮಸಾಬ ಬಾಗವಾನ, ಬಿ.ಎಸ್.ಶೀಲವಂತರ,  ಅನೀಲ ಕರ್ಣೇ ಇತರರು ಇದ್ದರು.
 

Latest Videos
Follow Us:
Download App:
  • android
  • ios